Home
ಸುದ್ದಿಜಾಲ

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿಯೂ ಈಗ ಜಿಯೋ 5G ಸೇವೆ ಲಭ್ಯ!

ದೇಶದ ಮುಂಚೂಣಿತ ಟೆಲಿಕಾಂ ಸಂಸ್ಥೆಯ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ (ಜನವರಿ 10 ರಂದು) ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಮಂಗಳೂರು, ಬೆಳಗಾವಿಯಲ್ಲಿ ತನ್ನ ಟ್ರೂ 5ಜಿ (Jio True 5G) ಸೇವೆಗಳಿಗೆ ಚಾಲನೆ ನೀಡಿತು. ಹಾಗೆಯೇ ಇತರ ರಾಜ್ಯಗಳ ಪ್ರಮುಖ ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆ ಘೋಷಿಸಿತು. ಅಂದಹಾಗೆ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿಯೂ ಈಗ ಜಿಯೋ 5G ಸೇವೆ ಲಭ್ಯ!

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಸೌಲಭ್ಯ ಪಡೆಯಲು ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ ಇರುವ ಜಿಯೋ ಬಳಕೆದಾರರನ್ನು ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಜಿಯೋ ವಕ್ತಾರರು, 'ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಗರದಲ್ಲಿ 5ಜಿ ಅನ್ನು ಹೊರತರಲು ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದ ನಂತರ ನಮ್ಮ ಅತಿದೊಡ್ಡ ಅನಾವರಣದಲ್ಲಿ ಇದೂ ಒಂದಾಗಿದೆ. ಜಿಯೋ ಟ್ರೂ 5ಜಿ (Jio True 5G) ತಂತ್ರಜ್ಞಾನ ರೂಪಾಂತರದ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿಯೂ ಈಗ ಜಿಯೋ 5G ಸೇವೆ ಲಭ್ಯ!

'ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ (Jio True 5G) ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ.

ಜನವರಿ 10 ರಿಂದ ಕರ್ನಾಟಕ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು), ಕೇರಳ (ಚೇರ್ತಲ), ತೆಲಂಗಾಣ (ವಾರಂಗಲ್, ಕರೀಂನಗರ), ಅಸ್ಸಾಂ (ಗುವಾಹತಿ) ಮತ್ತು ಮಹಾರಾಷ್ಟ್ರ (ಸೋಲಾಪುರ) 5 ರಾಜ್ಯಗಳ ಎಂಟು ನಗರಗಳಲ್ಲಿ ಜಿಯೋ ಬಳಕೆದಾರರನ್ನು ಆಹ್ವಾನಿಸಲಾಗುತ್ತದೆ. ಜಿಯೋ ವೆಲ್ಕಮ್ ಆಫರ್ ಮೂಲಕ ಗ್ರಾಹಕರು 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾ ಅನುಭವಿಸಬಹುದು.

ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿಯೂ ಈಗ ಜಿಯೋ 5G ಸೇವೆ ಲಭ್ಯ!

ಜಿಯೋ 5G ಡೇಟಾ ಪ್ಲ್ಯಾನ್‌ಗಳ ಮಾಹಿತಿ
ಜಿಯೋ 5G ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239 ರೂ. ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್‌ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯವಿಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5G ಅಪ್‌ಗ್ರೇಡ್‌ ಪ್ರಿಪೇಯ್ಡ್ ಯೋಜನೆಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61ರೂ. ಪ್ಲ್ಯಾನ್ ಆಗಿದ್ದು, ಇದು 6GB ಡೇಟಾ ಪ್ರಯೋಜನ ಪಡೆದಿದೆ.

ಗ್ರಾಹಕರು ತಮ್ಮ ಚಾಲ್ತಿ ಇರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ 61ರೂ. ಪ್ಲ್ಯಾನ್‌ ಸಕ್ರಿಯವಾಗಿರುತ್ತದೆ. ಜಿಯೋ 119ರೂ, ಜಿಯೋ 149ರೂ, ಜಿಯೋ 179ರೂ, ಜಿಯೋ 199ರೂ ಅಥವಾ ಜಿಯೋ 209ರೂ. ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್‌ ರೀಚಾರ್ಜ್ ಮಾಡಿರುವ ಗ್ರಾಹಕರಿಗೆ ಈ 5G ಅಪ್‌ಗ್ರೇಡ್‌ ಡೇಟಾ ಪ್ಲಾನ್ ಕಾರ್ಯನಿರ್ವಹಿಸುತ್ತದೆ. ಆದರೆ, ಗ್ರಾಹಕರು ಜಿಯೋ 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸದಿದ್ದರೆ, ಈ ಪ್ಲ್ಯಾನ್ ಉಪಯುಕ್ತವಾಗದು.

Best Mobiles in India

English summary
Jio launches 5G services in Mangaluru, Hubballi-Dharwad, Belagavi and 4 other cities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+