Subscribe to Gizbot

ಜಿಯೋ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಫೆ.27ಕ್ಕೆ ಜಿಯೋ ಪ್ರಮುಖ ಸೇವೆ ಸ್ಥಗಿತ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ತನ್ನದೇ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಜಿಯೋ ಟೆಲಿಕಾಂ ಸೇವೆಯನ್ನು ಮಾತ್ರವಲ್ಲದೇ ಹೊಸ ಮಾದರಿಯ ಆಪ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಇದು ಸಹ ಟೆಲಿಕಾಂ ವಲಯದಲ್ಲಿ ಹೊಸತನಕ್ಕೆ ಸಾಕ್ಷಿಯಾಗಿತ್ತು. ಇದೇ ಹಾದಿಯಲ್ಲಿ ಹಲವು ಟೆಲಿಕಾಂ ಕಂಪನಿಗಳು ಸಾಗಿದ್ದವು.

ಜಿಯೋ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಫೆ.27ಕ್ಕೆ ಜಿಯೋ ಪ್ರಮುಖ ಸೇವೆ ಸ್ಥಗಿತ..!

ಜಿಯೋ ತನ್ನ ಬಳಕೆದಾರರಿಗೆ ಸಿನಿಮಾ, ಟಿವಿ, ಮ್ಯೂಸಿಕ್, ವ್ಯಾಲೆಟ್ ಸೇರಿದಂತೆ ಎಲ್ಲಾ ಮಾದರಿಯ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಸದ್ಯ ತನ್ನ ವ್ಯಾಲೆಟ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ವೊಂದನ್ನು ನೀಡಲು ಮುಂದಾಗಿದ್ದು, ತನ್ನ ವ್ಯಾಲೆಟ್‌ನಿಂದ ಬ್ಯಾಂಕ್‌ಗಳಿಗೆ ಹಣವನ್ನು ವರ್ಗಾವಣೆ ಮಾಡುವ ಸೇವೆಯನ್ನು ಸ್ಥಗಿತಗೊಳಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೆಬ್ರವರಿ 27 ಕೊನೆ:

ಫೆಬ್ರವರಿ 27 ಕೊನೆ:

ರಿಲಯನ್ಸ್ ಜಿಯೋ ತನ್ನ 'ಜಿಯೋ ಮನಿ ಮೊಬೈಲ್ ವಾಲೆಟ್' ನಿಂದ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡುವ ಸೇವೆಯನ್ನು ಫೆಬ್ರವರಿ 27 ನಂತರ ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಜಿಯೋ ಈ ಮಾಹಿತಿಯನ್ನು ಗ್ರಾಹಕರಿಗೆ ಈಗಾಗಲೇ SMS ಮೂಲಕ ತಿಳಿಸಿದೆ.

ಆರ್‌ಬಿಐ ಮಾರ್ಗದರ್ಶನ:

ಆರ್‌ಬಿಐ ಮಾರ್ಗದರ್ಶನ:

ಫೆಬ್ರವರಿ 27 ರಿಂದ ಮೊಬೈಲ್ ವ್ಯಾಲೆಟ್ ಜಿಯೋ ಮನಿ ಆಪ್‌ ಮೂಲಕ ಬ್ಯಾಂಕ್ಗೆ ಹಣವನ್ನು ವರ್ಗಾವಣೆ ಮಾಡುವ ಸೌಲಭ್ಯವನ್ನು ಸ್ಥಗಿತಗೊಳಿಸಲು ಆರ್‌ಬಿಐ ಮಾರ್ಗದರ್ಶನ ನೀಡಿದ್ದು, ಈ ಹಿನ್ನಲೆಯಲ್ಲಿ ಜಿಯೋ ಈ ಸೇವೆಯನ್ನು ನಿಲ್ಲಿಸಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಫೆಬ್ರವರಿ 26 ಕೊನೆ:

ಫೆಬ್ರವರಿ 26 ಕೊನೆ:

ಜಿಯೋ ಮನಿ ವ್ಯಾಲೆಟ್ ನಲ್ಲಿರುವ ಹಣವನ್ನು ಫೆಬ್ರವರಿ 28ರ ಒಳಗೆ ಬಳಕೆದಾರರು ವರ್ಗಾಹಿಸಿಕೊಳ್ಳಬೇಕಾಗಿದೆ. ಇದಕ್ಕೇ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ಇದಾದ ನಂತರದಲ್ಲಿ ಈ ಸೇವೆಯೂ ಸ್ಥಗಿತಗೊಳ್ಳಲಿದೆ.

ಜಿಯೋ ಪೇಮೆಂಟ್ ಬ್ಯಾಂಕ್:

ಜಿಯೋ ಪೇಮೆಂಟ್ ಬ್ಯಾಂಕ್:

ಜಿಯೋ ತನ್ನದೇ ಪೇಮೆಂಟ್ ಬ್ಯಾಂಕ್ ತೆರೆಯಲು ಯೋಜನೆಯನ್ನು ರೂಪಿಸಿದ್ದು, ಈ ಹಿನ್ನಲೆಯಲ್ಲಿ ಜಿಯೋ ಮನಿ ವ್ಯಾಲೆಟ್ ನಲ್ಲಿ ಬ್ಯಾಂಕಿಗೆ ಹಣವನ್ನು ಪಾವತಿ ಮಾಡುವ ಸೇವೆಯನ್ನು ನಿಲ್ಲಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಕೊಂಚ ದಿನಗಳಿಗೆ ಗ್ರಾಹಕರಿಗೆ ತೊಂದರೆಯಾಗಲಿದ್ದು, ನಂತರ ಸರಿಯಾಗಲಿದೆ.

ಏರ್‌ಟೆಲ್‌ಗೆ ಸೆಡ್ಡು;

ಏರ್‌ಟೆಲ್‌ಗೆ ಸೆಡ್ಡು;

ಈಗಾಗಲೇ ಏರ್‌ಟೆಲ್ ತನ್ನದೇ ಪೇಮೆಂಟ್ ಬ್ಯಾಂಕ್ ತೆರೆದಿದ್ದು, ಇದಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಈ ಹೊಸ ಪ್ರಯತ್ನಕ್ಕೆ ಜಿಯೋ ಮುಂದಾಗಿದೆ. ಇದಲ್ಲದೇ ತನ್ನ ಬಳಕೆದಾರರಿಗೆ ಹೊಸ ಆಫರ್ ಗಳನ್ನು ಈ ಪೇಮೆಂಟ್ ಬ್ಯಾಂಕ್ ಮೂಲಕ ನೀಡಲಿದೆ ಎನ್ನುವ ಮಾಹಿತಿಯೂ ದೊರೆತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಬಜೆಟ್ ಬೆಲೆಯ ಟಾಪ್ ಎಂಡ್ ಫೋನ್ ಬೇಕಾ..? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ...!

English summary
Jio Money would suspend bank transfers from wallet. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot