Subscribe to Gizbot

ಮಾರ್ಚ್‌ನಂತರ ಜಿಯೋಗೆ ಎಷ್ಟು ರೀಚಾರ್ಜ್ ಮಾಡಿಸಬೇಕು? ಅಂಬಾನಿ ಇಂದು ಹೇಳಿದ್ದೇನು? ಫುಲ್ ಡೀಟೆಲ್ಸ್!!

Written By:

ಕೇವಲ ಆರು ತಿಂಗಳಲ್ಲಿ ಜಿಯೋ 100 ಮಿಲಿಯನ್ ಗ್ರಾಹರನ್ನು ತಲುಪಿದೆ. ಜಿಯೋ ನಾವು ಊಹೆ ಮಾಡಿದ್ದಕ್ಕಿಂತ ಹೆಚ್ಚು ಬೆಳೆದಿದೆ.! ಇದಕ್ಕೆ ಕಾರಣರಾದ ಜಿಯೋ ಗ್ರಾಹಕರೆಲ್ಲರಿಗೂ ಧನ್ಯವಾದ!! ಹೀಗೆ ಹೇಳಿ ಚಪ್ಪಾಳೆ ಗಿಟ್ಟಿಸಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ.!!

ಹೌದು, ಜಿಯೋ ಶೇರುದಾರರ ಸಮ್ಮುಖದಲ್ಲಿ "with Jio, Your Life is digital, and your life is beautiful" ಎಂದು ಮಾತನ್ನು ಆರಂಭಿಸಿದ ಅಂಬಾನಿ, ಜಿಯೋ ಬಿಡುಗಡೆಯಾದಗಿನಿಂದ ಪ್ರತಿ ಸೆಕೆಂಡ್‌ಗೆ 7 ಜನರು ಜಿಯೋಗೆ ಗ್ರಾಹಕರಾಗಿ ಬಂದಿದ್ದಾರೆ. 100 ಕೋಟಿಗೂ ಹೆಚ್ಚು GB ಡೇಟಾವನ್ನು ಜಿಯೋ ಗ್ರಾಹಕರು ಬಳಸಿದ್ದಾರೆ ಎಂದು ಮಾಹಿತಿ ನೀಡಿದರು.

ಮಾರ್ಚ್‌ನಂತರ ಜಿಯೋಗೆ ಎಷ್ಟು ರೀಚಾರ್ಜ್ ಮಾಡಿಸಬೇಕು? ಅಂಬಾನಿ ಇಂದು ಹೇಳಿದ್ದೇನು?

ಬಿಡುಗಡೆಯಾಗುತ್ತಿದೆ ನೋಕಿಯಾದ 2ನೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!..ಫೀಚರ್ಸ್ ಕೇಳಿದರೆ ಶಾಕ್!!

ಇನ್ನು 2018ರ ವೇಳೆಗೆ ಭಾರತದ ಎಲ್ಲಾ ಹಳ್ಳಿಗಳಲ್ಲಿಯೂ ಜಿಯೋ ತನ್ನ ಅತ್ಯುತ್ತಮ ಸೇವೆಯನ್ನು ನೀಡಲಿದ್ದು, ದೇಶದ 99 ಪರ್ಸೆಂಟ್ ಜನರನ್ನು ನಾವು ತಲುಪಲಿದ್ದೇವೆ ಎಂದು ಪ್ರತಿಜ್ಞೆ ಮಾಡಿದರು. ನಾವು ನಿಮ್ಮ ಸೇವೆಗೆ ನಿರಂತರವಾಗಿ ಶ್ರಮಿಸಲಿದ್ದೇವೆ. ಪ್ರತಿ ದಿನವೂ ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸಲಿದ್ದೇವೆ ಎಂದು ಹೇಳಿದರು.

ಮಾರ್ಚ್‌ನಂತರ ಜಿಯೋಗೆ ಎಷ್ಟು ರೀಚಾರ್ಜ್ ಮಾಡಿಸಬೇಕು? ಅಂಬಾನಿ ಇಂದು ಹೇಳಿದ್ದೇನು?

ಇನ್ನು ಜಿಯೋ ದರಪಟ್ಟಿಯನ್ನು ಬಿಡುಗಡೆ ಮಾಡಿದ ಅಂಬಾನಿ ಜಿಯೋವಿನ ಎಲ್ಲಾ ಊಹಪೋಹಗಳಿಗೂ ತೆರೆಎಳೆದರು. ಪ್ರತಿ ತಿಂಗಳಿಗೆ 303 ರೂಪಾಯಿಗಳ ರೀಚಾರ್ಜ್‌ಗೆ ಜಿಯೋವಿನ ಎಲ್ಲಾ ಸೇವೆಗಳನ್ನು ಪಡೆಯಬಹುದು ಎಂದು ತಿಳಿಸಿದರು. ಜೊತೆಗೆ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯಲು 99 ರೂ.ಮಾತ್ರ ಎಂದು ತಿಳಿಸಿದರು.

Read more about:
English summary
According to data consumed on Jio, users consumed over 100 cr GB data, more than 3.3 cr GB/day
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot