Home
ಸುದ್ದಿಜಾಲ

Jio: ಜಿಯೋದ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ ಭರ್ಜರಿ ಪ್ರಯೋಜನ, ನಿತ್ಯವೂ 2GB ಡೇಟಾ, 90 ದಿನಗಳ ಮಾನ್ಯತೆ

ಜಿಯೋ ಟೆಲಿಕಾಂ (Jio Telecom) ವಲಯದಲ್ಲಿ ಆಗಾಗ್ಗೆ ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕ ಹಟ್ಟಿಸುವ ಕೆಲಸ ಮಾಡುತ್ತಿರುತ್ತದೆ. ಅದರಂತೆ ಈಗಾಗಲೇ ಲಭ್ಯ ಇರುವ ಪ್ಲ್ಯಾನ್‌ಗಳಲ್ಲಿ ಅದರಲ್ಲೂ ಕಡಿಮೆ ಕಡಿಮೆ ದರದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದಾಗಿದೆ.

ಹೌದು, ಜಿಯೋ ಈಗಾಗಲೇ ಸಾಕಷ್ಟು ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋ‍ಷಣೆ ಮಾಡಿದೆ. ಈ ಪ್ಲ್ಯಾನ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಹಿನ್ನೆಲೆ ಇತರೆ ಟೆಲಿಕಾಂ ಗ್ರಾಹಕರು ಸಹ ಜಿಯೋದ ಕಡೆ ವಾಲುತ್ತಿದ್ದಾರೆ. ಈ ನಡುವೆ ನಿತ್ಯವೂ 2GB ಡೇಟಾ ಸೌಲಭ್ಯದ ಹಾಗೂ ದೀರ್ಘ ಮಾನ್ಯತೆ ದಿನ ಇರುವ ಪ್ಲ್ಯಾನ್ ಬೇಕು ಎಂದರೆ ನೀವು ಈ ಪ್ಲ್ಯಾನ್‌ ಕಡೆ ಮುಖ ಮಾಡಬಹುದು.

ಜಿಯೋದ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ ಭರ್ಜರಿ ಪ್ರಯೋಜನ, ನಿತ್ಯವೂ 2GB ಡೇಟಾ...

ಜಿಯೋ ರೀಚಾರ್ಜ್‌ ಪ್ಲ್ಯಾನ್‌: ಉಚಿತ ಕರೆ, ಎಸ್‌ಎಮ್‌ಎಸ್‌, ಡೇಟಾ ಮತ್ತು ಓಟಿಟಿ ಚಂದಾದಾರಿಕೆಗಳ ಸಂಯೋಜನೆಯನ್ನು ನೀಡುವ ಮೂಲಕ ಬಳಕೆದಾರರ ಅಗತ್ಯಗಳನ್ನು ಪೂರೈಸಲು ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನಿರಂತರವಾಗಿ ಆವಿಷ್ಕರಿಸುತ್ತಿವೆ. ಅದರಂತೆ ತನ್ನ ಬಳಕೆದಾರರ ವೈವಿಧ್ಯಮಯ ಅವಶ್ಯಕತೆಗಳನ್ನು ಗುರುತಿಸಿ, ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋ ದೀರ್ಘ-ವ್ಯಾಲಿಡಿಟಿ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ನೀಡಿದೆ.

749ರೂ.ಗಳ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್: ಜಿಯೋ ಬಳಕೆದಾರರಿಗೆ 90 ದಿನಗಳ ಮಾನ್ಯತೆಯ ಅವಧಿಯ ಹೊಸ ಪ್ಲ್ಯಾನ್‌ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಪ್ಲ್ಯಾನ್‌ನಲ್ಲಿ ಚಂದಾದಾರರು ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ಪಡೆಯಲಿದ್ದು, ಯೋಜನೆಯ ಅವಧಿಯ ಮೇಲೆ ಒಟ್ಟು 180GB ಮೊತ್ತವನ್ನು ಪಡೆಯಬಹುದಾಗಿದೆ. ಇದರೊಂದಿಗೆ ರಾಷ್ಟ್ರದಾದ್ಯಂತ ಯಾವುದೇ ಸಂಖ್ಯೆಗೆ ಅನಿಯಮಿತ ಕರೆ ಸೌಲಭ್ಯ ಇದ್ದು, ರಾಷ್ಟ್ರೀಯ ರೋಮಿಂಗ್‌ಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಇದರ ಜೊತೆಗೆ ಬಳಕೆದಾರರು ದಿನಕ್ಕೆ 100 ಉಚಿತ ಎಸ್‌ಎಂಎಸ್ ನ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಈ ಮೂಲಕ ತಡೆರಹಿತ ಸಂವಹನವನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಓಟಿಟಿ ಆಪ್‌ ಚಂದಾದಾರಿಕೆಗಳು ವೈವಿಧ್ಯಮಯ ಮನರಂಜನಾ ಆಯ್ಕೆಗಳನ್ನು ಸಹ ನೀಡುತ್ತದೆ. ಹಾಗೆಯೇ ಜಿಯೋನ ಟ್ರೂ 5G ನೆಟ್‌ವರ್ಕ್‌ನೊಂದಿಗೆ 5G ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುವ ಬಳಕೆದಾರರು ಅನಿಯಮಿತ ಉಚಿತ 5G ಇಂಟರ್ನೆಟ್ ಪ್ರಯೋಜನ ಪಡೆಯಲಿದ್ದಾರೆ.

