Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
ಜಿಯೋ (jio) ಈಗಾಗಲೇ ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಭಿನ್ನ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡುತ್ತದೆ. ಅದರಂತೆ ಈಗ ಅಗ್ಗದ ಬೆಲೆಯ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆಯನ್ನು (jioCinema Premium Subscription) ಘೋಷಣೆ ಮಾಡಲಾಗಿದೆ.
ಹೌದು, ಜಿಯೋ ಸಿನಿಮಾ ತನ್ನ ಹೊಸ ಚಂದಾದಾರಿಕೆ ಸೇವೆ 'ಜಿಯೋ ಸಿನಿಮಾ ಪ್ರೀಮಿಯಂ' ಅನ್ನು ಪ್ರಾರಂಭಿಸಿದೆ. ಈ ಪ್ಲ್ಯಾನ್ ಕೇವಲ 29ರೂ.ಗಳಿಂದ ಆರಂಭ ಆಗಲಿದೆ. ಇದರಿಂದಾಗಿ ಬಳಕೆದಾರರು ಜಾಹೀರಾತು-ಮುಕ್ತ ಅನುಭವ, 4K ವರೆಗಿನ ವಿಡಿಯೋ ಗುಣಮಟ್ಟ ಮತ್ತು ಆಫ್‌ಲೈನ್‌ನಲ್ಲಿ ಕಂಟೆಂಟ್ ಅನ್ನು ವೀಕ್ಷಿಸುವ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕೋಣ.

ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ: ಮೊದಲೇ ತಿಳಿಸಿದಂತೆ ಜಿಯೋ ಸಿನಿಮಾ ಪ್ರೀಮಿಯಂ ಅನ್ನು ಪ್ರಾರಂಭಿಸಿದ್ದು, ಡಿವೈಸ್‌ಗಳ ಮಿತಿಗಳು, ಕಳಪೆ ವಿಡಿಯೋ ಗುಣಮಟ್ಟ ಮತ್ತು ಬೆಲೆಬಾಳುವ ಚಂದಾದಾರಿಕೆಗಳಂತಹ ಸಮಸ್ಯೆಗಳನ್ನು ನಿಭಾಯಿಸುವ ಪ್ಲಾಟ್‌ಫಾರ್ಮ್ ಇದೀಗ ತಿಂಗಳಿಗೆ ಕೇವಲ 29 ರೂ.ಗಳಿಂದ ಆರಂಭ ಆಗುವ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದೆ. ಈ ಯೋಜನೆಗಳು ಜಾಹೀರಾತು-ಮುಕ್ತ ಅನುಭವವನ್ನು ನೀಡಲಿವೆ. ಇನ್ನು ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಡಿವೈಸ್‌ಗಳಲ್ಲಿ ವಿಶೇಷ ಸರಣಿಗಳು, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು, ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದಾಗಿದೆ.
ಅಲ್ಲದೆ ಈ ವಿಭಾಗದಲ್ಲಿ ಕುಟುಂಬ ಪ್ಲ್ಯಾನ್ ಅನ್ನೂ ಸಹ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ತಿಂಗಳಿಗೆ ನೀವು 89ರೂ.ಗಳನ್ನು ಪಾವತಿ ಮಾಡಬೇಕಿದೆ. ಈ ಪ್ಲ್ಯಾನ್ ಏಕಕಾಲದಲ್ಲಿ ನಾಲ್ಕು ಡಿಸ್‌ಪ್ಲೇಗಳಿಗೆ ಪ್ರವೇಶವನ್ನು ನೀಡಲಿದೆ. ಪ್ರಸ್ತುತ ಜಿಯೋ ಸಿನಿಮಾ ಪ್ರೀಮಿಯಂ ಸದಸ್ಯರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆಟೋಮ್ಯಾಟಿಕ್ ಆಗಿ 'ಫ್ಯಾಮಿಲಿ' ಪ್ಲ್ಯಾನ್‌ಗೆ ಅಪ್‌ಗ್ರೇಡ್ ಆಗಬಹುದಾಗಿದೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಕ್ರೀಡಾ ಸಂಬಂಧಿ ಕಂಟೆಂಟ್ ಜಾಹೀರಾತುಗಳೊಂದಿಗೆ ಉಚಿತವಾಗಿದ್ದರೂ, ಈ ಪ್ರೀಮಿಯಂ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಸ್ಥಳೀಯ ಭಾಷೆಗಳಲ್ಲಿ ಡಬ್ ಮಾಡಲಾದ ಉನ್ನತ ಅಂತಾರಾಷ್ಟ್ರೀಯ ಕಂಟೆಂಟ್‌ಗಳಿಗೆ ಸದಸ್ಯರು ಪ್ರವೇಶವನ್ನು ಪಡೆಯುತ್ತಾರೆ. ಇದು ಗೇಮ್ ಆಫ್ ಥ್ರೋನ್ಸ್ ಮತ್ತು ಹೌಸ್ ಆಫ್ ದಿ ಡ್ರ್ಯಾಗನ್‌ನಂತಹ ಜನಪ್ರಿಯ ಸರಣಿಗಳು, ಹಾಗೆಯೇ ಪೀಕಾಕ್, ಹೆಚ್‌ಬಿಓ, ಪ್ಯಾರಾಮೌಂಟ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿಯಂತಹ ಪ್ರಮುಖ ಸ್ಟುಡಿಯೋಗಳ ಚಲನಚಿತ್ರಗಳನ್ನು ಒಳಗೊಂಡಿದೆ.
ಇಷ್ಟೇ ಅಲ್ಲದೆ ಈ ಪ್ಲಾಟ್‌ಫಾರ್ಮ್ ಮಕ್ಕಳ ಮತ್ತು ಕುಟುಂಬ ಮನರಂಜನೆಯ ದೊಡ್ಡ ಸ್ಟೋರೇಜ್ ಅನ್ನು ಹೊಂದಿದೆ. ಮೋಟು ಪಟ್ಲು ಮತ್ತು ಪೊಕ್ಮೊನ್ ಮತ್ತು ಪೆಪ್ಪಾ ಪಿಗ್‌ವರೆಗಿನ ಶೀರ್ಷಿಕೆಗಳೊಂದಿಗೆ ವಿವಿಧ ಶೋಗಳ ಮೂಲಕ ಮನರಂಜನೆ ನೀಡಲಿದ್ದು, ಪೇರೆಂಟ್ಸ್ ಕಂಟ್ರೋಲ್ ಫೀಚರ್ಸ್ ನೊಂದಿಗೆ ಮಕ್ಕಳಿಗೆ ಸುರಕ್ಷಿತ ವೀಕ್ಷಣೆಯ ವಾತಾವರಣವನ್ನು ಖಾತ್ರಿಗೊಳಿಸುತ್ತದೆ.

