ವೇಗದ 5G ನೆಟ್‌ವರ್ಕ್‌ನಲ್ಲಿ ಮತ್ತೆ ರಿಲಯನ್ಸ್ ಜಿಯೋ ನಂಬರ್ ಒನ್!
ಬ್ರಾಡ್‌ಬ್ಯಾಂಡ್ ಸ್ಪೀಡ್ ಮತ್ತು ಮಾಪನ ಸಂಸ್ಥೆಯಾದ ಓಕ್ಲಾ ಸಂಸ್ಥೆಯು ವರದಿವೊಂದನ್ನು ಅನಾವರಣ ಮಾಡಿದೆ. ಅದರಲ್ಲಿ, ಭಾರತದಲ್ಲಿನ 5G ಕಾರ್ಯಕ್ಷಮತೆ ಮತ್ತು ಬಳಕೆದಾರರ ಅನುಭವದ ಕುರಿತು ಪ್ರಸ್ತಾವ ಮಾಡಿದ್ದು, ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ 5G ಪ್ರಾಬಲ್ಯದ ಸ್ಪರ್ಧೆಯಲ್ಲಿ ತುಂಬ ದೊಡ್ಡದಾಗಿ ಹೊರಹೊಮ್ಮಿದೆ ಎಂದು ಹೇಳಿದೆ.
ಜಿಯೋ ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೂರಸಂಪರ್ಕ ಇಲಾಖೆಯ ಪ್ರಕಾರ, ಫೆಬ್ರವರಿ 29, 2024 ರ ಹೊತ್ತಿಗೆ ಭಾರತದಲ್ಲಿ 4.25 ಲಕ್ಷ ಬಿಟಿಎಸ್ (ಬೇಸ್ ಟ್ರಾನ್ಸ್ ರಿಸೀವರ್ ಸ್ಟೇಷನ್) ಅನ್ನು ಸ್ಥಾಪಿಸಲಾಗಿದೆ, ಅದರಲ್ಲಿ ಸುಮಾರು ಶೇ 80ರಷ್ಟು ರಿಲಯನ್ಸ್ ಜಿಯೋದಿಂದ ಆಗಿದೆ.

ಜಿಯೋ ಮತ್ತು ಭಾರ್ತಿ ಏರ್‌ಟೆಲ್ ದೇಶಾದ್ಯಂತ 5G ನೆಟ್‌ವರ್ಕ್‌ಗಳನ್ನು ವಿಸ್ತರಿಸಲು ಅಧಿಕ ಹೂಡಿಕೆ ಮಾಡಿವೆ. ಇದರಿಂದಾಗಿ ಭಾರತದಲ್ಲಿ 5G ಲಭ್ಯತೆಯಲ್ಲಿ ಗಮನಾರ್ಹ ಅಧಿಕವಾಗಿದೆ. ಇದು 2023 ರ ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇ 28.1ರಿಂದ 2023ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ ಶೇ 52ಕ್ಕೆ ಹೆಚ್ಚಾಗಿದೆ.
ಜಿಯೋ ಮೊದಲಿನಿಂದಲೂ 5ಜಿ ಸ್ಟ್ಯಾಂಡ್ ಅಲೋನ್ (5G SA) ನೆಟ್‌ವರ್ಕ್‌ಗಳನ್ನು ಅಳವಡಿಸುವ ಮೂಲಕ ಮುಂದಿನ ತಲೆಮಾರಿನ ಕನೆಕ್ಷನ್‌ನಲ್ಲಿ ಅಗ್ರ ಸ್ಥಾನ ಪಡೆದಿದೆ. ಜಿಯೋದ ವ್ಯಾಪಕವಾದ 5G ಕವರೇಜ್ ಅದರ 5G ಲಭ್ಯತೆಯ ದರದಿಂದ ಸ್ಪಷ್ಟವಾಗಿದೆ.