ಜಿಯೋದ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ ಭರ್ಜರಿ ಪ್ರಯೋಜನ, ನಿತ್ಯವೂ 2GB ಡೇಟಾ...

749 ರೂ.ಗಳ ಈ ಪ್ಲ್ಯಾನ್‌ ಅನ್ನು 90 ದಿನಗಳಿಗೆ ವಿಭಾಗಿಸಿದ್ರೆ ಬಳಕೆದಾರರಿಗೆ ದಿನಕ್ಕೆ ಕೇವಲ 8 ರೂ.ಗಳು ಖರ್ಚಾದಂತೆ ಆಗಲಿದೆ. ಇದರ ಜೊತೆಗೆ ಟೆಲಿಕಾಂ ಕಂಪನಿಗಳು ಹೊಸತನವನ್ನು ಮುಂದುವರೆಸುತ್ತಿರುವುದರಿಂದ, ಬಳಕೆದಾರರು ಭವಿಷ್ಯದಲ್ಲಿ ಇನ್ನೂ ಹೆಚ್ಚು ಸೂಕ್ತವಾದ ಮತ್ತು ಸ್ಪರ್ಧಾತ್ಮಕ ಕೊಡುಗೆಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನು ಯಾರೆಲ್ಲಾ ಉಚಿತ ಕರೆ, ಎಸ್‌ಎಮ್‌ಎಸ್‌, ಡೇಟಾ ಮತ್ತು ಓಟಿಟಿ ಚಂದಾದಾರಿಕೆಗಳ ಸಂಯೋಜನೆಯನ್ನು ಪಡೆಯಲು ಇಷ್ಟ ಪಡುತ್ತಾರೋ ಅವರು ಈ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕಾರಣಕ್ಕೆ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ದೀರ್ಘ-ವ್ಯಾಲಿಡಿಟಿ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ನೀಡಿದೆ.

ಜಿಯೋ ಸ್ಮಾರ್ಟ್‌ಫೋನ್‌: ಈ ನಡುವೆ ಜಿಯೋ ಹೊಸ ಅಗ್ಗದ ಬೆಕೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ ಜಿಯೋ ಹಾಗೂ ಕ್ವಾಲ್ಕಾಮ್ ಒಟ್ಟಾಗಿ ಕೆಲಸ ಮಾಡಲಿವೆ. ಅಂದರೆ ಯುಎಸ್ ಮೂಲದ ಸೆಮಿಕಂಡಕ್ಟರ್ ತಯಾರಕ ಕ್ವಾಲ್ಕಾಮ್ ಮತ್ತು ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಜೊತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ

ಜಿಯೋದ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ ಭರ್ಜರಿ ಪ್ರಯೋಜನ, ನಿತ್ಯವೂ 2GB ಡೇಟಾ...

5G ಫೋನ್‌ಗಳು 10,000 ರೂ.ಗಳಿಗಿಂತ ಕಡಿಮೆ ಲಭ್ಯವಿಲ್ಲ. ಆದರೆ ಜಿಯೋ ಮತ್ತು ಕ್ವಾಲ್ಕಾಮ್ 8000 ರೂ.ಗಳ ಅಥವಾ $ 99 ರ ಅಡಿಯಲ್ಲಿ ಪ್ರಾರಂಭಿಸಲು ಪ್ರಯತ್ನಿಸುತ್ತಿವೆ. ಹೊಸ ಡಿವೈಸ್‌ 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಹಿಂದೆ ಜಿಯೋ ಗೂಗಲ್‌ನೊಂದಿಗೆ ಜಿಯೋಫೋನ್ ನೆಕ್ಸ್ಟ್ ಅನ್ನು ಘೋ‍ಷಣೆ ಮಾಡಿತ್ತು. ಇದು ಕೈಗೆಟುಕುವ 4G ಫೋನ್ ಆಗಿತ್ತು. ಆದರೆ ಹೆಚ್ಚಿನ ಯಶಸ್ಸನ್ನು ಇದು ತಂದುಕೊಡಲಿಲ್ಲ.

Best Mobiles in India

English summary
Jio plan with a validity period of 90 days will benefit Jio users in various ways. Subscribers will get 2GB high-speed data per day in this plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+