ಜಿಯೋದ ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, ಒಂದು ವರ್ಷ ಮತ್ತೆ ರೀಚಾರ್ಜ್ ಬೇಕಿಲ್ಲ!
ಜಿಯೋ ಟೆಲಿಕಾಂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕೆಲವಯ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಅಧಿಕ ದೈನಂದಿನ ಡೇಟಾ ಸೌಲಭ್ಯ ಪಡೆದಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪಡೆದಿವೆ. ಇನ್ನು ದೀರ್ಘ ವ್ಯಾಲಿಡಿಟಿ ಪ್ರಯೋಜನ ಬಯಸುವ ಚಂದಾದಾರರಿಗಾಗಿಯೇ ಸಂಸ್ಥೆಯು ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಯ್ಡ್ ಆಯ್ಕೆಗಳನ್ನು ಒದಗಿಸಿದೆ. ಸದ್ಯ ಜಿಯೋ ಟೆಲಿಕಾಂನಲ್ಲಿ ಎರಡು ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌ಗಳು ಲಭ್ಯ.
ಹೌದು, ಜಿಯೋ ಟೆಲಿಕಾಂನ (Jio) 3599ರೂ. ಪ್ಲ್ಯಾನ್ ಹಾಗೂ 3999ರೂ. ಪ್ಲ್ಯಾನ್ ಈ ಎರಡು ಯೋಜನೆಗಳು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದ್ದು, ದೀರ್ಘಾವಧಿಗೆ ಅತ್ಯುತ್ತಮ ಯೋಜನೆಗಳಾಗಿ ಗಮನ ಸೆಳೆದಿವೆ. ದೀರ್ಘ ವ್ಯಾಲಿಡಿಟಿಯ ಜೊತೆಗೆ ಈ ಯೋಜನೆಗಳು ಡೇಟಾ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ, ವಾಯಿಸ್ ಕರೆ ಸೌಲಭ್ಯ ಸೇರಿದಂತೆ ಇನ್ನಷ್ಟು ಪ್ರಯೋಜನ ಒಳಗೊಂಡಿವೆ. ಹಾಗಾದರೇ ಜಿಯೋ ಈ ಎರಡು ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂ 3599ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂ 3599 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ.
ಇನ್ನು ಜಿಯೋದ ಈ ವಾರ್ಷಿಕ ಅವಧಿಯ ರೀಚಾರ್ಜ್ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಜಿಯೋದ ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ಸಹ ದೊರೆಯುತ್ತವೆ.
ಜಿಯೋ ಟೆಲಿಕಾಂ 3999ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂ 3999 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ.
ಇನ್ನು ಜಿಯೋದ ಈ ವಾರ್ಷಿಕ ಅವಧಿಯ ರೀಚಾರ್ಜ್ ಪ್ಲ್ಯಾನಿನ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಹಾಗೆಯೇ ಹೆಚ್ಚುವರಿಯಾಗಿ ಫ್ಯಾನ್‌ಕೋಡ್ (FANCODE) ಚಂದಾದಾರಿಕೆ ಲಭ್ಯ. ಅಲ್ಲದೇ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ಸಹ ದೊರೆಯುತ್ತವೆ.
ಜಿಯೋದ ಆಕರ್ಷಕ ರೀಚಾರ್ಜ್ ಪ್ಲ್ಯಾನ್
ಜಿಯೋ ಟೆಲಿಕಾಂ 999 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಆಕರ್ಷಕ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 98 ದಿನಗಳ ವ್ಯಾಲಿಡಿಟಿ ಲಭ್ಯ ಇದ್ದು, ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 196 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆಗಳು ಸಹ ದೊರೆಯುತ್ತವೆ.


Click it and Unblock the Notifications








