ಜಿಯೋ ಬಳಕೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ 61 ರೂಪಾಯಿಗೆ 10GB ಡೇಟಾ!
ಜಿಯೋ ತನ್ನ ವಿವಿಧ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಬಳಕೆದಾರರಿಗೆ ಹಲವು ಸೌಲಭ್ಯ ಕಲ್ಪಿಸಿಕೊಡುತ್ತಾ ಬರುತ್ತಿದೆ. ಅದರಲ್ಲೂ 5G ಸೇವೆ ನೀಡಲು ಮುಂಚೂಣಿಯಲ್ಲಿದ್ದು, ಈ ನಡುವೆ ಬಳಕೆದಾರರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಇದರಿಂದಾಗಿ ಸಾಕು ಎನ್ನುವಷ್ಟು ಡೇಟಾವನ್ನು ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು.
ಹೌದು, ರಿಲಯನ್ಸ್ ಜಿಯೋ ಬಳಕೆದಾರರಿಗೆ ಪ್ರಯೋಜನಕಾರಿಯಾದ ರೀಚಾರ್ಜ್ ಯೋಜನೆಗಳು ಮತ್ತು ಕೊಡುಗೆಗಳನ್ನು ಪರಿಚಯಿಸುತ್ತಲೇ ಬರುತ್ತಿದ್ದು, ಇತರೆ ಟೆಲಿಕಾಂ ಆಪರೇಟರ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಇದು ಅಗ್ಗದ ಬೆಲೆಯಲ್ಲಿ ಉತ್ತಮ ಸೌಲಭ್ಯ ನೀಡುವ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಈ ನಡುವೆ 61ರೂ.ಗಳ ಡೇಟಾ ಬೂಸ್ಟರ್ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚಿನ ಡೇಟಾ ನೀಡುತ್ತಿದೆ. ಹಾಗಿದ್ರೆ, ಈ ಪ್ಲ್ಯಾನ್‌ನಲ್ಲಿ ಒಟ್ಟಾರೆ ಎಷ್ಟು ಡೇಟಾ ಲಭ್ಯವಾಗಲಿದೆ ಎನ್ನುವುದನ್ನು ತಿಳಿಯಲು ಈ ಲೇಖನ ಓದಿರಿ.

ಜಿಯೋ 61ರೂ.ಗಳ ಪ್ಲ್ಯಾನ್: ಜಿಯೋ ಈಗಾಗಲೇ 61ರೂ.ಗಳ ಡೇಟಾ ಬೂಸ್ಟರ್ ಅನ್ನು ಪರಿಚಯಿಸಿದ್ದು, ಹೆಚ್ಚಿನ ಡೇಟಾ ಅಗತ್ಯ ಎನ್ನುವವರಿಗೆ ಅಗತ್ಯವಾದ ರೀಚಾರ್ಜ್ ಪ್ಲ್ಯಾನ್ ಆಗಿ ಗುರುತಿಸಿಕೊಂಡಿತ್ತು. ಅದರಲ್ಲೂ ಇದಕ್ಕೆ ಯಾವುದೇ ಮಾನ್ಯತೆ ದಿನಗಳು ಇಲ್ಲದಿದ್ದರಿಂದ ಸಾಕಷ್ಟು ಬಳಕೆದಾರರು ಈ ಪ್ಲ್ಯಾನ್‌ಕಡೆ ಮುಖ ಮಾಡುತ್ತಿದ್ದಾರೆ. ಈ ನಡುವೆ ಈ ಪ್ಲ್ಯಾನ್‌ನಲ್ಲಿ ಇದ್ದ ಈ ಹಿಂದಿನ ಡೇಟಾಗಿಂತ ಈಗ ಹೆಚ್ಚುವರಿಯಾಗಿ 4GB ಡೇಟಾ ಲಭ್ಯವಾಗುತ್ತಿದೆ.
ಜಿಯೋ ಗ್ರಾಹಕರು ಇನ್ಮುಂದೆ ಈ ಪ್ಲ್ಯಾನ್‌ನಲ್ಲಿ ಒಟ್ಟಾರೆ 10GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಕರೆ ಅಥವಾ ಎಸ್‌ಎಮ್‌ಎಸ್ ಪ್ರಯೋಜನಗಳು ಲಭ್ಯವಿರುವುದಿಲ್ಲ. ಈಗಾಗಲೇ ಸಕ್ರಿಯವಾಗಿರುವ ಪ್ಲ್ಯಾನ್‌ನ ಮಾನ್ಯತೆಯೊಳಗೆ ಈ ರೀಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಇನ್ನು 10GB ಡೇಟಾ ಖಾಲಿಯಾದ ನಂತರ 64Kbps ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು.

