ಜಿಯೋ ಎಫೆಕ್ಟ್‌: ಗ್ರಾಹಕರನ್ನು ಉಳಿಸಿಕೊಳ್ಳಲು ಇತರೆ ಟೆಲಿಕಾಂಗಳಿಂದ ಆಫರ್‌ಗಳ ಸುರಿಮಳೆ!

By Suneel
|

ರಿಲಾಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಗೆ ಕಾಲಿರಿಸಿದ ನಂತರ, ಇತರೆ ಟೆಲಿಕಾಂ ಕಂಪನಿಗಳು ನಿದ್ರೆ ರಹಿತ ದಿನಗಳನ್ನು ಕಳೆಯುತ್ತಿವೆ. ಜಿಯೋ, ಟೆಲಿಕಾಂ ಮಾರುಕಟ್ಟೆಯಲ್ಲಿ ಉಚಿತ ಮತ್ತು ಅನ್‌ಲಿಮಿಟೆಡ್ VoLTE ಕರೆ ಮತ್ತು ಇಂಟರ್ನೆಟ್ ಸೇವೆ ನೀಡಿದ ಮೊದಲ ಟೆಲಿಕಾಂ ಸಹ ಹೌದು.

ಇತ್ತೀಚೆಗೆ ರಿಲಾಯನ್ಸ್ ಜಿಯೋ ತನ್ನ ಲೈಫ್‌ ಫೋನ್‌ ಜೊತೆಗೆ, ಆಂಡ್ರಾಯ್ಡ್ ಮತ್ತು ಐಫೋನ್ ಸೇರಿದಂತೆ ಎಲ್ಲಾ 4G ಸಪೋರ್ಟ್ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮೇಲೆ ತಿಳಿಸಿದ ಉಚಿತ ಆಫರ್‌ ಅನ್ನು ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧೆ ನೀಡಲು ಏರ್‌ಟೆಲ್‌, ವೊಡಾಫೋನ್, ಐಡಿಯಾ ಸೆಲ್ಯುಲಾರ್ ಮತ್ತು ಬಿಎಸ್‌ಎನ್‌ಎಲ್‌ ಅಪರಿಮಿತ ಆರಂಭಿಕ ಹಂತದ ಟ್ಯಾರಿಫ್‌ ಪ್ಲಾನ್‌ಗಳನ್ನು ತಮ್ಮ ಗ್ರಾಹಕರಿಗೆ ನೀಡಿವೆ.

ಜಿಯೋ4Gವಾಯ್ಸ್ ವರ್ಕ್‌ ಆಗುತ್ತಿಲ್ಲವೇ? ಸಮಸ್ಯೆ ಏಕೆ ಮತ್ತು ಪರಿಹಾರಗಳನ್ನು ತಿಳಿಯಿರಿ

ಅಂದಹಾಗೆ ಪ್ರಸ್ತುತದಲ್ಲಿ ರಿಲಾಯನ್ಸ್ ಜಿಯೋಗೆ ನಿರಂತರ ಪ್ರತಿಸ್ಪರ್ಧೆ ನೀಡಲು, ಇತರೆ ಟೆಲಿಕಾಂಗಳು ಕೆಲವು ಅತ್ಯಾಕರ್ಷಕ ಆಫರ್ ಮತ್ತು ಡೀಲ್‌ಗಳನ್ನು ತಮ್ಮ ಸಬ್‌ಸ್ಕ್ರೈಬರ್‌ಗಾಗಿ ಬಿಡುಗಡೆ ಮಾಡುವ ಉತ್ಸುಕದಲ್ಲಿದ್ದಾರೆ. ಭಾರತಿ ಏರ್‌ಟೆಲ್‌, ವೊಡಾಫೋನ್, ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂಗಳ ಅತ್ಯಾಕರ್ಷಕ ಆಫರ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿರಿ.

ಬಿಎಸ್‌ಎನ್‌ಎಲ್‌ ಅತ್ಯಾಕರ್ಷಕ ಟ್ಯಾರಿಫ್ ಪ್ಲಾನ್‌

ಬಿಎಸ್‌ಎನ್‌ಎಲ್‌ ಅತ್ಯಾಕರ್ಷಕ ಟ್ಯಾರಿಫ್ ಪ್ಲಾನ್‌

ಬಿಎಸ್ಎನ್‌ಎಲ್‌ ಇತ್ತೀಚೆಗಷ್ಟೆ ಅತ್ಯಾಕರ್ಷಕ ಅನ್‌ಲಿಮಿಟೆಡ್ 3G ಡಾಟಾ ಪ್ಲಾನ್‌ ಅನ್ನು 1,099 ರೂಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಿತ್ತು. ಅಲ್ಲದೇ ಆರಂಭಿಕ ಡಾಟಾ ಪ್ಲಾನ್ ಅನ್ನು 10GB ಡಾಟಾವನ್ನು ರೂ. 549 ಕ್ಕೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಿತ್ತು. ಈ ಪ್ಲಾನ್‌ ಅಡಿಯಲ್ಲಿ ಬಿಎಸ್‌ಎನ್‌ಎಲ್‌ 2GB 3G ಡಾಟಾವನ್ನು 10 ದಿನಗಳ ವ್ಯಾಲಿಡಿಟಿಯೊಂದಿಗೆ ರೂ.156 ಕ್ಕೆ ಪಡೆಯಬಹುದು.