2023ರ ನಾಲ್ಕನೇ ತ್ರೈಮಾಸಿಕದಲ್ಲಿ ಅದರ ಪ್ರತಿಸ್ಪರ್ಧಿ ಏರ್‌ಟೆಲ್‌ನ ಅರ್ಧಕ್ಕಿಂತ ಹೆಚ್ಚು, ಅಂದರೆ ಶೇ 100 ಕ್ಕಿಂತ ಅಧಿಕವಾಗಿದೆ. ಜಿಯೋ ದರವು ಶೇ 68.8ಕ್ಕೆ ಏರಿದ್ದು, ಏರ್‌ಟೆಲ್ ಶೇ 30.3ಕ್ಕೆ ಇಳಿಯಿತು.
ರಿಲಯನ್ಸ್ ಕಡಿಮೆ-ಬ್ಯಾಂಡ್ (700 MHz) ಮತ್ತು ಮಧ್ಯಮ-ಬ್ಯಾಂಡ್ (3.5 GHz) ಸ್ಪೆಕ್ಟ್ರಮ್ ಮತ್ತು ಜಿಯೋ ಒದಗಿಸಿದ ವ್ಯಾಪಕ ಫೈಬರ್ ನೆಟ್‌ವರ್ಕ್‌ನೊಂದಿಗೆ ಗ್ರಾಹಕರಿಗೆ ವ್ಯಾಪಕ ಕವರೇಜ್ ಮತ್ತು ವ್ಯಾಪಕ ನೆಟ್‌ವರ್ಕ್ ಒದಗಿಸಲು ಸಾಧ್ಯವಾಗುತ್ತದೆ.
ರಿಲಯನ್ಸ್ ಜಿಯೊದ 5G ನೆಟ್‌ವರ್ಕ್ ಬಳಕೆದಾರರ ಅನುಭವದಲ್ಲಿ, ವಿಶೇಷವಾಗಿ ವಿಡಿಯೋ ಪ್ರಸಾರ ಮತ್ತು ಮೊಬೈಲ್ ಗೇಮಿಂಗ್‌ನಲ್ಲಿ ಸ್ಪಷ್ಟ ಸುಧಾರಣೆಗಳನ್ನು ನೀಡಿದೆ. ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ಡೇಟಾದ ಪ್ರಕಾರ, ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ ವೇಗವಾದ ವಿಡಿಯೋ ಆರಂಭದ ಸಮಯ ನೀಡುತ್ತದೆ, ಬಫರಿಂಗ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಹಕರಿಗೆ ಸ್ಟ್ರೀಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ ಎಂದು ತೋರಿಸುತ್ತದೆ.
ಏರ್‌ಟೆಲ್‌ನ 5G ನೆಟ್‌ವರ್ಕ್‌ಗೆ ಹೋಲಿಕೆ ಮಾಡಿದರೆ ರಿಲಯನ್ಸ್ ಜಿಯೊದ 5ಜಿ ನೆಟ್‌ವರ್ಕ್ 1.14 ಸೆಕೆಂಡುಗಳ ವೇಗದ ವಿಡಿಯೋ ಪ್ರಾರಂಭ ಸಮಯವನ್ನು ದಾಖಲಿಸಿದೆ. ಏರ್‌ಟೆಲ್ ಅವಧಿ 1.99 ಸೆಕೆಂಡುಗಳು. ಜಿಯೋ ಗ್ರಾಹಕರು 0.85 ಸೆಕೆಂಡುಗಳ ಕಡಿಮೆ ಅವಧಿಯಲ್ಲಿ 4g ಯಿಂದ 5G ಗೆ ವಿಡಿಯೋ ಪ್ರಾರಂಭದ ಸಮಯದಲ್ಲಿ ಗಮನಾರ್ಹವಾದ ಕಡಿಮೆ ಅವಧಿಯನ್ನು ಅನುಭವಕ್ಕೆ ಪಡೆದಿದ್ದಾರೆ. ಅದರ ಜತೆಗೆ ಮೊಬೈಲ್ ಗೇಮರ್‌ಗಳು ಕಡಿಮೆ ವಿಳಂಬ, ಉತ್ತಮ ಪ್ರತಿಕ್ರಿಯೆ ಮತ್ತು ಸುಗಮ ಗೇಮಿಂಗ್ ಪ್ರಯೋಜನ ಪಡೆದಿದ್ದಾರೆ.
ನೆಟ್‌ವರ್ಕ್ ಕಾರ್ಯಕ್ಷಮತೆಯಲ್ಲಿ ಒಳಗೊಂಡ ಸಂಕೀರ್ಣತೆಗಳ ಹೊರತಾಗಿಯೂ 5G ಕಡೆಗೆ ಗ್ರಾಹಕರ ಮನೋಭಾವ ಸಕಾರಾತ್ಮಕವಾಗಿದೆ. 5G ಸೇವೆಗಾಗಿ ರಿಲಯನ್ಸ್ ಜಿಯೋದ ನೆಟ್ ಪ್ರಮೋಟರ್ ಸ್ಕೋರ್ (NPS) 2023ರ ನಾಲ್ಕನೇ ತ್ರೈಮಾಸಿಕದಲ್ಲಿ 7.4 ಆಗಿದೆ. ಎನ್ ಪಿಎಸ್ ನಲ್ಲಿನ ಈ ರೀತಿಯ ಟ್ರೆಂಡ್ ರಿಲಯನ್ಸ್ ಜಿಯೋದ 5G ನೆಟ್‌ವರ್ಕ್ ನೀಡುವ ಸುಧಾರಿತ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಗ್ರಾಹಕರ ಸಂತೃಪ್ತಿಯನ್ನು ತೋರಿಸುತ್ತದೆ.
5G ಸರಾಸರಿ ಡೌನ್‌ಲೋಡ್ ವೇಗದಲ್ಲಿ ಭಾರತವು ಈಗ ವಿಶ್ವದಾದ್ಯಂತ ಅಗ್ರ 15 ದೇಶಗಳಲ್ಲಿ ಒಂದಾಗಿದೆ. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಸರಾಸರಿ ಡೌನ್‌ಲೋಡ್ ವೇಗ 301.86 ಎಂಬಿಪಿಎಸ್ (Mbps) ಆಗಿದ್ದು, ಇದು ಅತ್ಯಾಧುನಿಕ 5G ಮೂಲಸೌಕರ್ಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವನ್ನು ನಿಲ್ಲಿಸುತ್ತದೆ.


Click it and Unblock the Notifications








