Home
ಸುದ್ದಿಜಾಲ

ಜಿಯೋ 10ರೂ. ಪ್ಲ್ಯಾನ್‌ ರೀಚಾರ್ಜ್‌ನಲ್ಲಿ ಡೇಟಾ ಮತ್ತು ಟಾಕ್‌ಟೈಮ್ ಆಫರ್!

ಕಳೆದ ವರ್ಷ ದೇಶದ ಟೆಲಿಕಾಂ ವಲಯದಲ್ಲಿ ಭಾರಿ ಬದಲಾವಣೆಗಳು ನಡೆದಿದ್ದು, ರಿಲಾಯನ್ಸ್ ಜಿಯೋ ಟೆಲಿಕಾಂ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರವನ್ನು ನಿಗದಿ ಮಾಡಿದೆ. ಅದರಿಂದ ಗ್ರಾಹಕರಿಗೆ ಹೊರೆ ಆಗಬಾರದೆಂದು ಕಳೆದ ಅಕ್ಟೋಬರ್‌ನಲ್ಲಿ ಅಗ್ಗದ ದರದಲ್ಲಿ IUC ಟಾಪ್‌ ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಕೇವಲ 10ರೂ.ದಿಂದ ಆರಂಭಿಕ IUC ಟಾಪ್‌ ಅಪ್‌ ಪ್ಲ್ಯಾನ್‌ ಇದ್ದು, ಹೆಚ್ಚಿನ ಪ್ರಯೋಜನ ಒದಗಿಸಲಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಸಂಸ್ಥೆಯು IUC ಟಾಪ್‌ ಅಪ್‌ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಒಟ್ಟು ಆರು ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಕನಿಷ್ಠ 10ರೂ.ದಿಂದ ಗರಿಷ್ಠ 1,000ರೂ. ಬೆಲೆಯ ವರೆಗೂ ಪ್ಲ್ಯಾನ್ ಹೊಂದಿದೆ. ಅಷ್ಟಕ್ಕೂ ಈ IUC ಟಾಪ್‌ ಅಪ್‌ ಪ್ಲ್ಯಾನ್‌ಗಳು ಬಳಕೆದಾರರ ದೀರ್ಘಾವಧಿಯ ಪ್ಲ್ಯಾನ್‌ಗಳ ವ್ಯಾಲಿಡಿಟಿ ಇದ್ದು, ಪ್ರಯೋಜನಗಳು ಮುಗಿದ ಬಳಿಕ ನೆರವಿಗೆ ಬರಲಿವೆ. ಈ ಪ್ಲ್ಯಾನ್‌ಗಳಲ್ಲಿ ಎಂಡ್ರಿ ಲೆವೆಲ್‌ನ 10ರೂ. ಟಾಪ್‌ ಅಪ್‌ ಪ್ಲ್ಯಾನ್ ಬಜೆಟ್‌ ಪ್ರೈಡ್ಲಿ ಇದ್ದು, ಸೌಲಭ್ಯಗಳಲ್ಲಿ ಬಿಗ್‌ಬಾಸ್‌ ಅನಿಸಿಕೊಂಡಿದೆ. ಜಿಯೋದ IUC ಟಾಪ್‌ ಅಪ್‌ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

IUC ಟಾಪ್‌-ಅಪ್‌ ರೀಚಾರ್ಜ್

IUC ಟಾಪ್‌-ಅಪ್‌ ರೀಚಾರ್ಜ್

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಪ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

