Subscribe to Gizbot

ಬಜೆಟ್ ಬೆಲೆಯ ಟಾಪ್ ಎಂಡ್ ಫೋನ್ ಬೇಕಾ..? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ...!

Written By:

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಹುವಾವೆ, ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಹಾನರ್ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇದೆ ಮಾದರಿಯಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಬೊಂಬಾಟ್ ಫೋನ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

ಬಜೆಟ್ ಬೆಲೆಯ ಟಾಪ್ ಎಂಡ್ ಫೋನ್ ಬೇಕಾ..? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ...

ರೂ.10,999ಕ್ಕೆ ದೊರೆಯುತ್ತಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ 18:9 ಅನುಪಾತದ ಡಿಸ್‌ಪ್ಲೇ ಮತ್ತು ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು. ಬೆಸ್ಟ್ ಫೋನ್ ಎನ್ನವ ಕಾರಣಕ್ಕೆ 3GB RAM ಅನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, ಬೆಲೆ ಮಾತ್ರ ರೂ.10,999. ಈ ಬೆಲೆಗೆ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್‌ಗಳು ದೊರೆಯದ ಸಂದರ್ಭದಲ್ಲಿ ಈ ಫೋನ್ ಹಿಂಭಾಗ ಮತ್ತು ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೀಮಿಯಮ್ ಗ್ಲಾಸ್, ಯುನಿ ಬಾಡಿ ವಿನ್ಯಾಸ

ಪ್ರೀಮಿಯಮ್ ಗ್ಲಾಸ್, ಯುನಿ ಬಾಡಿ ವಿನ್ಯಾಸ

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ನೀವು ನೋಡಿದರೆ ಇದೊಂದು ಬಜೆಟ್ ಫೋನ್ ಎನ್ನುವ ಭಾವನೆ ಬರುವುದಿಲ್ಲ, ಕಾರಣ ಇದರ ವಿನ್ಯಾಸ. ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಸ್ಟ್ ಸ್ಟೈಲೀಶ್‌ ಫೋನ್ ಇದು ಎನ್ನಬಹುದಾಗಿದೆ. ಇದರಲ್ಲಿ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಲ್ಲಿಯೂ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ 18:9 ಅನುಪಾತದ ಡಿಸ್‌ಪ್ಲೇ ಇದ್ದು, ಇದು ಫೋನ್‌ ಅನ್ನು ಪ್ರೀಮಿಯಮ್ ಮಾಡಲಿದೆ. ಅಲ್ಲದೇ ಇದು ವಿವಿಧ ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತಿದೆ.

ಗುಣಮಟ್ಟದ ಡಿಸ್‌ಪ್ಲೇ:

ಗುಣಮಟ್ಟದ ಡಿಸ್‌ಪ್ಲೇ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 5.6 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 1080p ಗುಣಮಟ್ಟದ 18;9 ಅನುಪಾತದಿಂದ ಕೂಡಿರುವ ಫುಲ್ ಸ್ಕ್ರಿನ್ ಡಿಸ್‌ಪ್ಲೇಯಾಗಿದ್ದು, ನೋಡಲು ಸುಂದರವಾಗಿದೆ. ಅಲ್ಲದೇ ಗೇಮ್‌ಗಳನ್ನು ಆಡಲು ಮತ್ತು ವೀಡಿಯೊಗಳನ್ನು ನೋಡಲು ಈ ಸ್ಕ್ರಿನ್ ಹೇಳಿ ಮಾಡಿಸಿದಂತಿದೆ. ಈ ಬೆಲೆಯಲ್ಲಿ ಯಾವ ಸ್ಮಾರ್ಟ್‌ಫೋನಿನಲ್ಲಿ ಇಷ್ಟು ಆಯ್ಕೆಗಳನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಬೊಂಬಾಟ್ ಕ್ಯಾಮೆರಾ:

ಬೊಂಬಾಟ್ ಕ್ಯಾಮೆರಾ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನೀವು ಒಟ್ಟು ನಾಲ್ಕು ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದೇ ಈ ಫೋನಿನ ಹೈಲೆಟ್‌ಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ. ಹಿಂಭಾಗ ಮತ್ತು ಮುಂಭಾಗ ಎರಡು ಕಡೆಗಳಲ್ಲಿ 13MP + 2MP ಕ್ಯಾಮೆರಾವನ್ನು ನೋಡಬಹುದಾಗಿದೆ. ಎರಡರಲ್ಲೂ ನೀವು ಬೊಕ್ಕೆ ಎಫೆಕ್ಟ್ ಅನ್ನು ಪಡೆಯಬಹುದಾಗಿದೆ.

ಈ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೋಡಲು ಸಾಧ್ಯವಿಲ್ಲ. ಅಂತಹುದರಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮೆರಾ ಹೊಂದಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ.

Honor 9 Lite with four cameras (KANNADA)
ಹಾರ್ಡ್‌ವೇರ್ & ಸಾಫ್ಟ್‌ವೇರ್:

ಹಾರ್ಡ್‌ವೇರ್ & ಸಾಫ್ಟ್‌ವೇರ್:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಎಲ್ಲಾ ವಿಚಾರದಲ್ಲಿಯೂ ಬೆಸ್ಟ್ ಎನ್ನಲಾಗಿದ್ದು, ಹಾರ್ಡ್‌ವೇರ್ & ಸಾಫ್ಟ್‌ವೇರ್ ವಿಚಾರದಲ್ಲಿಯೂ ಹಿಂದುಳಿದಿಲ್ಲ. ಈ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ ಕೋರ್ ಕಿರನ್ 659 ಪ್ರೋಸೆಸರ್ ಕಾಣಬಹುದಾಗಿದ್ದು, ಅಲ್ಲದೇ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 3GB RAM/ 32GB ಮತ್ತು 4G RAM/ 64GB ಆವೃತ್ತಿಯಲ್ಲಿ ಮಾರಾಟವಾಗುತ್ತಿದೆ.

ಅಲ್ಲದೇ ಹುವಾವೆ ಎಮೋಷನ್ UI ಅನ್ನು ಇದರಲ್ಲಿ ಹೊಂದಿದ್ದು, ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಬ್ಯಾಟರಿಯ ಬಾಳಿಕೆಯೂ ಸಹ ಈ ಸ್ಮಾರ್ಟ್‌ಫೋನ್ ನಲ್ಲಿ ಉತ್ತಮವಾಗಿದೆ.

ಕೊಡುವ ಹಣಕ್ಕೆ ಯಾವುದೇ ಮೋಸವಿಲ್ಲ:

ಕೊಡುವ ಹಣಕ್ಕೆ ಯಾವುದೇ ಮೋಸವಿಲ್ಲ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಟಾಪ್ ಎಂಡ್ ಫೋನ್ ಎಂದರೆ ಯಾವ ತಪ್ಪು ಇರುವುದಿಲ್ಲ. ಪ್ರಿಮಿಯಮ್ ವಿನ್ಯಾಸ ಈ ಪೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೇ SBI ಕಾರ್ಡುದಾರರು 5% ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ವೊಡಾಫೋನ್ ಬಳಕೆದಾರರಿಗೆ 295GB ಡೇಟಾ ಬಳಕೆಗೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 9 Lite is the all-rounder of budget Android smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot