ವಿಶ್ವದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ: ಜಿಯೋ ಬಳಕೆದಾರರಿಗೆ ಅಂಬಾನಿ ಕೊಟ್ಟ ಗಿಫ್ಟ್...!
ಮಾರುಕಟ್ಟೆಗೆ ಹೊಸ ಸೇವೆಯನ್ನು ಪರಿಚಯಿಸುವುದರಲ್ಲಿ ಮುಂಚುಣಿಯಲ್ಲಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಜಿಯೋ ಇಂಟರಾಕ್ಟ್ ಎಂಬ ಹೊಸ ಸೇವೆಯೊಂದನ್ನು ಪರಿಚಯಿಸಿದ್ದಿ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಆಧರಿತ ಸೇವೆಯನ್ನುನೀಡುವ ವಿಡಿಯೋ ಫ್ಲಾಟ್‌ಪಾರ್ಮ್ ಆಗಲಿದೆ. ವಿಶ್ವದ ಮೊದಲ ಬ್ರಾಂಡ್-ಎಂಗೇಜ್‌ಮೆಂಟ್ ವಿಡಿಯೋ ವೇದಿಕೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ ಎನ್ನಲಾಗಿದೆ.

ಈ ಹೊಸ ಸೇವೆಯನ್ನು ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಸದ್ದು ಮಾಡುತ್ತಿರುವ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ಅಭಿನಯದ '102 ನಾಟ್ ಔಟ್' ಚಿತ್ರದ ಪ್ರಚಾರಕ್ಕೆ ಈ ವೇದಿಕೆ ಬಳಕೆಯಾಗಲಿದೆ ಎನ್ನಲಾಗಿದೆ.
ಓದಿರಿ: ಹಾಟ್‌ಸ್ಟಾರ್‌ನಲ್ಲಿ IPL ನೋಡುವವರಿಗೆ ಬೆಸ್ಟ್ ಪ್ಲಾನ್ ಇದು..!

'ಜಿಯೋಇಂಟರಾಕ್ಟ್':
ಕೃತಕ ಬುದ್ಧಿಮತ್ತೆ (ಎಐ) ಆಧರಿತ ವಿಶ್ವದ ಮೊದಲ ಬ್ರಾಂಡ್-ಎಂಗೇಜ್‌ಮೆಂಟ್ ವಿಡಿಯೋ ವೇದಿಕೆಯಾಗಿ 'ಜಿಯೋಇಂಟರಾಕ್ಟ್' ಅನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ಆರಂಭಿಸಿದೆ. ವರ್ಚುಯಲ್ ಶೋರೋಮ್, ವರ್ಚುಯಲ್ ಕೆಟಲಾಗ್, ವಿಡಿಯೋ ಇ-ಕಾಮರ್ಸ್ ಸೇರಿದಂತೆ ಅನೇಕ ಸಾಧ್ಯತೆಗಳಿಗಾಗಿ ವಿವಿಧ ಬ್ರಾಂಡ್‌ಗಳೊಡನೆ ಸಹಯೋಗವನ್ನು ಮಾಡಿಕೊಂಡಿದೆ.

ಮೊದಲ ಪ್ರಯತ್ನ:
ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ ಸೇವೆಗಳನ್ನು ಈ ಜಿಯೋಇಂಟರಾಕ್ಟ್ ಮೂಲಕ ಒದಗಿಸಲು ಜಿಯೋ ಮುಂದಾಗಿದ್ದು, ಇದರಲ್ಲಿ ಮೊದಲಿಗರಾದ ಬಾಲಿವುಡ್‌ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ತಮ್ಮ ಚಿತ್ರ '102 ನಾಟ್ ಔಟ್'ದ ಪ್ರಚಾರವನ್ನು ಅತ್ಯಂತ ವಿನೂತನ ರೀತಿಯಲ್ಲಿ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ವ್ಯಾಪ್ತಿ:
ಚಲನಚಿತ್ರ ಪ್ರಚಾರ ಹಾಗೂ ಬ್ರಾಂಡ್-ಎಂಗೇಜ್‌ಮೆಂಟ್ ಚಟುವಟಿಕೆಗಳ ಅತಿದೊಡ್ಡ ವೇದಿಕೆಯಾಗಿ ಬೆಳೆಯುವ ಗುರಿಯನ್ನು ಹೊಂದಿರುವ ಜಿಯೋಇಂಟರಾಕ್ಟ್, 186 ಮಿಲಿಯನ್ ಜಿಯೋ ಗ್ರಾಹಕರು ಹಾಗೂ ಇತರ 150 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪುವ ಶಕ್ತಿಯನ್ನು ಹೊಂದಿದೆ.

ವಿನೂತನ ಅನುಭವ:
ಮುಂದಿನ ಕೆಲ ವಾರಗಳಲ್ಲಿ ವಿಡಿಯೋ ಕಾಲ್ ಸೆಂಟರ್, ವಿಡಿಯೋ ಕೆಟಲಾಗ್ ಹಾಗೂ ವರ್ಚುಯಲ್ ಶೋರೂಮ್‌ನಂತಹ ಸೇವೆಗಳನ್ನು ಈ ವೇದಿಕೆಯಲ್ಲಿ ಪರಿಚಯಿಸಲಿರುವ ಜಿಯೋ, ಗ್ರಾಹಕರಿಗೆ ವಿನೂತನ ಅನುಭವ ಕಟ್ಟಿಕೊಡಲಿದೆ.

ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬಳಸಿಕೊಂಡು ಬ್ರಾಂಡ್‌ಗಳು ಹಾಗೂ ಗ್ರಾಹಕರ ನಡುವಿನ ಒಡನಾಟಕ್ಕೆ ಹೊಸ ಆಯಾಮ ನೀಡುತ್ತಿರುವುದೇ ಇದೇ ಮೊದಲು ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನ ತೋರಿಸಿಕೊಡಲಿದೆ ಎನ್ನಲಾಗಿದೆ.

ಮೇ 4 ರಿಂದ
ಈ ಸೌಲಭ್ಯ ಮೇ 4 ರಿಂದ ಲಭ್ಯವಿರಲಿದೆ ಎನ್ನಲಾಗಿದ್ದು, ಈ ಮೂಲಕ ಅಮಿತಾಭ್ ಹೊಸ ಚಿತ್ರ '102 ನಾಟ್ ಔಟ್' ಬಗ್ಗೆ ಪ್ರಶ್ನೆಗಳನ್ನು ಕೇಳುವುದಷ್ಟೇ ಅಲ್ಲದೆ ಬುಕ್ ಮೈ ಶೋ ಸಹಯೋಗದಲ್ಲಿ ಸಿನಿಮಾ ಟಿಕೇಟುಗಳನ್ನೂ ಕಾಯ್ದಿರಿಸಬಹುದಾಗಿದೆ.

ವಿಶಿಷ್ಟ ಸೇವೆ:
ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ಮೂಲಕ ಬಳಕೆದಾರರ ಪ್ರಶ್ನೆಗಳನ್ನು ಕೇಳಿಸಿಕೊಂಡು ಅವರಿಗೆ ಸಮರ್ಪಕ ಉತ್ತರಗಳನ್ನು ನೀಡುತ್ತದೆ ಇದು ವಿಶಿಷ್ಟ ಹಾಗೂ ವಿನೂತನವಾದ ಸೇವೆಯಾಗಿದೆ.


ಆಟೋ-ಲರ್ನಿಂಗ್
ಅಷ್ಟೇ ಅಲ್ಲದೆ, ಇದರಲ್ಲಿರುವ ಸ್ವಯಂ ಕಲಿಕೆಯ (ಆಟೋ-ಲರ್ನಿಂಗ್) ವ್ಯವಸ್ಥೆ ತಾನು ನೀಡುವ ಉತ್ತರಗಳ ನಿಖರತೆಯನ್ನು ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ.

ಮಶೀನ್ ಲರ್ನಿಂಗ್
ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸ್ವಯಂಕಲಿಕೆಯಂತಹ (ಮಶೀನ್ ಲರ್ನಿಂಗ್) ಹೊಸ ತಂತ್ರಜ್ಞಾನಗಳೊಡನೆ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಿಯೋಇಂಟರಾಕ್ಟ್ ಉದ್ದಿಮೆಗಳಿಗಾಗಿ ಬ್ರಾಂಡ್-ಎಂಗೇಜ್‌ಮೆಂಟ್‌ನ ವಿಶಿಷ್ಟ ಮಾರ್ಗವೊಂದನ್ನು ಒದಗಿಸಿದೆ.

ಹೊಸ ಸಾಧ್ಯತೆ:
VCBaaS (ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್) ಎಂದು ಗುರುತಿಸಲಾಗಿರುವ ಜಿಯೋಇಂಟರಾಕ್ಟ್ ವೇದಿಕೆಯು ಕೃತಕ ಬುದ್ಧಿಮತ್ತೆ ಹಾಗೂ ವೀಡಿಯೋ ಕಾಲ್ ತಂತ್ರಜ್ಞಾನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವ ಮೂಲಕ ಪರಿಣಾಮಕಾರಿ ಬ್ರಾಂಡ್-ಎಂಗೇಜ್‌ಮೆಂಟ್ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ.

ದೊಡ್ಡಪ್ರಮಾಣದಲ್ಲಿ ಪ್ರಯೋಜನ
ಉದ್ದಿಮೆಗಳು ಹಾಗೂ ಗ್ರಾಹಕರ ನಡುವಿನ ಸಂವಹನದಲ್ಲಿ (B2C) ಈ ತಂತ್ರಜ್ಞಾನ ದೊಡ್ಡಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವ ನಿರೀಕ್ಷೆಯಿದೆ. ಈ ವೇದಿಕೆಯನ್ನು ಬಳಸಿ ವರ್ಚುಯಲ್ ಶೋರೂಮ್, ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇ-ಕಾಮರ್ಸ್ ಆರ್ಡರಿಂಗ್ ಕಾರ್ಟ್‌ನಂತಹ ಅನ್ವಯಗಳನ್ನು ರೂಪಿಸುವ ಹೊಸ ಅವಕಾಶವೂ ತಂತ್ರಜ್ಞರಿಗೆ ದೊರಕಲಿದೆ.


Click it and Unblock the Notifications








