ಜಿಯೋದ ಈ ಹೊಸ ವಾರ್ಷಿಕ ಪ್ಲ್ಯಾನಿನಲ್ಲಿ ಡೇಟಾ ಬಳಕೆಗೆ ಮಿತಿ ಇಲ್ಲ!
ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜಿಯೋ ಹೊಸದಾಗಿ ಫ್ರೀಡಂ ಪ್ರೀಪೇಯ್ಡ್ ಪ್ಲ್ಯಾನ್ ಅನಾವರಣ ಮಾಡಿದೆ. ಒಟ್ಟು ಐದು ಹೊಸ ಯೋಜನೆಗಳನ್ನು ಜಾರಿ ಮಾಡಿದ್ದು, ಮತ್ತೆ ಗ್ರಾಹಕರನ್ನು ಸೆಳೆದಿದೆ. ಈ ಐದು ಯೋಜನೆಗಳು ದೈನಂದಿನ ಡೇಟಾ ಮಿತಿ ಹೊಂದಿಲ್ಲ. ಹೀಗಾಗಿ ಹೆಚ್ಚು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಆಕರ್ಷಕ ಎನಿಸಿವೆ. ಆ ಪೈಕಿ ಹೊಸ 2397ರೂ. ವಾರ್ಷಿಕ ಯೋಜನೆಯು ಭಿನ್ನವಾಗಿ ಕಾಣಿಸುತ್ತದೆ.

ಹೌದು, ಜಿಯೋ ಫ್ರೀಡಂ ಯೋಜನೆಗಳು ತಡೆ ರಹಿತ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ. ಬಳಕೆದಾರರು ಕೆಲವೊಮ್ಮೆ ಅಧಿಕ ಡೇಟಾ ಬಳಕೆ ಮಾಡುತ್ತಾರೆ ಮತ್ತೆ ಕೆಲವೊಮ್ಮೆ ಕಡಿಮೆ ಡೇಟಾ ಬಳಕೆ ಮಾಡುತ್ತಾರೆ. ಇಂತ ವೇಳೆ ಫ್ರೀಡಂ ಯೋಜನೆಗಳು ಸಹಾಯಕ ಅನಿಸಲಿವೆ. ಜಿಯೋ ಟೆಲಿಕಾಂ ಫ್ರೀಡಂ ಪ್ಯಾಕ್‌ನಲ್ಲಿ ಪರಿಚಯಿಸಿರುವ 2397ರೂ. ಯೋಜನೆಯ ಪ್ರಯೋಜನಗಳೆನು ಹಾಗೂ ಇತರೆ ಜಿಯೋ ವಾರ್ಷಿಕ ಯೋಜನೆಗಳ ಪ್ರಯೋಜನಗಳೆನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 2397ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಹೊಸ 2397ರೂ. ಫ್ರೀಡಂ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಒಟ್ಟು 365GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಯೋಜನೆಯು ದೈನಂದಿನ ಡೇಟಾ ಮಿತಿಯನ್ನು ಹೊಂದಿಲ್ಲ, ಆದ್ದರಿಂದ ಬಳಕೆದಾರರು ಯಾವುದೇ ಮಿತಿಯಿಲ್ಲದೆ ಅಗತ್ಯವಿರುವ ಡೇಟಾವನ್ನು ಬಳಸುವುದು ಸೂಕ್ತವಾಗಿದೆ.

ಜಿಯೋ 2399ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಹೊಸ 2,399ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2121ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಇನ್ನು ಈ ಪ್ಲ್ಯಾನ್ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಜಿಯೋ 1299ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.ಹಾಗೆಯೇ ಈ ಪ್ಲ್ಯಾನಿನಲ್ಲಿ ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸಿಗುತ್ತವೆ. ಇದೊಂದು ವ್ಯಾಲಿಡಿಟಿ ಯೋಜನವಾಗಿದೆ.


Click it and Unblock the Notifications








