Jio: ಜಿಯೋದಿಂದ ಮತ್ತೊಂದು ಕ್ರಾಂತಿ! 1TB ಡೇಟಾ ನೀಡುವ ಹೊಸ ಪ್ಲ್ಯಾನ್ ಲಾಂಚ್! ಅದೂ ಇಷ್ಟೊಂದು ಕಡಿಮೆ ಬೆಲೆಗೆ
ಜಿಯೋ (Jio) ಆಗಾಗ್ಗೆ ವಿಶೇಷ ಪ್ರಯೋಜನಗಳನ್ನು ಘೋಷಣೆ ಮಾಡುವ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಜಿಯೋದ ಪ್ಲ್ಯಾನ್‌ಗಳು ಸಾಮಾನ್ಯವಾಗಿ ಕಡಿಮೆ ಇದ್ದು, ಹೆಚ್ಚಿನ ಸೌಲಭ್ಯ ನೀಡುವ ಕಾರಣಕ್ಕೆ ಜನರು ಸಹ ಈ ಕಡೆ ಹೆಚ್ಚಾಗಿ ಮುಖ ಮಾಡುತ್ತಾರೆ. ಆದರೆ, ಈಗ ಟೆಲಿಕಾಂ ವಲಯವೇ ತಲ್ಲಣವಾಗುವ ಹೊಸ ಪ್ಲ್ಯಾನ್ ಘೋಷಣೆ ಮಾಡಿದೆ.
ಹೌದು, ಟೆಲಿಕಾಂ ವಿಭಾಗದಲ್ಲಿ ಪ್ರಮುಖವಾದ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ಗೆ ತೀವ್ರ ಪೈಪೋಟಿ ನೀಡುವ ಜಿಯೋ ಇದೀಗ ಸದ್ದಿಲ್ಲದೆ ಹೊಸ ಪ್ಲ್ಯಾನ್ ಲಾಂಚ್ ಮಾಡಿದೆ. ಈ ವಿಶೇಷ ಪ್ಲ್ಯಾನ್‌ನಲ್ಲಿ ಬಳಕೆದಾರರು 1TB ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಪ್ಲ್ಯಾನ್‌ನ ಬೆಲೆ ಎಷ್ಟು?, ಯಾರಿಗೆಲ್ಲಾ ಲಭ್ಯ ಈ ವಿಶೇಷ ಪ್ಲ್ಯಾನ್ ಅನ್ನೋ ಅಗತ್ಯ ಮಾಹಿತಿ ಇಲ್ಲಿದೆ ನೋಡಿ.

ಜಿಯೋದಿಂದ ಹೊಸ ಪ್ಲ್ಯಾನ್: ಜಿಯೋ 5G FWA ಸೇವೆಯ ಅಡಿಯಲ್ಲಿ 401 ರೂ.ಗಳ ಬೆಲೆಯ ಹೊಸ ರೀಚಾರ್ಜ್ ಪ್ಲ್ಯಾನ್ (Recharge Plan) ಅನ್ನು ಪ್ರಾರಂಭಿಸಿದೆ. ಈ ಯೋಜನೆಯು ಬಳಕೆದಾರರಿಗೆ 1TB ಡೇಟಾ ಪ್ರಯೋಜನವನ್ನು ನೀಡುತ್ತದೆ. 1TB ಡೇಟಾದಿಂದ ಎಂದು ಕೇಳಿದೊಡನೆ ನೀವು ತಕ್ಷಣವೇ ಸಂತೋಷಪಟ್ಟಿರಬೇಕು. ಆದರೆ, ಇಲ್ಲಿ ಜಿಯೋ ಒಂದು ಬ್ರೇಕ್ ನೀಡಿದೆ. ಅದೇನೆಂದರೆ ಈ ಯೋಜನೆಯನ್ನು ಪಡೆಯಲು, ಬಳಕೆದಾರರು ಮೊದಲು ಜಿಯೋದ ಯಾವುದೇ ಮೂಲ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಿಕೊಂಡಿರಬೇಕು.
ಅಂದರೆ ಜಿಯೋದ ಏರ್‌ಫೈಬರ್ ಯೋಜನೆಗಳಾದ (Jio AirFiber plan) 599 ರೂ.ಗಳು, 899 ರೂ.ಗಳು ಮತ್ತು 1199 ರೂ.ಗಳು. ಅಥವಾ 1499 ರೂ.ಗಳು, 2499 ರೂ.ಗಳು ಮತ್ತು 3999 ರೂ.ಗಳ ಯಾವುದೇ ಜಿಯೋ ಏರ್‌ಫೈಬರ್ ಮ್ಯಾಕ್ಸ್ ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡಿರಬೇಕು. ಈ ಪ್ಲ್ಯಾನ್‌ಗಳು ಎಲ್ಲಾ ಜಿಯೋ ಏರ್‌ಫೈಬರ್ ಸೇವೆಗಳನ್ನು ಸಕ್ರಿಯ ಮೋಡ್‌ನಲ್ಲಿ ಇರಿಸುತ್ತವೆ.

