ಜಿಯೋದಿಂದ ಹೊಸ ಪ್ಲ್ಯಾನ್ ಲಾಂಚ್; ಒಟ್ಟು 15 OTT ಆಪ್ಸ್ ಲಭ್ಯ!
ದೇಶದ ಮುಂಚೂಣಿಯ ಟೆಲಿಕಾಂ ಎನಿಸಿರುವ ರಿಲಯನ್ಸ್ ಜಿಯೋ ತನ್ನ ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹಕರಿಗಾಗಿ ನೂತನ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದೆ. ಈ ನೂತನ ಯೋಜನೆಯು ಒಟಿಟಿ ಪ್ಲಾಟ್ ಫಾರ್ಮ್ ಗಳನ್ನು ಅತಿಹೆಚ್ಚು ಬಳಕೆ ಮಾಡುವವರಿಗೆ, ಇಷ್ಟ ಪಡುವವರಿಗೆ ಹೇಳಿಮಾಡಿಸಿದಂತ ಪ್ಲ್ಯಾನ್ ಆಗಿದ್ದು, ಈ ಪೋಸ್ಟ್ ಪೇಯ್ಡ್ ಒಟಿಟಿ ಸೌಲಭ್ಯ ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 15 ಪ್ರೀಮಿಯಂ ಒಟಿಟಿ ಆಪ್‌ಗಳು ಲಭ್ಯವಾಗಲಿವೆ.
ಹಾಗೆಯೇ ಇದರೊಂದಿಗೆ ಅನಿಯಮಿತ (ಅನ್ ಲಿಮಿಟೆಡ್) ಡೇಟಾ ಪ್ರಯೋಜನ ಸಹ ಲಭ್ಯವಾಗಲಿದೆ. ಇದರಿಂದಾಗಿ ಬಳಕೆದಾರರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್ ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಲು ಅವಕಾಶ ಇದೆ. ಇನ್ನು ಈ ಪ್ಲ್ಯಾನಿನ ತಿಂಗಳಿಗೆ ಶುಲ್ಕ 888ರೂ. ಗಳು ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಬಳಕೆದಾರರಿಗೆ ಲಭ್ಯವಿದೆ.

ಈ ನೂತನ ಪ್ಲ್ಯಾನಿನಲ್ಲಿ ಬಳಕೆದಾರರು 30 ಎಂಬಿಪಿಎಸ್ (Mbps) ವೇಗದ ಇಂಟರ್ನೆಟ್ ಸೌಲಭ್ಯ ಪಡೆಯುತ್ತಾರೆ. ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋಸಿನಿಮಾ ಪ್ರೀಮಿಯಂ ರೀತಿಯ 15 ಕ್ಕೂ ಅಧಿಕ ಜನಪ್ರಿಯ ಒಟಿಟಿ ಆಪ್‌ಗಳು ದೊರೆಯುತ್ತವೆ. ಈ ಆಪ್‌ನ ಸಬ್ ಸ್ಕ್ರಿಪ್ಷನ್ ಲಭ್ಯವಾಗುವುದು ಯೋಜನೆಯ ಜತೆಗೆ ಮಾತ್ರ.
ಇನ್ನು ಈ ಪ್ಲ್ಯಾನ್ ಅನ್ನು ಹೊಸ ಚಂದಾದಾರಷ್ಟೇ ಅಲ್ಲದೇ, 10 ಅಥವಾ 30 ಎಂಬಿಪಿಎಸ್ ಪ್ಲ್ಯಾನ್‌ಗಳನ್ನು ಈಗಾಗಲೇ ಬಳಕೆ ಮಾಡುತ್ತಿರುವ ಜಿಯೋದ ಬಳಕೆದಾರರು ಸಹ ಪಡೆಯಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, 888 ರೂ. ಗಳ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರತಿಯೊಬ್ಬರಿಗೂ ಲಭ್ಯ. ಇನ್ನು ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ನೂತನ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್ ಗ್ರೇಡ್ ಸಹ ಮಾಡಬಹುದು.
ಈ ಸಂಗತಿ ನಿಮಗೆ ತಿಳಿದಿರಲಿ. ಇತ್ತೀಚೆಗೆ ಘೋಷಣೆಯಾದ ಜಿಯೋ ಐಪಿಎಲ್ ಧನ್ ಧನಾ ಧನ್ ಆಫರ್ ಕೂಡ ಈ ಪ್ಲ್ಯಾನಿಗೆ ಅನ್ವಯಿಸುತ್ತದೆ. ಜಿಯೋಫೈಬರ್ ಅಥವಾ ಜಿಯೋ ಏರ್ ಫೈಬರ್ ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಕನೆಕ್ಷನ್‌ನಲ್ಲಿ ಐವತ್ತು ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್ ಮೇ 31, 2024ರ ವರೆಗೆ ಲಭ್ಯವಿರುತ್ತದೆ, ಜಿಯೋ ಡಿಡಿಡಿ (Jio Dhan Dhana Dhan) ಕೊಡುಗೆಯನ್ನು ವಿಶೇಷವಾಗಿ ಟಿ20 ಸೀಸನ್‌ಗಾಗಿ ಸಿದ್ಧ ಮಾಡಲಾಗಿದೆ.
ಜಿಯೋ ಕ್ರಿಕೆಟ್ ಪ್ಯಾಕ್ ಪ್ಲ್ಯಾನ್‌ಗಳು
ಜಿಯೋ ಸಂಸ್ಥೆಯ 667ರೂ. ರೀಚಾರ್ಜ್ ಪ್ಲ್ಯಾನ್ ಕ್ರಿಕೆಟ್ ಪ್ಯಾಕ್ ಆಗಿದ್ದು, ಮೊಬೈಲ್ ಮೂಲಕ ಮ್ಯಾಚ್ ವೀಕ್ಷಣೆ ಮಾಡುವವರಿಗೆ ಸೂಕ್ತ ಎನಿಸುತ್ತದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದ್ದು, ಹಾಗೆಯೇ ಒಟ್ಟು 150GB ಡೇಟಾ ಪ್ರಯೋಜನ ಹೊಂದಿದೆ. ಇತರೆ ಯಾವುದೇ ಪ್ರಯೋಜನ ಲಭ್ಯ ಇರುವುದಿಲ್ಲ.
ಹಾಗೆಯೇ ಜಿಯೋದ 444ರೂ. ರೀಚಾರ್ಜ್ ಪ್ಲ್ಯಾನ್ ಕೂಡಾ ಕ್ರಿಕೆಟ್ ಪ್ಯಾಕ್ ಆಗಿದ್ದು, ಮೊಬೈಲ್ ಮೂಲಕ ಮ್ಯಾಚ್ ವೀಕ್ಷಣೆ ಮಾಡುವ ಬಳಕೆದಾರರಿಗೆ ಬೆಸ್ಟ್ ಎನ್ನಬಹುದು. ಇನ್ನು ಈ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಒಟ್ಟು 100GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇನ್ನುಳಿದಂತೆ ಇತರೆ ಯಾವುದೇ ಪ್ರಯೋಜನ ಲಭ್ಯ ಇರುವುದಿಲ್ಲ.


Click it and Unblock the Notifications








