ಜಿಯೋ ಸಂಸ್ಥೆಯಿಂದ ವಿಶೇಷ ರೀಚಾರ್ಜ್ ಕೊಡುಗೆ!..ಸಿಗುತ್ತೆ ಹೆಚ್ಚುವರಿ ಪ್ರಯೋಜನ!

|

ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ಟೆಲಿಕಾಂ, ಇದೀಗ ಜೂನ್ ತಿಂಗಳ ಸ್ಪೇಷಲ್ ರಿಚಾರ್ಜ್ ಪ್ಯಾಕ್ ಆಫರ್ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋದ 4X ಆಫರ್ ಭಂಪರ್ ಪ್ರಯೋಜನಗಳನ್ನು ಹೊಂದಿದೆ.

ರಿಲಯನ್ಸ್ ಡಿಜಿಟಲ್

ಹೌದು, ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾಜ್ ಆಫರ್ ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ (Realince Digital, Ajio, Trends, Trends Footwere) ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.

ಜಿಯೋ ಬಳಕೆದಾರ

ಜಿಯೋ ಬಳಕೆದಾರರು ಜೂನ್‌ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈಜಿಯೊ, ಜಿಯೋ.ಕಾಮ್, ಜಿಯೋ ಪೋಸ್‌ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್‌ಪೇ / ಗೂಗಲ್‌ಪೇ / ಪೇಟಿಎಂ / ಅಮೆಜಾನ್ ಪೇ / ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.

ಕೂಪನ್

ಮೈಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ನೀವು ಕೂಪನ್‌ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.

ಜಿಯೋ ಹೊಸ ಯೋಜನೆ

ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ, ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ. ಅಂದಹಾಗೆ ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈಜಿಯೊದ ಕೂಪನ್ ವಿಭಾಗದಲ್ಲಿ ಕೂಪನ್‌ಗಳು ಲಭ್ಯವಿರುತ್ತವೆ.

Most Read Articles
Best Mobiles in India

English summary
Jio users will get discount coupons on rs 249 or more recharge.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X