ಜಿಯೋ ಏರ್‌ಫೈಬರ್ ಲಾಂಚ್; ಇದರ ಇಂಟರ್ನೆಟ್ ಸ್ಪೀಡ್ ಹೇಗಿದೆ ಗೊತ್ತಾ?..ಬೆಲೆ ಎಷ್ಟು?
ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಇಂದು ತನ್ನ ಬಹುನಿರೀಕ್ಷಿತ ಜಿಯೋ ಏರ್ ಫೈಬರ್ (JioAirFiber) ಸೇವೆಯನ್ನು ಪ್ರಾರಂಭಿಸಿದೆ. ಜಿಯೋ ಸಂಸ್ಥೆಯು ಆರಂಭಿಕ ಹಂತವಾಗಿ ಎಂಟು ಪ್ರಮುಖ ಮೆಟ್ರೋ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಿದೆ.
ಜಿಯೋ ಏರ್ ಫೈಬರ್ (JioAirFiber) ವೈರ್‌ಲೆಸ್, ನೇರವಾದ, ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಪರಿಹಾರವಾಗಿದೆ. ಈ ಸೇವೆಯ ಮೂಲಕ ಗ್ರಾಹಕರು ಟಿವಿ, ವರ್ಕ್ ಫ್ರಮ್ ಹೋಮ್, ಆಫೀಸ್, ಡಿಜಿಟಲ್ ಎಂಟರ್ಟೈನಮೆಂಟ್ ಎಲ್ಲ ಸೇವೆಗಳನ್ನು ಒಂದೇ ಡಿವೈಸ್ ಮೂಲಕ ಪಡೆಯಬಹುದಾಗಿದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಏನಿದು ಜಿಯೋ ಏರ್ ಫೈಬರ್ ಸೇವೆ :
ಜಿಯೋ ಏರ್ ಫೈಬರ್ (JioAirFiber) ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸಂಪರ್ಕ ಆಗಿದೆ. ಯಾವುದೇ ತಂತಿಗಳಿಲ್ಲದೆ ಗಾಳಿಯ ಮೇಲೆ ಫೈಬರ್ ತರಹದ ವೇಗವನ್ನು ಒದಗಿಸುತ್ತದೆ. ಬಳಕೆದಾರರು ಅದನ್ನು ಪ್ಲಗ್ ಇನ್ ಮಾಡಬೇಕು ಅಷ್ಟೆ. ಬಳಿಕ ಮನೆಯಲ್ಲಿ ಟ್ರೂ 5G ಬಳಸಿಕೊಂಡು ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ. ಇದನ್ನು ಬಳಕೆದಾರರು ಮನೆ ಅಥವಾ ಕಛೇರಿಯಲ್ಲಿ ಬಳಕೆ ಮಾಡಬಹುದು.
ಜಿಯೋ ಏರ್ ಫೈಬರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ, ''ನಮ್ಮ ವ್ಯಾಪಕವಾದ ಫೈಬರ್-ಟು-ದಿ-ಹೋಮ್ ಸೇವೆ ಜಿಯೋಫೈಬರ್, ಈಗಾಗಲೇ 10 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಪ್ರತಿ ತಿಂಗಳು ನೂರಾರು ಸಾವಿರಕ್ಕೂ ಹೆಚ್ಚು ಜನರು ಕನೆಕ್ಷನ್ ಪಡೆಯುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮನೆಗಳು ಮತ್ತು ಸಣ್ಣ ವ್ಯಾಪಾರಗಳು ತ್ವರಿತ ಗತಿಯಲ್ಲಿ ಸಂಪರ್ಕಗೊಳ್ಳಲಿವೆ ಎಂದರು.

ಜಿಯೋ ಏರ್ ಫೈಬರ್ ಪ್ಲ್ಯಾನ್ ಬೆಲೆ ಮಾಹಿತಿ ಇಲ್ಲಿದೆ :
- ಜಿಯೋ ಏರ್ ಫೈಬರ್ 30mpbs ಪ್ಲ್ಯಾನ್ ದರವು 599ರೂ ಆಗಿದೆ. ಇದು 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದ್ದು, ಜೊತೆಗೆ 14 ಆಪ್ಸ್ ಸೇವೆ ಪಡೆದಿದೆ.
- ಜಿಯೋ ಏರ್ ಫೈಬರ್ 100mpbs ಪ್ಲ್ಯಾನ್ ಬೆಲೆಯು 899ರೂ ಆಗಿದೆ. ಇದು 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದ್ದು, ಜೊತೆಗೆ 14 ಆಪ್ಸ್ ಸೇವೆ ಒಳಗೊಂಡಿದೆ. ಹಾಗೆಯೇ 1199ರೂ. ಯೋಜನೆಯು 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದ್ದು, ಜೊತೆಗೆ 14 ಆಪ್ಸ್ ಸೇವೆ ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.
- ಜಿಯೋ ಏರ್ ಫೈಬರ್ ಮ್ಯಾಕ್ಸ್ 300mpbs ಯೋಜನೆಯ ದರವು 1499ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದೆ. ಇದರೊಂದಿಗೆ 14 ಆಪ್ಸ್ ಸೇವೆ ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.
- ಜಿಯೋ ಏರ್ ಫೈಬರ್ ಮ್ಯಾಕ್ಸ್ 500mpbs ಯೋಜನೆಯ ಬೆಲೆಯು 2499ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದೆ. ಇದರೊಂದಿಗೆ 14 ಆಪ್ಸ್ ಸೇವೆ ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.
- ಜಿಯೋ ಏರ್ ಫೈಬರ್ ಮ್ಯಾಕ್ಸ್ 1000mpbs ಯೋಜನೆಯ ಬೆಲೆಯು 3999ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದೆ. ಇದರೊಂದಿಗೆ 14 ಆಪ್ಸ್ ಸೇವೆ ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.
ಜಿಯೋ ಏರ್ ಫೈಬರ್ 8 ನಗರಗಳಲ್ಲಿ ಲಭ್ಯ :
* ಬೆಂಗಳೂರು
* ಅಹಮದಾಬಾದ್
* ಚೆನ್ನೈ
* ದೆಹಲಿ
* ಹೈದರಾಬಾದ್
* ಕೋಲ್ಕತ್ತಾ
* ಮುಂಬೈ
* ಪುಣೆ


Click it and Unblock the Notifications








