Home
ಸುದ್ದಿಜಾಲ

ಜಿಯೋದ ಈ ಮೂರು ಪ್ಲ್ಯಾನ್‌ಗಳಲ್ಲಿ ಭರ್ಜರಿ ಕೊಡುಗೆ; ಸಿಗುತ್ತೆ 84GB ಡೇಟಾ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಯಿಸಿದೆ ತನ್ನ ಗ್ರಾಹಕರಿಗೆ ಖುಷಿ ನೀಡಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿಯೂ ತನ್ನ ಚಂದಾದಾರರಿಗೆ ಹಲವು ಅನುಕೂಲಕರ ಯೋಜನೆಗಳನ್ನು ನೀಡಿದೆ. ಇದೀಗ ಜಿಯೋ ತನ್ನ ಎಲ್ಲಾ ವರ್ಗದ ಗ್ರಾಹಕರಿಗೂ ನೆರವಾಗುವಂತಹ ಮೂರು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ.

ರಿಲಾಯನ್ಸ್‌ ಜಿಯೋ

ಹೌದು, ರಿಲಾಯನ್ಸ್‌ ಜಿಯೋ ಇದೀಗ 28 ದಿನಗಳ ವ್ಯಾಲಿಡಿಟಿ ಸೌಲಭ್ಯದ ಮೂರು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಅವುಗಳು 199ರೂ, 249ರೂ ಮತ್ತು 349ರೂ ಪ್ರೈಸ್‌ಟ್ಯಾಗ್‌ ಹೊಂದಿವೆ. ಇನ್ನು ಈ ಯೋಜನೆಗಳು ಅಧಿಕ ಡೇಟಾ, ಉಚಿತ ವಾಯಿಸ್ ಕರೆ, ಉಚಿತ ಎಸ್‌ಎಮ್‌ಎಸ್‌ ಹಾಗೂ ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ಜಿಯೋದ ಈ ಮೂರು ಪ್ಲ್ಯಾನ್‌ಗಳ ಕಂಪ್ಲೀಟ್‌ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಜಿಯೋ ರೂ.349 ಪ್ರಿಪೇಯ್ಡ್ ಪ್ಲ್ಯಾನ್

ಜಿಯೋ ರೂ.349 ಪ್ರಿಪೇಯ್ಡ್ ಪ್ಲ್ಯಾನ್

ರಿಲಯನ್ಸ್ ಜಿಯೋ 349ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 3GB ಹೈಸ್ಪೀಡ್ ಡೇಟಾ ಲಭ್ಯವಾಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ನಿಗದಿತ ಡೇಟಾ ಖಾಲಿಯಾದ ನಂತರ, 64kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ ಹಾಗೂ ಪ್ರತಿದಿನ 100 SMSಗಳ ಪ್ರಯೋಜನ. ಇದರೊಂದಿಗೆ ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟವರ್ಕ್‌ಗಳಿಗೆ 1000 ನಿಮಿಷ ಕರೆ ಮಿತಿ ಸೌಲಭ್ಯ ದೊರೆಯಲಿದೆ. ಜೊತೆಗೆ ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯು ಸಿಗಲಿದೆ.

ಜಿಯೋ 249ರೂ. ಪ್ರಿಪೇಯ್ಡ್ ಪ್ಲ್ಯಾನ್

ಜಿಯೋ 249ರೂ. ಪ್ರಿಪೇಯ್ಡ್ ಪ್ಲ್ಯಾನ್

ಪ್ರತಿದಿನ 3GB ಡೇಟಾ ಅನಗತ್ಯ ಎನ್ನುವವರಿಗೆ ಈ ಜಿಯೋ 249ರೂ. ಪ್ರೀಪೇಯ್ಡ್‌ ಯೋಜನೆ ಸೂಕ್ತ. ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಹೈಸ್ಪೀಡ್ ಡೇಟಾ ಲಭ್ಯವಾಗಲಿದ್ದು, ಈ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ನಿಗದಿತ ಡೇಟಾ ಖಾಲಿಯಾದ ನಂತರ, 64kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ ಹಾಗೂ ಪ್ರತಿದಿನ 100 SMSಗಳ ಪ್ರಯೋಜನ. ಇದರೊಂದಿಗೆ ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟವರ್ಕ್‌ಗಳಿಗೆ 1000 ನಿಮಿಷ ಕರೆ ಮಿತಿ ಸೌಲಭ್ಯ ದೊರೆಯಲಿದೆ. ಜೊತೆಗೆ ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯು ಸಿಗಲಿದೆ.

ಜಿಯೋ 199ರೂ. ಪ್ರಿಪೇಯ್ಡ್ ಪ್ಲ್ಯಾನ್

ಜಿಯೋ 199ರೂ. ಪ್ರಿಪೇಯ್ಡ್ ಪ್ಲ್ಯಾನ್

ಬಜೆಟ್ ಪ್ರೈಸ್‌ನಲ್ಲಿ ಬೆಸ್ಟ್‌ ಪ್ಲ್ಯಾನ್ ಬೇಕೆನ್ನುವವರಿಗೆ ಜಿಯೋ 199ರೂ.ಪ್ರೀಪೇಯ್ಡ್‌ ಹೆಚ್ಚು ಉಪಯುಕ್ತ ಅನಿಸಲಿದೆ. ಈ ಯೋಜನೆಯಲ್ಲಿ ಪ್ರತಿದಿನ 1.5GB ಹೈಸ್ಪೀಡ್ ಡೇಟಾ ಲಭ್ಯವಾಗಲಿದ್ದು, ಈ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ನಿಗದಿತ ಡೇಟಾ ಖಾಲಿಯಾದ ನಂತರ, 64kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ ಹಾಗೂ ಪ್ರತಿದಿನ 100 SMSಗಳ ಪ್ರಯೋಜನ. ಇದರೊಂದಿಗೆ ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟವರ್ಕ್‌ಗಳಿಗೆ 1000 ನಿಮಿಷ ಕರೆ ಮಿತಿ ಸೌಲಭ್ಯ ದೊರೆಯಲಿದೆ. ಜೊತೆಗೆ ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯು ಸಿಗಲಿದೆ.

Best Mobiles in India

English summary
Jio is offering a total of three plans with a validity of 28 days and all of them come with daily data benefit, unlimited calling facility and 100 SMS’s per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+