ಏರ್‌ಟೆಲ್‌ನ ಅತ್ಯಾಕರ್ಷಕ ಡಾಟಾ ಪ್ಲಾನ್‌ಗಳು

ಏರ್‌ಟೆಲ್‌ನ ಅತ್ಯಾಕರ್ಷಕ ಡಾಟಾ ಪ್ಲಾನ್‌ಗಳು

ಏರ್‌ಟೆಲ್‌, ರಿಲಾಯನ್ಸ್ ಜಿಯೋದ ಅನ್‌ಲಿಮಿಟೆಡ್ ಆಫರ್‌ಗಳೊಂದಿಗೆ ಪ್ರತಿಸ್ಪರ್ಧೆ ನೀಡಲು ‘Infinity Plans‘ ಅನ್ನು ಪ್ರೀಪೇಡ್‌ ಮತ್ತು ಪೋಸ್ಟ್‌ಪೇಡ್ ಸಬ್‌ಸ್ಕ್ರೈಬರ್‌ಗಳಿಗೆ ಎಲ್ಲಾ ವೃತ್ತಗಳಲ್ಲಿ ಪರಿಚಯಿಸುತ್ತು. ಇದರಲ್ಲಿ ಎಲ್ಲಾ 4G ಡಾಟಾ ಬೆನಿಫಿಟ್‌ಗಳನ್ನು ಪಡೆಯುವ ಹಲವು ಆಫರ್‌ಗಳ ಕಾಂಬೊ ಪ್ಯಾಕ್‌ಗಳಿದ್ದುವು. ಕಾಂಬೊ ಆಫರ್‌ನಲ್ಲಿ ಉಚಿತವಾಗಿ ವಿಂಕ್ ಮ್ಯೂಸಿಕ್, ಸಿನಿಮಾ, ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ಸ್ಥಳೀಯ ಮತ್ತು ಎಸ್‌ಟಿಡಿ ನಂಬರ್‌ಗಳಿಗೆ ನಿರ್ವಹಿಸಬಹುದಿತ್ತು. ಅಲ್ಲದೇ ಯಾವುದೇ ಹೆಚ್ಚುವರಿ ದರ ಇಲ್ಲದೇ, ಪಾನ್‌ ಇಂಡಿಯಾ ರೋಮಿಂಗ್ ಅನ್ನು ಪರಿಚಯಿಸಲಾಗಿತ್ತು.

ಜಿಯೋಗೆ ಪ್ರತಿಸ್ಪರ್ಧಿಯಾಗಿ, ಐಡಿಯಾದ ಅದ್ಭುತ ಆಫರ್

ಜಿಯೋಗೆ ಪ್ರತಿಸ್ಪರ್ಧಿಯಾಗಿ, ಐಡಿಯಾದ ಅದ್ಭುತ ಆಫರ್

ಏರ್‌ಟೆಲ್‌ ಮತ್ತು ವೊಡಾಫೋನ್‌ಗಳಿಗಿಂತ ಭಿನ್ನವಾಗಿ, ಐಡಿಯಾ ತನ್ನ 3G/4G ಡಾಟಾ ಪ್ಲಾನ್‌ಗಳಲ್ಲಿ ಶೇ.67 ರಷ್ಟು ದರ ಕಡಿತಗೊಳಿಸಿದೆ. ಐಡಿಯಾ ಗ್ರಾಹಕರು 10GB 3G/4G ಡಾಟಾವನ್ನು 990 ರೂಗೆ, 2GB ಡಾಟಾವನ್ನು 349 ರೂಗೆ ಮತ್ತು 3GB ಡಾಟಾವನ್ನು 649 ರೂಗೆ ಪಡೆಯಬಹುದಾಗಿದೆ.

ಐಡಿಯಾ ಸೆಲ್ಯೂಲಾರ್ ತಿಂಗಳ ಫ್ರೀಡಮ್ ಡಾಟಾ ಪ್ಯಾಕ್‌ ಅನ್ನು ಪರಿಚಯಿಸಿದ್ದು 2G 300MB ಡಾಟಾವನ್ನು ರೂ.100 ಕ್ಕೆ ಮತ್ತು 500MB ಡಾಟಾವನ್ನು ರೂ.175 ಕ್ಕೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದು.

ವೊಡಾಫೋನ್‌ನಿಂದ ಕೆಲವು ಆಕರ್ಷಕ ಪ್ಲಾನ್‌ಗಳು

ವೊಡಾಫೋನ್‌ನಿಂದ ಕೆಲವು ಆಕರ್ಷಕ ಪ್ಲಾನ್‌ಗಳು

ವೊಡಾಫೋನ್‌ ಇತ್ತೀಚೆಗೆ 1GB ಡಾಟಾ ಬೆಲೆಗೆ 10GB ಡಾಟಾ ಆಫರ್ ಮಾಡಿತ್ತು. ಈ ಡಾಟಾ 3 ತಿಂಗಳ ವ್ಯಾಲಿಡಿಟಿಯನ್ನು ಸಹ ಹೊಂದಿತ್ತು. ಈ ಪ್ಲಾನ್‌ ಅನ್ನು ಎಲ್ಲಾ ಪೋಸ್ಟ್‌ಪೇಡ್‌ ಮತ್ತು ಪ್ರಿಪೇಡ್ ಗ್ರಾಹಕರು ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Reliance Jio Effect: Airtel, Vodafone, Idea and BSNL Line Up Attractive Data Offers to Retain Subscr. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X