10ರೂ. ಮತ್ತು 20ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

10ರೂ. ಮತ್ತು 20ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

ಜಿಯೋದ ಆರಂಭಿಕ ಟಾಪ್‌ ಅಪ್‌ ಪ್ಲ್ಯಾನ್‌ಗಳಾಗಿರುವ ಮತ್ತು 20ರೂ. ಬೆಲೆ ಕಡಿಮೆ ಆದರೆ ಅಗತ್ಯ ಪ್ರಯೋಜನಗಳನ್ನು ಒದಗಿಸಲಿವೆ. 10ರೂ. ರೀಚಾರ್ಜ್‌ಗೆ 7.47ರೂ. ಟಾಕ್‌ಟೈಮ್ ಸೌಲಭ್ಯ ಇದ್ದು, ಜೊತೆಗೆ 1GB , 4Gಡೇಟಾ ಹಾಗೂ, 124 IUC ನಿಮಿಷಗಳ ಸೌಲಭ್ಯ ಸಿಗಲಿದೆ. ಅದೇ ರೀತಿ 20ರೂ. ಪ್ಲ್ಯಾನ್‌ ರೀಚಾರ್ಜ್‌ನಲ್ಲಿ 14.95ರೂ. ಟಾಕ್‌ಟೈಮ್, 249 IUC ಕರೆಯ ನಿಮಿಷಗಳು ಹಾಗೂ 2GB, 4G ಡೇಟಾ ಸಿಗುತ್ತದೆ.

50ರೂ. ಮತ್ತು 100ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

50ರೂ. ಮತ್ತು 100ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

ಜಿಯೋದ 50ರೂ. ಟಾಪ್‌ ಅಪ್‌ ಪ್ಲ್ಯಾನ್‌ ರೀಚಾರ್ಜ್‌ನಲ್ಲಿ 39.37ರೂ. ಟಾಕ್‌ಟೈಮ್ ಸೌಲಭ್ಯ ಇದ್ದು, ಜೊತೆಗೆ 5GB, 4Gಡೇಟಾ ಹಾಗೂ, 656 IUC ನಿಮಿಷಗಳ ಸೌಲಭ್ಯ ಸಿಗಲಿದೆ. ಅದೇ ರೀತಿ 100ರೂ. ಪ್ಲ್ಯಾನ್‌ ರೀಚಾರ್ಜ್‌ನಲ್ಲಿ 81.75ರೂ. ಟಾಕ್‌ಟೈಮ್, 1,362 IUC ಕರೆಯ ನಿಮಿಷಗಳು ಹಾಗೂ 10GB , 4G ಡೇಟಾ ಸಿಗುತ್ತದೆ.

500ರೂ. ಮತ್ತು 1000ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

500ರೂ. ಮತ್ತು 1000ರೂ. ಟಾಪ್‌ ಅಪ್‌ ಪ್ಲ್ಯಾನ್‌ಗಳು

ಜಿಯೋ 500ರೂ. ಟಾಪ್‌ ಅಪ್‌ ರೀಚಾರ್ಜ್‌ ಪ್ಲ್ಯಾನ್‌ 420.73 ರೂ. ಟಾಕ್‌ಟೈಮ್ ಸೌಲಭ್ಯ ಹೊಂದಿದ್ದು, ಜೊತೆಗೆ 50GB, 4Gಡೇಟಾ ಹಾಗೂ, 7,012 IUC ನಿಮಿಷಗಳ ಸೌಲಭ್ಯ ಸಿಗಲಿದೆ. ಅದೇ ರೀತಿ 1000ರೂ. ಪ್ಲ್ಯಾನ್‌ ರೀಚಾರ್ಜ್‌ನಲ್ಲಿ 844.46ರೂ. ಟಾಕ್‌ಟೈಮ್, 14,074 IUC ಕರೆಯ ನಿಮಿಷಗಳು ಹಾಗೂ 100GB , 4G ಡೇಟಾ ಸಿಗುತ್ತದೆ.

ಜಿಯೋ 4G ಡಾಟಾ ವೋಚರ್ಸ್‌

ಜಿಯೋ 4G ಡಾಟಾ ವೋಚರ್ಸ್‌

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

Best Mobiles in India

English summary
Jio Rs 10 IUC Top-Up, it offers a user Rs 7.47 talk time or 124 IUC minutes and 1GB of 4G data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+