ಇನ್ಮುಂದೆ ಜಿಯೋ ನೆಟ್ ಸ್ಲೋ ಆಗೊಲ್ಲ: ಏರ್‌ಟೆಲ್, ಐಡಿಯಾ ಏಟಿಗೆ ಅಂಬಾನಿ ಎದಿರೇಟು?

|

ಟೆಲಿಕಾಂ ಲೋಕಕ್ಕೆ ಸೆಡ್ಡು ಹೊಡೆದು ನಿಂತು ಉಚಿತ ಇಂಟರ್ ನೆಟ್ ಸೇವೆಯನ್ನು ನೀಡಿ, ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದ ರಿಲಾಯನ್ಸ್ ಜಿಯೋ ನಂತರದ ದಿವಸಗಳಲ್ಲಿ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದರಲ್ಲಿ ಕೊಂಚ ಎಡವಿತ್ತು. ಉಚಿತ ಇಂಟರ್‌ನೆಟ್ ಆಫರ್‌ ನೀಡಿದರು ಸಹ ನೆಟ್‌ವರ್ಕ್ ಕಾಲ್‌ಡ್ರಾಪ್, ಕಡಿಮೆ ಇಂಟರ್‌ನೆಟ್ ವೇಗದಂತಹ ಸಮಸ್ಯೆಗಳು ಇತರ ಟೆಲಿಕಾಂಗಳ ಎದುರು ಜಿಯೋ ಮಂಡಿಯೂರುವಂತೆ ಮಾಡಿದ್ದವು.

ಇನ್ಮುಂದೆ ಜಿಯೋ ನೆಟ್ ಸ್ಲೋ ಆಗೊಲ್ಲ: ಏರ್‌ಟೆಲ್, ಐಡಿಯಾ ಏಟಿಗೆ ಅಂಬಾನಿ ಎದಿರೇಟು?

ಇನ್ನು ಜಿಯೋ ಮೂಲಕ ಉತ್ತಮ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ನೀಡಲೇಬೇಕು ಎಂದು ಪಣತೊಟ್ಟಿರುವ ಅಂಬಾನಿ ಇಲ್ಲಿಯವರೆಗೂ ಜಿಯೋಗೆ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ನಾನು ಜಿಯೋ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಿಯೇ ನೀಡುತ್ತೇನೆ. ಅದಕ್ಕಾಗಿ ನಾನು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಅಂಬಾನಿ ಹೇಳಿದ್ದು, ಹಾಗೇನಾದರು ಆದರೆ ಜನರಲ್ಲಿ ಮತ್ತೆ ಜಿಯೋ ಗುಂಗು ಹಿಡಿಯಬಹುದು!!.

ಓದಿರಿ: ಜಿಯೋ ಎಫೆಕ್ಟ್‌: ಗ್ರಾಹಕರನ್ನು ಉಳಿಸಿಕೊಳ್ಳಲು ಇತರೆ ಟೆಲಿಕಾಂಗಳಿಂದ ಆಫರ್‌ಗಳ ಸುರಿಮಳೆ!

ಹಾಗಾದರೆ ಜಿಯೋದಲ್ಲಿ ನೂತನವಾಗಿ ಬಂದಿರುವ ಯೋಜನೆಗಳೇನು? . ಅಂಬಾನಿ ಜಿಯೋವನ್ನು ಉಳಿಸಿ ಬೆಳೆಸಲು ಏನೇನು ಪ್ಲಾನ್‌ ಮಾಡಿದ್ದಾರೆ ಎಂದು ಇಂದಿನ ಲೇಖನದಲ್ಲಿ ಓದಿರಿ.

ದೇಶಾದ್ಯಂತ 45000 ಕ್ಕೂ ಹೆಚ್ಚು ನೆಟ್‌ವರ್ಕ್ ಟವರ್‌ಗಳ ನಿರ್ಮಾಣ.

ದೇಶಾದ್ಯಂತ 45000 ಕ್ಕೂ ಹೆಚ್ಚು ನೆಟ್‌ವರ್ಕ್ ಟವರ್‌ಗಳ ನಿರ್ಮಾಣ.

ಜಿಯೋ ಹೊರಬರುವುದಕ್ಕೂ ಮನ್ನವೇ ಜಿಯೋ ಬಗ್ಗೆ ಟೆಲಿಕಾಂನಲ್ಲಿ ಇದ್ದ ಅಸಡ್ಡೆಯೇ ಜಿಯೋ ಸಂಪರ್ಕಕ್ಕೆ ನೆಟ್‌ವರ್ಕ್ ಟವರ್‌ಗಳು ಇಲ್ಲದಿರುವುದು. ಜಿಯೋ ಬಿಡುಗಡೆಯ ನಂತರ ಇದನ್ನೇ ಎನ್‌ಕ್ಯಾಶ್‌ ಮಾಡಿಕೊಂಡ ಇತರ ಕಂಪನಿಗಳು ಜಿಯೋಗೆ ಸರಿಯಾದ ಸಹಕಾರ ನೀಡದೆ ಜಿಯೋ ಉತ್ತಮ ಸಂಪರ್ಕ ನೀಡುವಲ್ಲಿ ಸೋತಿದೆ ಎನ್ನುವ ಆರೋಪಗಳಿವೆ. ಹಾಗಾಗಿ ದೇಶಾದ್ಯಂತ 45000 ಕ್ಕೂ ಹೆಚ್ಚು ನೆಟ್‌ವರ್ಕ್ ಟವರ್‌ ನಿರ್ಮಾಣಕ್ಕೆ ಅಂಬಾನಿ ಚಿಂತಿಸಿದ್ದಾರೆ.

