Home
ಸುದ್ದಿಜಾಲ

ಜಿಯೋ ನೆಟ್‌ವರ್ಕ್‌ ಡೌನ್‌!..ನೀವು ಸಮಸ್ಯೆ ಎದುರಿಸಿದ್ದಿರಾ?

ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿರುವ ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ ಡೌನ್‌ ಆಗಿದೆ ಎಂದು ಹಲವು ಬಳಕೆದಾರರು ವರದಿ ಮಾಡುತ್ತಿದ್ದಾರೆ. ಡೌಂಡೆಟೆಕ್ಟರ್ (Downdetector) ಸೈಟ್ ಕೂಡ ಜಿಯೋ ಮೊಬೈಲ್ ನೆಟ್‌ವರ್ಕ್‌ನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಬಳಕೆದಾರರ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ.

ಜಿಯೋ ನೆಟ್‌ವರ್ಕ್‌ ಡೌನ್‌!..ನೀವು ಸಮಸ್ಯೆ ಎದುರಿಸಿದ್ದಿರಾ?

ರಿಲಯನ್ಸ್ ಜಿಯೋ ಸೆಲ್ಯುಲಾರ್ ನೆಟ್‌ವರ್ಕ್‌ಗಳು ಕೆಲವು ಬಳಕೆದಾರರಿಗೆ ಸ್ಥಗಿತಗೊಂಡಿವೆ ಎಂದು ವರದಿಗಳಾಗಿವೆ. ದೇಶದ ಕೆಲವು ಟೆಲಿಕಾಂ ವ್ಯಾಪ್ತಿಗಳ ಬಳಕೆದಾರರು ಜಿಯೋ ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದಾರೆ. ಕೆಲವರು ಕರೆ ಮಾಡುವಾಗ ಸಮಸ್ಯೆ ಎದುರಿಸಿರುವ ಬಗ್ಗೆ ತಿಳಿಸಿದ್ದಾರೆ. ಮತ್ತೆ ಕೆಲವರು ಇಂಟರ್ನೆಟ್ ಬಳಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ರಿಲಾಯನ್ಸ್ ಜಿಯೋ ಟೆಲಿಕಾಂನ ಅನೇಕ ಬಳಕೆದಾರರು ಟ್ವಿಟರ್‌ ತಾಣದಲ್ಲಿ ಜಿಯೋ ನೆಟ್‌ವರ್ಕ್ ಸ್ಥಗಿತದ ಬಗ್ಗೆ ದೂರು ನೀಡಿದರು. ಭಾರತದಲ್ಲಿ #jiodown ಹ್ಯಾಶ್‌ಟ್ಯಾಗ್ ಟ್ವಿಟರ್ ತಾಣದಲ್ಲಿ ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡಿತ್ತು. ಹಾಗೆಯೇ ಡೌಂಡೆಟೆಕ್ಟರ್ (Downdetector) ಸೈಟ್‌ನಲ್ಲಿ, ಸುಮಾರು 4,000 ಬಳಕೆದಾರರು ರಿಲಾಯನ್ಸ್‌ ಜಿಯೋ ಟೆಲಿಕಾಂನ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ.

ಜಿಯೋ ನೆಟ್‌ವರ್ಕ್‌ ಡೌನ್ ಆಗಿರುವ ಬಗ್ಗೆ ಜಿಯೋ ಬಳಕೆದಾರರು ಟ್ವಿಟ್ಟರ್ ತಾಣದಲ್ಲಿ ಸಮಸ್ಯೆ ಪೋಸ್ಟ್‌ ಮಾಡಿದ್ದಾರೆ.

ಮುಂಜಾನೆಯಿಂದ ಜಿಯೋ ನೆಟ್‌ವರ್ಕ್ ಸಮಸ್ಯೆ ಆಗಿದೆ. ನೆಟ್ವರ್ಕ್ ಸಮಸ್ಯೆ ಆದಷ್ಟು ಬೇಗ ಸರಿಪಡಿಸಿ ಎಂದು ಟ್ವಿಟ್ಟರ್ ತಾಣದಲ್ಲಿ ಕೆಲವು ಬಳಕೆದಾರರು ಟ್ವಿಟ್ ಮಾಡಿದ್ದಾರೆ.

ನೆಟ್‌ವರ್ಕ್‌ ಸಮಸ್ಯೆ ಎದುರಿಸಿದ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ 'ಜಿಯೋ'!

