Home
ಸುದ್ದಿಜಾಲ

ಜಿಯೋದಿಂದ ಎರಡು ಹೊಸ ಪ್ಲ್ಯಾನ್ ಲಾಂಚ್; IPL ಪ್ರಿಯರು ಫುಲ್ ಖುಷ್!

ಜಿಯೋ ಟೆಲಿಕಾಂ ಸಂಸ್ಥೆಯು ಹಲವು ಆಕರ್ಷಕ ಡೇಟಾ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಬಹುತೇಕ ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯಗಳನ್ನು ಪಡೆದಿವೆ. ಹಾಗೆಯೇ ಮತ್ತೆ ಕೆಲವು ಯೋಜನೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಜಿಯೋ ಈಗ ಮತ್ತೆ ಎರಡು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಜಿಯೋ

ಹೌದು, ರಿಲಾಯನ್ಸ್‌ ಜಿಯೋ ಇದೀಗ ಎರಡು ಹೊಸ ಪ್ಲ್ಯಾನ್ ಪರಿಚಯಿಸಿದೆ. ಈ ಹೊಸ ಯೋಜನೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಸದಸ್ಯತ್ವದ ಸೌಲಭ್ಯ ಪಡೆದಿದೆ. ಕ್ರಿಕೆಟ್‌ ಧನ್ ಧನಾ ಧನ್ ಕೊಡುಗೆ ನೀಡಿದ್ದು, IPL ಪ್ರಿಯರಿಗೆ ಭರ್ಜರಿ ಖುಷಿ ನೀಡಿದೆ. ಜಿಯೋದ ಆ ಎರಡು ಹೊಸ ಪ್ಲ್ಯಾನ್‌ಗಳು ಕ್ರಮವಾಗಿ 499ರೂ ಮತ್ತು 777ರೂ. ಬೆಲೆಯಲ್ಲಿವೆ. ಈ ಎರಡು ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

IPL-ಕ್ರಿಕೆಟ್‌ ಧನ್ ಧನಾ ಧನ್

IPL-ಕ್ರಿಕೆಟ್‌ ಧನ್ ಧನಾ ಧನ್

IPL ಮ್ಯಾಚ್‌ಗಳನ್ನು ವೀಕ್ಷಣೆ ಮಾಡಲು ಜಿಯೋ ಸಂಸ್ಥೆಯು ಕ್ರಿಕೆಟ್‌ ಧನ್ ಧನಾ ಧನ್ ಯೋಜನೆ ಪ್ರಕಟಿಸಿದೆ. ಈ ಕೊಡುಗೆಯು 499ರೂ ಮತ್ತು 777ರೂ. ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಹಾಗೆಯೇ ಈ ಎರಡು ಯೋಜನೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಸದಸ್ಯತ್ವದ ಪ್ರಯೋಜನೆಗಳನ್ನು ಪಡೆದಿದ್ದು, IPL ಮ್ಯಾಚ್‌ಗಳನ್ನು ನೋಡಬಹುದಾಗಿದೆ. ಅಂದಹಾಗೇ ಇದೇ ಸೆಪ್ಟೆಂಬರ್ 19ರಿಂದ IPL ಮ್ಯಾಚ್ ಶುರುವಾಗಲಿದೆ.

ಜಿಯೋ 499ರೂ.

ಜಿಯೋ 499ರೂ.

ಜಿಯೋ ಹೊಸದಾಗಿ ಪ್ರಾರಂಭಿಸಿದ 499ರೂ. ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಡೇಟಾ ಮುಗಿದ ಬಳಿಕ ಡೇಟಾ ವೇಗವನ್ನು 64kbpsಗೆ ಇಳಿಸಲಾಗುತ್ತದೆ. ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಯೋಜನೆಯು ಯಾವುದೇ ವಾಯಿಸ್ ಮತ್ತು ಎಸ್‌ಎಂಎಸ್ ಪ್ರಯೋಜನಗಳು ಸೌಲಭ್ಯ ಪಡೆದಿಲ್ಲ.

ಜಿಯೋ 777ರೂ.

ಜಿಯೋ 777ರೂ.

ಜಿಯೋದ ಹೊಸ 777ರೂ. ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಹೈಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆದಿದೆ. ಹಾಗೆಯೇ ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 131GB ಡೇಟಾಗೆ ಬರುತ್ತದೆ. ಹಾಗೆಯೇ ಜಿಯೋ-ಟು-ಜಿಯೋ ಅನಿಯಮಿತ ಕರೆಗಳು, ಹಾಗೂ ಜಿಯೋ ಟು ಇತರೆ ನೆಟವರ್ಕ್‌ ಕರೆಗಳಿಗೆ 3,000 ನಿಮಿಷಗಳ ಮಿತಿ ಸಿಗಲಿದೆ. ಹಾಗೂ ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಲಭ್ಯ.

Best Mobiles in India

English summary
Jio today added two new plans to its portfolio of plans with Disney+ Hotstar VIP subscription.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+