ಇಂಟರ್‌ನೆಟ್ ಫ್ರೀ ಪ್ಲಾನ್ 2017 ರ ಮಾರ್ಚ್ ವರೆಗೂ ವಿಸ್ತರಣೆ!!

ಇಂಟರ್‌ನೆಟ್ ಫ್ರೀ ಪ್ಲಾನ್ 2017 ರ ಮಾರ್ಚ್ ವರೆಗೂ ವಿಸ್ತರಣೆ!!

2016 ರ ಡಿಸೆಂಬರ್‌ವರೆಗೂ ಜಿಯೋ ಮೂಲಕ ಇಂಟರ್‌ನೆಟ್ ಫ್ರೀ ನೀಡಿದ್ದ ಅಂಬಾನಿ 2017 ರ ಮಾರ್ಚ್ ತನಕ ಈ ಸೇವೆಯನ್ನು ಮುಂದುವರೆಸಲು ಚಿಂತಿಸಿದ್ದಾರೆ. ಏಕೆಂದರೆ 2017 ರ ಮಾರ್ಚ್ ಒಳಗೆ ಉತ್ತಮ ಸರ್ವೀಸ್ ನೀಡುವ ಗುರಿಯನ್ನು ಹೊಂದಿದ್ದಾರೆ.

1000 ಕ್ಕೆ ಹೊಸ ಜಿಯೋ ಸ್ಮಾರ್ಟ್ ಫೋನ್ !!

1000 ಕ್ಕೆ ಹೊಸ ಜಿಯೋ ಸ್ಮಾರ್ಟ್ ಫೋನ್ !!

ಜಿಯೋ ಮೂಲಕ ಪ್ರತಿಯೊಬ್ಬರು ಇಂಟರ್‌ನೆಟ್ ಪ್ರಪಂಚಕ್ಕೆ ಕಾಲಿಡಬೇಕು ಎಂಬುದು ಅಂಬಾನಿವರ ಆಸೆಯಂತೆ. ಹಾಗಾಗಿ, ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಸಾಧ್ಯವಾಗದವರಿಗೆ ಅನುಕೂಲವಾಗುವಂತೆ ಕಡಿಮೆ ಬಜೆಟ್‌ನ ಅಂದರೆ ಕೇವಲ 1000 ಕ್ಕೆ ಜಿಯೋ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಚಿಂತಿಸಿದ್ದಾರಂತೆ.

ಗ್ರಾಹಕ ಸೇವೆಯನ್ನು ಅತ್ಯುತ್ತಮ ದರ್ಜಿಗೇರಿಸಲು ಚಿಂತನೆ.

ಗ್ರಾಹಕ ಸೇವೆಯನ್ನು ಅತ್ಯುತ್ತಮ ದರ್ಜಿಗೇರಿಸಲು ಚಿಂತನೆ.

ಜಿಯೋ ಗ್ರಾಹಕರ ಮೊದಲ ಸಮಸ್ಯೆಯೇ ಜಿಯೋದಲ್ಲಿ ಸರಿಯಾದ ಗ್ರಾಹಕ ಸೇವೆ ಇಲ್ಲದಿರುವುದು. ಗ್ರಾಹಕ ಸೇವಾ ಪ್ರತಿನಿಧಿಯೊಂದಿಗೆ ಸಂಪರ್ಕ ಸಾಧ್ಯವಾಗದೆ ಇತ್ತ ಸಮಸ್ಯೆಯೂ ಬಗೆಹರಿಯದೆ ಗ್ರಾಹಕರು ಜಿಯೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಉತ್ತಮ ಗ್ರಾಹಕ ಸೇವೆಯನ್ನು ನೀಡಲು ಅಂಬಾನಿ ಸಿದ್ಧವಾಗಿದ್ದಾರೆ.

ಸ್ಟೂಡೆಂಟ್ಸ್ ಮೇಲೆ ಅಂಬಾನಿ ಕಣ್ಣು!!.. ಮತ್ತೆ ಹೆಚ್ಚಿನ ಆಫರ್ ನೀಡಿದ ಜಿಯೋ?

ಸ್ಟೂಡೆಂಟ್ಸ್ ಮೇಲೆ ಅಂಬಾನಿ ಕಣ್ಣು!!.. ಮತ್ತೆ ಹೆಚ್ಚಿನ ಆಫರ್ ನೀಡಿದ ಜಿಯೋ?

ಅಂಬಾನಿ ಅವರಿಗೆ ಜಿಯೋ ಪ್ರಾರಂಭಿಸಲು ಅವರ ಮಗಳೆ ಪ್ರೇರಣೆ ಎನ್ನಲಾಗಿದೆ. ಹಾಗಾಗಿ ಕಾಲೇಜು ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜಿಯೋ ಮೂಲಕ ವಿಧ್ಯಾರ್ಥಿಗಳಿಗೆ ಹೆಚ್ಚಿನ ಆಫರ್ ನೀಡಲು ಅಂಬಾನಿ ಚಿಂತಿಸಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Jio net can not slow no more ambhani fight against airtel and idea to know more about this visit kannada gizbot

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X