ರಿಲಾಯನ್ಸ್‌ ಜಿಯೋ ನೆಟ್‌ವರ್ಕ್‌ ಡೌನ್‌ ಆಗಿದೆ ಎಂದು ನೆನ್ನೆ (ಅ.6) ಕೆಲವು ಬಳಕೆದಾರರು ಟ್ವಿಟ್ಟರ್ ನಲ್ಲಿ ತಿಳಿಸಿದ್ದರು. ಇಂಟರ್ನೆಟ್ ಬಳಕೆ ಮಾಡಲು ಮತ್ತು ಕರೆ ಮಾಡಲು ಆಗುತ್ತಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ನೆಟ್‌ವರ್ಕ್ ಸ್ಥಗಿತದಿಂದಾಗಿ ಬಳಕೆದಾರರಿಗೆ ಆಗಿರುವ ನೆಟ್‌ವರ್ಕ್ ಸೇವೆಗಳ ನಷ್ಟ ಸರಿದೂಗಿಸಲು ರಿಲಾಯನ್ಸ್‌ ಜಿಯೋ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

ಹೌದು, ರಿಲಯನ್ಸ್‌ ಜಿಯೋ ಟೆಲಿಕಾಂ ನೆಟ್‌ವರ್ಕ್ ಸ್ಥಗಿತದಿಂದ ಬಳಕೆದಾರರಿಗೆ ಆದ ನೆಟ್‌ವರ್ಕ್ ಸೇವೆಗಳ ನಷ್ಟವನ್ನು ಭರಿಸಲು ಜಿಯೋ ಬಳಕೆದಾರರಿಗೆ 2 ದಿನಗಳ ಪೂರಕ ಸೇವೆಯನ್ನು ನೀಡುವುದಾಗಿ ತಿಳಿಸಿದೆ. ಹಾಗೆಯೇ ಬಳಕೆದಾರರಿಗೆ ತಡೆರಹಿತ ಸೇವಾ ಅನುಭವವನ್ನು ನೀಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದೆ. ಇನ್ನು ಈ 2 ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಯೋಜನೆಗಳಿಗೆ ಸ್ವಯಂಚಾಲಿತವಾಗಿ ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಜಿಯೋದ ಈ ಸೌಲಭ್ಯವು ನಿನ್ನೆ ಬಳಕೆದಾರರಿಗೆ ನೆಟ್‌ವರ್ಕ್ ಸೇವೆಗಳ ನಷ್ಟವನ್ನು ಸರಿದೂಗಿಸಲು ಕೈಗೊಂಡ ಕ್ರಮವಾಗಿದೆ. ಈ ಸೌಲಭ್ಯವನ್ನು ಪಡೆಯಲು ಬಳಕೆದಾರರು ಮೈ ಜಿಯೋ ಆಪ್‌ಗೆ ಭೇಟಿ ನೀಡಿ ಮ್ಯಾನುವಲ್ ಆಗಿ ಮಾಡುವ ಅಗತ್ಯ ಇಲ್ಲ ಎನ್ನಲಾಗಿದೆ. ಬದಲಿಗೆ ಎರಡು ದಿನಗಳ ಪೂರಕ ಸೇವೆಯನ್ನು ಬಳಕೆದಾರರ ಅನಿಯಮಿತ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಆಟೋಮ್ಯಾಟಿಕ್ ಆಗಿ ಸೇರಿಸಲಾಗಿದೆ.

ಈ ಸೌಲಭ್ಯದಿಂದಾಗಿ ಈಗ ಜಿಯೋದಿಂದ ಬಳಕೆದಾರರ ಅನಿಯಮಿತ ಪ್ಲ್ಯಾನ್‌ ವ್ಯಾಲಿಡಿಟಿ/ಮುಕ್ತಾಯದ ದಿನಾಂಕವನ್ನು ಎರಡು ದಿನಗಳವರೆಗೆ ಹೆಚ್ಚುವರಿಯಾಗಿ ವಿಸ್ತರಿಸಲಾಗುತ್ತದೆ. ಇನ್ನು ಈ ಎರಡು ದಿನಗಳ ಸೌಲಭ್ಯವು ಬಳಕೆದಾರರ ಮೂಲ ಯೋಜನೆಯ ಪ್ರಯೋಜನಗಳಂತೆ ಇರುತ್ತದೆ.

ಇನ್ನು ಅ.6 ನೆಟ್‌ವರ್ಕ್ ಜಿಯೋ ನೆಟ್‌ವರ್ಕ್ ಸ್ಥಗಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ರಿಲಯನ್ಸ್‌ ಜಿಯೋ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ. ಆದರೆ ಸುಮಾರು 10 ಅಥವಾ 11 ಗಂಟೆಗಳ ನಂತರ ಅನೇಕ ಬಳಕೆದಾರರಿಗೆ ಜಿಯೋ ನೆಟ್‌ವರ್ಕ್ ಸೇವೆಗಳು ಮರಳಿ ಬಂದವು. ಒಂದು ವೇಳೆ ಜಿಯೋ ನೆಟ್‌ವರ್ಕ್‌ ಸ್ಥಗಿತದಿಂದ ನೀವು ಸಮಸ್ಯೆ ಎದುರಿಸಿದ್ದರೇ, ರಿಲಯನ್ಸ್‌ ಜಿಯೋಯಿಂದ ಎರಡು ದಿನಗಳ ಪೂರಕ ಸೇವೆ ಲಭ್ಯವಾಗಲಿದೆ.

Best Mobiles in India

English summary
Jio: Many Users Reported That Jio Network Is Down.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+