ಮೂಲ ಕಂಟೆಂಟ್ ಮತ್ತು ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ಇಷ್ಟಪಡುವವರಿಗೂ ಈ ಪ್ಲ್ಯಾನ್ ಸಹಾಯಕವಾಗಲಿದೆ. ಮುಂಬರುವ ಸರಣಿಗಳಾದ ರನ್ನೀತಿ: ಬಾಲಾಕೋಟ್ & ಬಿಯಾಂಡ್ ಅಂಡ್ ಮರ್ಡರ್ ಇನ್ ಮಹಿಮ್‌ನ ಹೊಸ ಸರಣಿಯ ಪ್ರೀಮಿಯರ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ, ಪ್ಲಾಟ್‌ಫಾರ್ಮ್ ಪ್ರತಿ ತಿಂಗಳು ಬಾಲಿವುಡ್ ಬ್ಲಾಕ್‌ಬಸ್ಟರ್ ಪ್ರೀಮಿಯರ್ ಅನ್ನು ಮೇ ತಿಂಗಳಲ್ಲಿ ಶೋ ಮಾಡಲಿದೆ ಎಂದು ತಿಳಿದುಬಂದಿದೆ.
ಜಿಯೋಸಿನಿಮಾ ಪ್ರೀಮಿಯಂ ಸದಸ್ಯರು ಟಿವಿಯಲ್ಲಿ ಪ್ರಸಾರವಾಗುವ ಮೊದಲು ಧಾರಾವಾಹಿಗಳನ್ನು ಒಳಗೊಂಡಂತೆ ಕಲರ್ಸ್, ನಿಕೆಲೋಡಿಯನ್ ಮತ್ತು ಇತರ ವಯಕಾಮ್ 18 ನೆಟ್‌ವರ್ಕ್ ಚಾನಲ್‌ಗಳಿಂದ ಕಂಟೆಂಟ್‌ಗೆ ಆರಂಭಿಕ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಸಂಬಂಧ ವಯಕಾಮ್ 18 ಡಿಜಿಟಲ್‌ನ ಸಿಇಒ ಕಿರಣ್ ಮಣಿ ಅವರು ಜಿಯೋಸಿನಿಮಾ ಪ್ರೀಮಿಯಂಗಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.
ಪ್ರತಿ ಭಾರತೀಯ ಕುಟುಂಬವನ್ನು ಪೂರೈಸುವ ಸಾಟಿಯಿಲ್ಲದ ಮನರಂಜನಾ ಅನುಭವವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಜಿಯೋ ಸಿನಿಮಾ ಪ್ರೀಮಿಮಂ ವೆಚ್ಚ ಮತ್ತು ಗುಣಮಟ್ಟದ ಅಡೆತಡೆಗಳನ್ನು ಒಡೆಯುವ ಕೆಲಸ ಮಾಡಲಿದ್ದು, 4K ಸ್ಟ್ರೀಮಿಂಗ್, ಆಫ್‌ಲೈನ್ ವೀಕ್ಷಣೆ ಮತ್ತು ಗ್ರಾಹಕ ಸ್ನೇಹಿ ಬೆಲೆಗಳಲ್ಲಿ ಯಾವುದೇ ಡಿವೈಸ್‌ಗಳಿಗೆ ನಿರ್ಬಂಧಗಳಿಲ್ಲದೆ ಈ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹೊಸ ಸೇವೆಯನ್ನು ಉತ್ತೇಜಿಸಲು, ಜಿಯೋ ಸಿನಿಮಾ ತೋ ಆಜ್ ಕ್ಯಾ ಪ್ಲಾನ್ ಹೈ? ಎಂಬ ಅಭಿಯಾನವನ್ನು ಆರಂಭ ಮಾಡಿದೆ. ಜಿಯೋಸಿನಿಮಾ ಪ್ರಯೋಜನಗಳನ್ನು ಒತ್ತಿಹೇಳುವಾಗ ಮನರಂಜನಾ ಪ್ಲ್ಯಾನ್‌ಗಳನ್ನು ಆಯ್ಕೆಮಾಡುವಾಗ ಗ್ರಾಹಕರು ಎದುರಿಸುವ ಸವಾಲುಗಳನ್ನು ಈ ಅಭಿಯಾನವು ಹಾಸ್ಯಮಯವಾಗಿ ಎತ್ತಿ ತೋರಿಸುವ ಕೆಲಸ ಮಾಡಲಿದೆ.


Click it and Unblock the Notifications








