Jio: ಜಸ್ಟ್ 11ರೂ. ಬೆಲೆಯ ಹೊಸ ಪ್ಲ್ಯಾನ್ ಬಿಡುಗಡೆ; ಡೇಟಾ ಎಷ್ಟು ಗೊತ್ತಾ?
ಮುಂಚೂಣಿಯ ಟೆಲಿಕಾಂ ಎನಿಸಿಕೊಮಡಿರುವ ಜಿಯೋ (Jio) ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಮೂಲಕ ಈಗಾಗಲೇ ಬೇಡಿಕೆಯಲ್ಲಿ ಇದೆ. ಇದೀಗ ಜಿಯೋ ಸಂಸ್ಥೆಯು ಹೊಸದಾಗಿ 11ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯು ಡೇಟಾ ಪ್ರಿಯ ಗ್ರಾಹಕರು ಹುಬ್ಬೇಸುವಂತೆ ಮಾಡಿದೆ. ಇನ್ನು ಈ ಯೋಜನೆಯ ಡೇಟಾ ಸೌಲಭ್ಯ ತಿಳಿದ್ರೆ, ನೀವು ಶಾಕ್ ಆಗ್ತೀರಾ!
ಹೌದು, ರಿಲಯನ್ಸ್ ಜಿಯೋ ಟೆಲಿಕಾಂ ನೂತನವಾಗಿ 11 ರೂ. ಬೆಲೆಯ ಯೋಜನೆ ಲಾಂಚ್ ಮಾಡಿದೆ. ಈ ಯೋಜನೆಯು ಡೇಟಾ ಪ್ರಯೋಜನ ಒಳಗೊಂಡಿದ್ದು, ಅಗ್ಗದ ರೀಚಾರ್ಜ್ ಪ್ಲ್ಯಾನ್ ಆಗಿ ಗುರುತಿಸಿಕೊಂಡಿದೆ. ಈ ಪ್ಲ್ಯಾನ್ ದೇಶಾದ್ಯಂತ ಗ್ರಾಹಕರಿಗೆ ಲಭ್ಯವಿದ್ದು, ಈ ಯೋಜನೆಯು ಮುಖ್ಯವಾಗಿ ಜಿಯೋದ 4G ಡೇಟಾ ಸೇವೆ ಬಳಸುವ ಗ್ರಾಹಕರಿಗೆ ಹೆಚ್ಚು ಸೂಕ್ತವಾಗಿ ಕಾಣಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 11ರೂ. ರೀಚಾರ್ಜ್ ವೂಚರ್ ಮಾಹಿತಿ
ಜಿಯೋ (Jio) ಟೆಲಿಕಾಂ ಹೊಸದಾಗಿ ಬಿಡುಗಡೆ ಮಾಡಿರುವ 11 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯು ಸಂಪೂರ್ಣ ಡೇಟಾ ವೂಚರ್ ಆಗಿದ್ದು, ಇದು 10 GB ಡೇಟಾ ಪ್ರಯೋಜನ ಡೇಟಾ ಸೌಲಭ್ಯ ಒಳಗೊಂಡಿದೆ. ಆದರೆ ಈ ಯೋಜನೆಯು ಒಂದು ಗಂಟೆಯ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯು ದೈನಂದಿನ ಡೇಟಾ ಖಾಲಿ ಆದಾಗ, ಡೇಟಾ ಅಗತ್ಯ ಇರುವ ಬಳಕೆದಾರರಿಗೆ ಸೂಕ್ತ ಎನಿಸುತ್ತದೆ.
ಜಿಯೋ 1899ರೂ. ಪ್ರೀಪೇಯ್ಡ್ ಯೋಜನೆ ಮಾಹಿತಿ
ಜಿಯೋ (Jio) ಟೆಲಿಕಾಂನ 1899 ರೂ. ವ್ಯಾಲ್ಯೂ ರೀಚಾರ್ಜ್ ಪ್ರೀಪೇಯ್ಡ್ ಯೋಜನೆ ಆಗಿದ್ದು, ಇದು 336 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 24 GB ಡೇಟಾ ಪ್ರಯೋಜನಗಳು ಬಳಕೆದಾರರಿಗೆ ಲಭ್ಯವಾಗಲಿದ್ದು, ಜೊತೆಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ದೊರೆಯುತ್ತದೆ. ಅಲ್ಲದೇ ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.
ಜಿಯೋ 3599ರೂ. ಪ್ರೀಪೇಯ್ಡ್ ಪ್ಲ್ಯಾನ್
ಜಿಯೋ (Jio) ಟೆಲಿಕಾಂನ 3599ರೂ. ರೀಚಾರ್ಜ್ ಪ್ಲ್ಯಾನ್ ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಒಳಗೊಂಡಿದೆ. ಈ ಪ್ಲ್ಯಾನ್‌ಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಜೊತೆಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಕೂಡಾ ದೊರೆಯುತ್ತದೆ. ಹಾಗೆಯೇ ಈ ಯೋಜನೆಯ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಗ್ರಾಹಕರಿಗೆ 912.5 GB ಡೇಟಾ ಸೌಲಭ್ಯ ದೊರೆಯುತ್ತದೆ.
ಜಿಯೋ 3999ರೂ. ಪ್ರೀಪೇಯ್ಡ್ ಪ್ಲ್ಯಾನ್
ಜಿಯೋ (Jio) ಟೆಲಿಕಾಂನ 3999ರೂ. ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಇದು 365 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಒಳಗೊಂಡಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಜೊತೆಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ದೊರೆಯುತ್ತದೆ.
ಹಾಗೆಯೇ ಈ ರೀಚಾರ್ಜ್‌ನಲ್ಲಿ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಗ್ರಾಹಕರಿಗೆ 912.5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಹೆಚ್ಚುವರಿ ಯಾಗಿ ಫ್ಯಾನ್‌ಕೋಡ್ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.


Click it and Unblock the Notifications