ಜಿಯೋದ 1TB ಡೇಟಾ ಪ್ರಯೋಜನಗಳು: ಇನ್ನು ಜಿಯೋ ಹೊಸದಾಗಿ ಪರಿಚಯಿಸಿದ ಈ 401 ರೂ.ಗಳ ಪ್ಲ್ಯಾನ್ ನಿಮ್ಮ ಹೊಸ ಜಿಯೋ ಏರ್‌ಫೈಬರ್ ಸೇವೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುವುದಿಲ್ಲ. ಬದಲಾಗಿ ಈ ಪ್ಲ್ಯಾನ್ ಡೇಟಾ ಬೂಸ್ಟರ್‌ನಂತೆ ಮಾತ್ರ ಕೆಲಸ ಮಾಡುತ್ತದೆ. ಈ ಪ್ಲ್ಯಾನ್ ಒಂದು ಬಿಲ್ಲಿಂಗ್ ಚಕ್ರದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದು ನಿಮಗೆ ಗೊತ್ತಿರಲಿ.
ನೀವು ಹೊಸ ಬಿಲ್ ಅನ್ನು ರಚಿಸಿದಾಗ, ಅದರ ಮಾನ್ಯತೆ ಪೂರ್ಣಗೊಳ್ಳುತ್ತದೆ. ಈ ಅವಧಿಯಲ್ಲಿ ನಿಮ್ಮ ಬಳಿ ಬಳಕೆಯಾಗದೆ ಡೇಟಾ ಉಳಿದಿದ್ದರೆ, ಅದನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಯೋ ಮಾಹಿತಿ ನೀಡಿದೆ. ಈ ನಡುವೆ ನಿಮಗೆ ಮತ್ತೊಮ್ಮೆ ಹೆಚ್ಚಿನ ಡೇಟಾ ಬೇಕಾದರೆ 401 ರೂ.ಗಳ ಯೋಜನೆಯನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಇನ್ನು ಜಿಯೋ ಏರ್‌ಫೈಬರ್ ಸೇವೆಯು ಭಾರತದ 21 ರಾಜ್ಯಗಳಲ್ಲಿನ 494 ನಗರಗಳಲ್ಲಿ ಲಭ್ಯವಿದೆ. ಈ ವರ್ಷ 2023 ರ ಅಂತ್ಯದ ವೇಳೆಗೆ ಹೆಚ್ಚಿನ ನಗರಗಳಿಗೆ ಜಿಯೋ ಸೇವೆಯನ್ನು ವಿಸ್ತರಿಸುವುದಾಗಿ ಕಂಪನಿ ಮಾಹಿತಿ ನೀಡಿದೆ. ಈ ನಡುವೆ ನೀವೇನಾದರೂ ನಿಯೋ ಏರ್‌ಫೈಬರ್ ಸಂಪರ್ಕವನ್ನು ಬಯಸಿದ್ರೆ ಜಿಯೋ ಏರ್‌ಫೈಬರ್‌ನ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಅಥವಾ 60008-60008 ಗೆ ಕರೆ ಮಾಡುವ ಮೂಲಕ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್: ಈ ನಡುವೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಸಹ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಏರ್‌ಟೆಲ್ ತನ್ನ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಕೊಡುಗೆಯೊಂದಿಗೆ ಭಾರತದಲ್ಲಿ ತನ್ನ 5G ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಅನ್ನು ವಿಸ್ತರಣೆ ಮಾಡಿದೆ. ಇದು ಫೈಬರ್-ಡಾರ್ಕ್ ಪ್ರದೇಶಗಳಲ್ಲಿನ ಬಳಕೆದಾರರಿಗೆ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಫೈಬರ್ ತಲುಪಲು ಕಷ್ಟವಾಗಿರುವ ಪ್ರದೇಶಗಳಲ್ಲಿ ಇದು ಸಹಾಯಕವಾಗಿದೆ.

ಏರ್‌ಟೆಲ್ 100 Mbps ವೇಗ ಮತ್ತು ಅನಿಯಮಿತ ಡೇಟಾದೊಂದಿಗೆ ಕೇವಲ ಒಂದು ಪ್ಲ್ಯಾನ್ ಅನ್ನು ಮಾತ್ರ ನೀಡಿದೆ. ಆದರೆ ಜಿಯೋ ಅನಿಯಮಿತ ಡೇಟಾದೊಂದಿಗೆ 30 Mbps ನಿಂದ 1 Gbps ವರೆಗಿನ ಬಹು ವೇಗದ ಪ್ಲ್ಯಾನ್ ಆಯ್ಕೆಯನ್ನು ನೀಡಿದೆ. ಈ ಮೂಲಕ ನೀವು ಏರ್‌ಟೆಲ್ ಹಾಗೂ ಜಿಯೋ ನಡುವೆ ಯಾವುದು ಬೆಸ್ಟ್ ಅನ್ನೋದನ್ನು ಕಂಡುಕೊಳ್ಳಬಹುದಾಗಿದೆ.


Click it and Unblock the Notifications








