ಬಂಪರ್ ಆಫರ್.. ಜಿಯೋದ ಹೊಸ 5G ಪ್ಲಾನ್ ಬಿಡುಗಡೆ; 200 ರೂ.ಗಿಂತ ಕಡಿಮೆ!
ರಿಲಯನ್ಸ್ ಜಿಯೋ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದುವೇ, 198 ರೂಪಾಯಿಗಳ ಯೋಜನೆ. ಈ ಬೆಲೆಯೊಂದಿಗೆ, ಇದು ಕಂಪನಿಯಿಂದ ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಯೋಜನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಇದರಲ್ಲಿ ಅನಿಯಮಿತ 5G ಡೇಟಾ ಪ್ರವೇಶದ ಪ್ರಯೋಜನವನ್ನು ನೀಡಲಾಗುತ್ತಿದೆ. ಇದಲ್ಲದೆ, ಇದು ಗ್ರಾಹಕರಿಗೆ JioTV, JioCinema ಮತ್ತು JioCloudಗೆ ಚಂದಾದಾರಿಕೆಯನ್ನು ನೀಡುತ್ತದೆ. ಈ ಹೊಸ ಯೋಜನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
ಟೆಲಿಕಾಂ ಕ್ಷೇತ್ರದಲ್ಲಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಜೊತೆಗೆ ರಿಲಯನ್ಸ್ ಜಿಯೋ (Reliance Jio) ಸದಾ ಸ್ಪರ್ಧೆ ನೀಡುತ್ತಲೇ ಇರುತ್ತದೆ. ಹೆಚ್ಚಾಗಿ ತನ್ನ ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ತರಲು ಜಿಯೋ ಕಂಪನಿಯು ಪ್ರಯತ್ನಿಸುತ್ತದೆ. ಗ್ರಾಹಕರಿಗೆ ಕಾಲಕಾಲಕ್ಕೆ ಹೊಸ ಆಫರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದರೆ, ಜಿಯೋ ನಿಮಗಾಗಿ 198 ರೂಪಾಯಿಗಳ ಅಗ್ಗದ ರೀಚಾರ್ಜ್ ಯೋಜನೆಯನ್ನು ತಂದಿದೆ.

ಜಿಯೋದ 198 ರೂ.ಗಳ ಪ್ರಿಪೇಯ್ಡ್ ಯೋಜನೆ
ಜಿಯೋದ ಹೊಸ 198 ರೂ.ಗಳ ಪ್ರಿಪೇಯ್ಡ್ ಯೋಜನೆಯು 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಡಿಯಲ್ಲಿ, ನಿಮಗೆ ಅನ್‌ಲಿಮಿಟೆಡ್ ಕರೆ, ಪ್ರತಿದಿನ 100 ಎಸ್‌ಎಂಎಸ್ (SMS) ಮತ್ತು 2GB ಡೇಟಾವನ್ನು ನೀಡುತ್ತದೆ. ಇದರೊಂದಿಗೆ, ನೀವು ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆಯನ್ನು ಪಡೆಯಬಹುದು. ನೀವು ಈ ಯೋಜನೆಯನ್ನು ದೇಶದಲ್ಲಿ ಎಲ್ಲಿ ಬೇಕಾದರೂ ರೀಚಾರ್ಜ್ ಮಾಡಬಹುದು ಎಂದು ಕಂಪನ ಹೇಳಿದೆ.
198 ರೂ.ಗಳ ಹೊಸ ರೀಚಾರ್ಜ್ ಯೋಜನೆಯು ಕಂಪನಿಯು ನೀಡುವ ಅಗ್ಗದ ಯೋಜನೆ ಅಲ್ಲ ಎಂದು ಹೇಳಬಹುದು. ಈ ರೀಚಾರ್ಜ್‌ನ ಹೊರತಾಗಿ, ಕಂಪನಿಯು ತನ್ನ ಗ್ರಾಹಕರಿಗೆ 189 ರೂ.ಗಳ ಯೋಜನೆಯನ್ನು ಸಹ ನೀಡುತ್ತಿದೆ. ಇದು ಇದಕ್ಕಿಂತ ಹೆಚ್ಚು ಅಗ್ಗವಾಗಿದೆ. ಇದಲ್ಲದೆ, ಜಿಯೋ 199 ರೂ.ಗಳ ಯೋಜನೆಯನ್ನು ಪರಿಚಯಿಸಿದೆ. ವಿಶೇಷವೆಂದರೆ, 199 ರೂ.ಗಳ ಯೋಜನೆಯಲ್ಲಿ ನೀವು ಸ್ವಲ್ಪ ಹೆಚ್ಚು ವ್ಯಾಲಿಡಿಟಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಸುದ್ದಿ ಓದಿದ್ದೀರಾ?: Jio: ಉಚಿತ ನೆಟ್‌ಫ್ಲಿಕ್ಸ್, 5G ಇಂಟರ್ನೆಟ್, 84 ದಿನ ಕಿರಿಕಿರಿ ಇರಲ್ಲ! ಇದು ಅಗ್ಗದ ಯೋಜನೆ
ಜಿಯೋದ 189 ರೂ.ಗಳ ರೀಚಾರ್ಜ್ ಪ್ಲಾನ್
ಈ ರೀಚಾರ್ಜ್ ಯೋಜನೆಯು 189 ರೂ.ಗಳ ಬೆಲೆಯೊಂದಿಗೆ ಬರುತ್ತದೆ. ಇದು ಕಂಪನಿಯ ಅಗ್ಗದ ಯೋಜನೆಯಾಗಿದ್ದು, ಇದು ಅಗ್ಗವಾಗಿರುವುದರಿಂದ ಬಹಳಷ್ಟು ಗ್ರಾಹಕರನ್ನು ಹೆಚ್ಚು ಆಕರ್ಷಿಸಿದೆ. ಈ ಯೋಜನೆಯೊಂದಿಗೆ ಒಟ್ಟು 2 GB ಡೇಟಾ, ಅನಿಯಮಿತ ಕರೆ ಮತ್ತು 300 ಎಸ್‌ಎಂಎಸ್ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಜಿಯೋದ 199 ರೂ.ಗಳ ರೀಚಾರ್ಜ್ ಪ್ಲಾನ್
ಜಿಯೋದ ಈ ಅಗ್ಗದ ಯೋಜನೆಯು 199 ರೂ.ಗಳಿಗೆ ಲಭ್ಯವಿದೆ. ಈ ರೀಚಾರ್ಜ್ ಯೋಜನೆಯಲ್ಲಿ 1.5 GB ಡೇಟಾ ಲಭ್ಯವಿದೆ. ಈ ರೀಚಾರ್ಜ್‌ನಲ್ಲಿ, ಅನಿಯಮಿತ ಕರೆಯೊಂದಿಗೆ ಪ್ರತಿದಿನ 100 ಎಸ್ಎಂಎಸ್ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಅನ್ನು ಸಹ ನೀಡಲಾಗುತ್ತದೆ. ಈ ರೀಚಾರ್ಜ್ ಯೋಜನೆಯು 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಜಿಯೋದ 399 ರೂ.ಗಳ ರೀಚಾರ್ಜ್ ಪ್ಲಾನ್
ಜಿಯೋದ ಅಲ್ಪಾವಧಿಯ ಯೋಜನೆಗಳ ಪೈಕಿ 399 ರೂ. ರೀಚಾರ್ಜ್ ಪ್ಲಾನ್ ಸಹ ಒಂದಾಗಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಸಿಗಲಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ 70 GB ಡೇಟಾ ಲಭ್ಯವಿದೆ. ಇದರ ಜೊತೆಗೆ, ಅನ್‌ಲಿಮಿಟೆಡ್ ಕರೆ, ಪ್ರತಿನಿತ್ಯ 100 ಎಸ್ಎಂಎಸ್ ಸಹ ದೊರೆಯುತ್ತದೆ. ಜಿಯೋ ಸಿನಿಮಾ, ಜಿಯೋ ನ್ಯೂಸ್ ಅಪ್ಲಿಕೇಶನ್ ಸಹ ಲಭ್ಯವಿದೆ.


Click it and Unblock the Notifications








