Home
ಸುದ್ದಿಜಾಲ

ಹಾಟ್‌ಸ್ಟಾರ್‌ನಲ್ಲಿ IPL ನೋಡುವವರಿಗೆ ಬೆಸ್ಟ್ ಪ್ಲಾನ್ ಇದು..!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಇದರೊಂದಿಗೆ IPL ಆರಂಭವಾಗಿರುವುದು ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಆಫರ್‌ಗಳನ್ನು ನೀಡಲು ಅವಕಾಶವನ್ನು ಮಾಡಿಕೊಟ್ಟಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಳಕೆದಾರರಿಗೆ ಹೆಚ್ಚಿನ ಡೇಟಾವನ್ನು ನೀಡುವ ಮೂಲಕ ತಮ್ಮ ಬಳಿಗೆ ಸೆಳೆಯುವ ಪ್ರಯತ್ನವನ್ನು ಟೆಲಿಕಾಂ ಕಂಪನಿಗಳು ಮಾಡುತ್ತಿವೆ, ಇದೇ ಮಾದರಿಯಲ್ಲಿ ವೊಡಾಫೋನ್ ತನ್ನ ಬಳಕೆದಾರಿಗೆ ಹೆಚ್ಚಿನ ಡೇಟಾವನ್ನು ನೀಡುವ ಆಫರ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

 ಹಾಟ್‌ಸ್ಟಾರ್‌ನಲ್ಲಿ IPL ನೋಡುವವರಿಗೆ ಬೆಸ್ಟ್ ಪ್ಲಾನ್ ಇದು..!

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಡೇಟಾ ಆಫರ್ ನೀಡುವ ಮೂಲಕ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಪ್ರಯತ್ನಕ್ಕೆ ಜಿಯೋ ಮತ್ತು ಏರ್‌ಟೆಲ್ ಮುಂದಾಗಿದ್ದು, ಇವುಗಳಿಗೆ ಸೆಡ್ಡು ಹೊಡೆಯುವಂತೆ ದಿನಕ್ಕೇ 3GB ಡೇಟಾವನ್ನು ನೀಡುವ ಆಫರ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಪ್ರಯತ್ನವನ್ನು ಮಾಡುತ್ತಿದೆ.

ಓದಿರಿ: ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ನೋಟ್ ಸ್ಮಾರ್ಟ್‌ಫೋನ್ ರೂ.8,999ಕ್ಕೆ...!

ದಿನಕ್ಕೇ ಮೂರು GB ಡೇಟಾ:

ದಿನಕ್ಕೇ ಮೂರು GB ಡೇಟಾ:

ಈಗಾಗಲೇ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿಯೇ IPL ನೋಡುತ್ತಿರುವ ಕಾರಣದಿಂದಾಗಿ ಹೆಚ್ಚಿನ ಡೇಟಾ ಆಫರ್ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ವೊಡಾಫೋನ್ ಹೊಸ ಆಫರ್‌ನಲ್ಲಿ ದಿನಕ್ಕೆ 3GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

ರೂ.349 ರಿಚಾರ್ಜ್:

ರೂ.349 ರಿಚಾರ್ಜ್:

ಬಳಕೆದಾರರು ರೂ.349 ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ವೊಡಾಫೋನ್ 28 ದಿನಗಳ ಅವಧಿಗೆ ನಿತ್ಯ 3GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರಿಗೆ ಹೆಚ್ಚಿನ ಲಾಭವಾಗಲಿದೆ. ಡೇಟಾದೊಂದಿಗೆ ಕರೆಯ ಲಾಭಗಳು ಇದರಲಿದೆ.

ಒಟ್ಟು 84GB ಡೇಟಾ:

ಒಟ್ಟು 84GB ಡೇಟಾ:

ರೂ.349 ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಬಳಕೆದಾರರಿಗೆ ನಿತ್ಯ 3GB ಡೇಟಾ 28 ದಿನಗಳ ಅವಧಿಗೆ ದೊರೆಯಲಿದ್ದು, ಒಟ್ಟು 84GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ವೊಡಾಪೋನ್ ಬೇರೆ ಯಾವುದೇ ಆಫರ್ ನಲ್ಲಿಯೂ ಇಷ್ಟು ಡೇಟಾವನ್ನು ನೀಡುತ್ತಿಲ್ಲ.

ಉಚಿತ ಕರೆ:

ಉಚಿತ ಕರೆ:

ಈ ಪ್ಲಾನ್‌ನಲ್ಲಿ ವೊಡಾಫೋನ್ ಬಳಕೆದಾರರಿಗೆ 28 ದಿನಗಳ ಅವಧಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಯಾವುದೇ ನಿರ್ಭಂದವನ್ನು ವಿಧಿಸಿಲ್ಲ. SMS ಮತ್ತು ರೋಮಿಂಗ್ ಸಹ ಉಚಿತವಾಗಿದೆ.

Karnataka Election 2018: Chunavana app will find your booth in click - GIZBOT KANNADA
ಜಿಯೋ ಆಫರ್:

ಜಿಯೋ ಆಫರ್:

ಇದೇ ಮಾದರಿಯಲ್ಲಿ ಜಿಯೋ ಸಹ ಆಫರ್ ನೀಡುತ್ತಿದ್ದು, ರೂ.299ಕ್ಕೆ ನಿತ್ಯ 3GB ಡೇಟಾವನ್ನು ನೀಡುತ್ತಿದೆ ಎನ್ನಲಾಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿದೆ ಎನ್ನಲಾಗಿದೆ.

Best Mobiles in India

English summary
Vodafone Rs 349 prepaid recharge plan now offers 3GB daily data, unlimited calls. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+