ರಾಮನಗರ, ಭದ್ರಾವತಿ ಸೇರಿ ದೇಶದ 27 ನಗರದಲ್ಲಿ ಜಿಯೋ ಟ್ರೂ 5G ಆರಂಭ!
ರಿಲಯನ್ಸ್ ಜಿಯೋ ಮಾರ್ಚ್ 8 ರಂದು ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿದಂತೆ ದೇಶಾದ್ಯಂತ 27 ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಣೆ ಮಾಡಿತು. ಇದರೊಂದಿಗೆ ಜಿಯೋ ರಾಮನಗರ, ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿಯಲ್ಲಿ ಮುಂದಿನ ಪೀಳಿಗೆಯ ಟ್ರೂ 5ಜಿ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಟೆಲಿಕಾಂ ಆಗಿದೆ.
ರಿಲಯನ್ಸ್ ಜಿಯೋದಿಂದ ಟ್ರೂ 5ಜಿ ಸೇವೆ ಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ: ತಾಡಿಪತ್ರಿ (ಆಂಧ್ರಪ್ರದೇಶ), ಭಟಪಾರ (ಛತ್ತೀಸ್‌ಗಢ), ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ), ಚಂಗನಾಗ್ (ಜಮ್ಮು ಮತ್ತು ಕಾಶ್ಮೀರ), ಮುವಾಟ್ಟುಪುಳ, ಕೊಡುಂಗಲ್ಲೂರು (ಕೇರಳ), ಕಟ್ನಿ ಮುರ್ವಾರ (ಮಧ್ಯಪ್ರದೇಶ), ಸತಾರಾ (ಮಹಾರಾಷ್ಟ್ರ).

ಪಠಾಣ್‌ಕೋಟ್ (ಪಂಜಾಬ್), ಪೊಲ್ಲಾಚಿ, ಕೋವಿಲ್‌ಪಟ್ಟಿ (ತಮಿಳುನಾಡು), ಸಿದ್ದಿಪೇಟ್, ಸಂಗಾರೆಡ್ಡಿ, ಜಗ್ತಿಯಾಲ್, ಕೊತಗುಡೆಂ, ಕೊಡಾಡ್, ತಾಂಡೂರ್, ಜಹೀರಾಬಾದ್, ನಿರ್ಮಲ್ (ತೆಲಂಗಾಣ), ರಾಂಪುರ (ಉತ್ತರ ಪ್ರದೇಶ), ಕಾಶಿಪುರ, ರಾಮನಗರ (ಉತ್ತರಾಖಂಡ) ಮತ್ತು ಬಂಕುರಾ (ಪಶ್ಚಿಮ ಬಂಗಾಳ)
ಅಂದಹಾಗೆ, ಈ ಮೇಲ್ಕಂಡ ನಗರಗಳ ಪೈಕಿ ಬಹುತೇಕ ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ. ಜಿಯೋ ಟ್ರೂ 5ಜಿ 1 ಜಿಬಿಪಿಎಸ್ ವರೆಗೆ ವೇಗದ ಇಂಟರ್ ನೆಟ್ ನೀಡುತ್ತದೆ. ಇದರ ಜತೆಗೆ ಹೈ-ಡೆಫಿನಿಷನ್ ಕಂಟೆಂಟ್ ತಡೆರಹಿತ ಸ್ಟ್ರೀಮಿಂಗ್, ಲೋ ಲೇಟೆನ್ಸಿ ಮತ್ತು ಸಂವಾದಾತ್ಮಕ ವೀಕ್ಷಣೆ ಹಾಗೂ ಕ್ಲೌಡ್ ಗೇಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಈ ನಗರಗಳ ಜನರು ಮತ್ತು ಉದ್ಯಮಕ್ಕೆ ಅನುಕೂಲವಾಗುತ್ತದೆ.

ತಂತ್ರಜ್ಞಾನವು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಆಗುಮೆಂಟೆಡ್ ರಿಯಾಲಿಟಿ (AR), ಮತ್ತು ವರ್ಚುವಲ್ ರಿಯಾಲಿಟಿ (VR) ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಭರವಸೆ ನೀಡುತ್ತದೆ, ಇದು ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ನವೀನ ಅಪ್ಲಿಕೇಷನ್‌ಗಳಿಗೆ ದಾರಿ ಮಾಡಿಕೊಡುತ್ತದೆ.
ಈ ಆರಂಭದ ಕುರಿತು ಮಾತನಾಡಿದ ಜಿಯೋ ವಕ್ತಾರರು, 'ಹೋಳಿ ಹಬ್ಬದ ಸಂದರ್ಭದಲ್ಲಿ, 13 ರಾಜ್ಯಗಳಾದ್ಯಂತ 27 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಇದರೊಂದಿಗೆ ದೇಶದಲ್ಲಿ 331 ನಗರಗಳಿಗೆ ಜಿಯೋ ಟ್ರೂ 5G ಸೇವೆಗಳ ಪ್ರಯೋಜನಗಳನ್ನು ಮತ್ತು ತಲುಪುವಿಕೆಯನ್ನು ಮುಟ್ಟುತ್ತದೆ.

ಜಿಯೋ 5G ಡೇಟಾ ಪ್ಲ್ಯಾನ್‌ಗಳ ಮಾಹಿತಿ
ಜಿಯೋ 5G ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239 ರೂ. ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯವಿಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5G ಅಪ್‌ಗ್ರೇಡ್ ಪ್ರಿಪೇಯ್ಡ್ ಯೋಜನೆಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61ರೂ. ಪ್ಲ್ಯಾನ್ ಆಗಿದ್ದು, ಇದು 6GB ಡೇಟಾ ಪ್ರಯೋಜನ ಪಡೆದಿದೆ.
ಗ್ರಾಹಕರು ತಮ್ಮ ಚಾಲ್ತಿ ಇರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ 61ರೂ. ಪ್ಲ್ಯಾನ್ ಸಕ್ರಿಯವಾಗಿರುತ್ತದೆ. ಜಿಯೋ 119ರೂ, ಜಿಯೋ 149ರೂ, ಜಿಯೋ 179ರೂ, ಜಿಯೋ 199ರೂ ಅಥವಾ ಜಿಯೋ 209ರೂ. ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರಿಗೆ ಈ 5G ಅಪ್‌ಗ್ರೇಡ್ ಡೇಟಾ ಪ್ಲಾನ್ ಕಾರ್ಯನಿರ್ವಹಿಸುತ್ತದೆ. ಆದರೆ, ಗ್ರಾಹಕರು ಜಿಯೋ 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸದಿದ್ದರೆ, ಈ ಪ್ಲ್ಯಾನ್ ಉಪಯುಕ್ತವಾಗದು.


Click it and Unblock the Notifications