ಇನ್ನು ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ನಿಮಗೆ ಡೈಲಿ ಡೇಟಾ ಖಾಲಿಯಾಗುತ್ತದೆ ಎನ್ನುವ ಆತಂಕವೇ ಇರುವುದಿಲ್ಲ. ಅಗತ್ಯವಿರುವ ಸಮಯದಲ್ಲಿ ಈ ಡೇಟಾ ಬೂಸ್ಟರ್ ಸೂಕ್ತವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ಐಪಿಎಲ್ ವೀಕ್ಷಿಸುವಾಗ ಡೇಟಾ ಖಾಲಿಯಾದರೆ, ಈ ಡೇಟಾ ಮೂಲಕ ಅತ್ಯುತ್ತಮವಾಗಿ ಮ್ಯಾಚ್ ವೀಕ್ಷಣೆ ಮಾಡಬಹುದು ಅಥವಾ ಯಾವುದಾದರೂ ದೊಡ್ಡ ಫೈಲ್ ಅನ್ನು ಡೌನ್‌ಲೋಡ್ ಮಾಡುವಾಗ ಅಥವಾ ಅಪ್‌ಲೋಡ್ ಮಾಡುವಾಗ ಈ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಈ ಮೊದಲು ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಬಳಕೆದಾರರು ಒಟ್ಟಾರೆಯಾಗಿ 6GB ಡೇಟಾ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಆದರೆ, ಇನ್ಮುಂದೆ ನೀವು ಒಟ್ಟಾರೆಯಾಗಿ 10GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೆಚ್ಚುವರಿ 4GB ಡೇಟಾದ ಲಾಭ ಸಿಕ್ಕಿದಂತೆ ಆಗುತ್ತದೆ. ಇನ್ನುಳಿದಂತೆ ಇತರೆ ಜಿಯೋ ಡೇಟಾ ಬೂಸ್ಟರ್ ಪ್ಲ್ಯಾನ್ ಆಗಿರುವ 15ರೂ, 25ರೂ, 121ರೂ, 222 ರೂ.ಗಳ ಪ್ಲ್ಯಾನ್‌ಬಗ್ಗೆ ಕಣ್ಣಾಡಿಸೋಣ.
ಜಿಯೋದ 15 ರೂ.ಗಳ ಡೇಟಾ ಬೂಸ್ಟರ್ ಪ್ಲ್ಯಾನ್‌ನಲ್ಲಿ ಬಳಕೆದಾರರು 1GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು. ಇದರ ಮಾನ್ಯತೆ ದಿನಗಳು ನೀವು ಈಗಾಗಲೇ ಸಕ್ರಿಯಗೊಳಿಸಿಕೊಂಡಿರುವ ಪ್ಲ್ಯಾನ್‌ಗೆ ಸಮಾನವಾಗಿರುತ್ತದೆ. ಜೊತೆಗೆ 25ರೂ.ಗಳ ಪ್ಲ್ಯಾನ್‌ನಲ್ಲಿ 2GB ಡೇಟಾ ಲಭ್ಯವಾಗಲಿದೆ. ಹಾಗೆಯೇ 61ರೂ.ಗಳ ಪ್ಲ್ಯಾನ್‌ನಲ್ಲಿ 10GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಇನ್ನುಳಿದಂತೆ 121ರೂ.ಗಳ ಡೇಟಾ ಬೂಸ್ಟರ್ ಪ್ಲ್ಯಾನ್‌ನಲ್ಲಿ 12GB ಡೇಟಾ ಸೌಲಭ್ಯ ಸಿಗಲಿದ್ದು, 222ರೂ.ಗಳ ಜಿಯೋ ರೀಚಾರ್ಜ್ ಪ್ಯಾಕ್‌ನಲ್ಲಿ 50GB ಡೇಟಾ ಸೌಲಭ್ಯದ ಆಯ್ಕೆ ನೀಡಲಾಗಿದೆ. ಈ ಎಲ್ಲಾ ಪ್ಲ್ಯಾನ್‌ಗಳು ನೀವು ಈಗಾಗಲೇ ಒಂದು ತಿಂಗಳಿಗೋ ಅಥವಾ ಎರಡು, ಮೂರು ತಿಂಗಳಿಗೋ ಮಾಡಿಸಿಕೊಂಡಿರುವ ರೀಚಾರ್ಜ್ ಪ್ಲ್ಯಾನ್‌ಗಳ ಮಾನ್ಯತೆಯೊಂದಿಗೆ ಬರುತ್ತವೆ. ಈ ಎಲ್ಲಾ ಪ್ಲ್ಯಾನ್‌ಗಳಲ್ಲಿ ನಿಮಗೆ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇರುವುದಿಲ್ಲ.


Click it and Unblock the Notifications








