Just In
- 1 hr ago Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- 3 hrs ago ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- 4 hrs ago Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- 18 hrs ago ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
Don't Miss
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಯೋದಿಂದ ಮತ್ತೆ 5 ಹೊಸ ಪ್ಲ್ಯಾನ್; ಉಚಿತ ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆ!
ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್ಸ್ಟಾರ್ ನಲ್ಲಿರುವ ಎಲ್ಲಾ ವಿಷಯಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯೋಜನೆ ಮತ್ತು ಕೊಡುಗೆಗಳನ್ನು ಪರಿಷ್ಕರಿಸುತ್ತಿರುವ ಜಿಯೋ, ಹಿಂದಿನದಕ್ಕಿಂತ ಹೆಚ್ಚಿ ವಿಷಯಗಳನ್ನು ನೋಡುವ ಅವಕಾಶವನ್ನು ಹೊಂದಿರುವ ಡಿಸ್ನಿ+ ಹಾಟ್ಸ್ಟಾರ್ನ 1 ವರ್ಷದ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ ಅನಿಯಮಿತ ಧ್ವನಿ, ಡೇಟಾ, ಎಸ್ಎಂಎಸ್, ಜಿಯೋ ಆಪ್ಗಳು ಮತ್ತು ಇತರ ಪ್ರಯೋಜನಗಳನ್ನು ನೀಡಲಿದೆ.
ಹಳೇ ಜಿಯೋ ಪ್ಲಾನ್ಗಳು:
ಮೊದಲು ಜಿಯೋ ತನ್ನ ಯೋಜನೆಗಳಲ್ಲಿ ಡಿಸ್ನಿ+ ಹಾಟ್ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡುತ್ತಿತ್ತು. ಈ ಚಂದಾದಾರಿಕೆಯಲ್ಲಿ ಲೈವ್ ಕ್ರೀಡೆಗಳು, ಹಾಟ್ ಸ್ಟಾರ್ ವಿಶೇಷಗಳು, ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಬಳಕೆದಾರರು ಪ್ರವೇಶವನ್ನು ಪಡೆಯುತ್ತಿದ್ದರು. ಇದರೊಂದಿಗೆ 3 ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲಾದ ವಿಷಯಗಳನ್ನು ನೋಡಬಹುದಾಗಿತ್ತು.
ಹೊಚ್ಚ ಹೊಸ ಯೋಜನೆಗಳು:
ಹೊಸ ಜಿಯೋ ಯೋಜನೆಗಳು ಡಿಸ್ನಿ+ ಹಾಟ್ಸ್ಟಾರ್ ನಲ್ಲಿರುವ ಎಲ್ಲಾ ಹೊಸ ವಿಷಯಗಳನ್ನು ನೋಡುವ ಅವಕಾಶ ನೀಡಲಿದೆ. ಡಿಸ್ನಿ+ ಓರಿಜಿನಲ್ಸ್, ಡಿಸ್ನಿ ಟಿವಿ ಶೋಗಳು ಸೇರಿದಂತೆ ಇಂಗ್ಲಿಷ್ ಭಾಷೆಯಲ್ಲಿ ಅಂತರಾಷ್ಟ್ರೀಯ ಕಂಟೆಂಟ್ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಇದರೊಂದಿಗೆ ಮಾರ್ವೆಲ್, ಸ್ಟಾರ್ ವಾರ್ಸ್, ನ್ಯಾಷನಲ್ ಜಿಯೋಗ್ರಾಫಿಕ್, HBO, FX, ಶೋಟೈಮ್ ಮತ್ತು ಇನ್ನಷ್ಟು ವಿಷಯಗಳಿಗೆ ಮುಕ್ತ ಪ್ರವೇಶವನ್ನು ನೀಡಲಿದೆ.
ಹೊಸ ಜಿಯೋ ಯೋಜನೆಗಳು ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ನೊಂದಿಗೆ:
ಪ್ಲಾನ್ 1 :ರೂ. 499
ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 3 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 499 ಪಾವತಿ ಮಾಡಬೇಕಾಗಿದೆ.
ಪ್ಲಾನ್ 2 :ರೂ. 666
ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 666 ಪಾವತಿ ಮಾಡಬೇಕಾಗಿದೆ.
ಪ್ಲಾನ್ 3 :ರೂ. 888
ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 888 ಪಾವತಿ ಮಾಡಬೇಕಾಗಿದೆ.
ಪ್ಲಾನ್ 4 :ರೂ. 2599 (ಒಂದು ವರ್ಷ ವ್ಯಾಲಿಡಿಟಿ)
ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 2599 ಪಾವತಿ ಮಾಡಬೇಕಾಗಿದೆ.
ಪ್ಲಾನ್ 5 :ರೂ. 549
ಈ ಪ್ಲಾನ್ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 1.5 GB ಡೇಟಾವನ್ನು ಪಡೆಯಲಿದ್ದಾರೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 549 ಪಾವತಿ ಮಾಡಬೇಕಾಗಿದೆ. (ಇದರಲ್ಲಿ ಉಚಿತ ಕರೆ ಸೌಲಭ್ಯವಿರುವುದಿಲ್ಲ)
ಈ ಹೊಸ ಪ್ಲಾನ್ ಗಳು 01ನೇ ಸೆಪ್ಟೆಂಬರ್ 2021 ರಿಂದ ಲಭ್ಯವಿರುತ್ತದೆ. ಸಕ್ರಿಯ ಡಿಸ್ನಿ+ ಹಾಟ್ಸ್ಟಾರ್ ಯೋಜನೆಗಳಲ್ಲಿರುವ ಎಲ್ಲಾ ಜಿಯೋ ಗ್ರಾಹಕರು ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಅವರ ಪ್ರಸ್ತುತ ಚಂದಾದಾರಿಕೆ ಅವಧಿ ಮುಗಿಯುವವರೆಗೆ ಆನಂದಿಸುವುದನ್ನು ಮುಂದುವರಿಸುತ್ತಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999