Home
ಸುದ್ದಿಜಾಲ

ಜಿಯೋ 2121ರೂ. ಪ್ಲ್ಯಾನ್ : ರೀಚಾರ್ಜ್‌ ಮಾಡಿಸಲು ಯೋಗ್ಯವೇ?

ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಜಿಯೋ ಇದೀಗ ಮತ್ತೊಂದು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ ಬಿಡುಗಡೆ ಮಾಡಿದೆ. ಅದುವೇ ಜಿಯೋ 2121ರೂ. ಪ್ರೀಪೇಯ್ಡ್ ಪ್ಲ್ಯಾನ್. ಈ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಡೇಟಾ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಗ್ರಾಹಕರಿಗೆ ಉತ್ತಮವೇ?

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ 2121ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದೆ. ಹೊಸ 2121ರೂ. ಪ್ಲ್ಯಾನ್ ಜಿಯೋ ಈ ಹಿಂದೆ ಬಿಡುಗಡೆ ಮಾಡಿದ್ದ 2020ರೂ.ಪ್ರೀಪೇಯ್ಡ್ ಪ್ಲ್ಯಾನಿನಂತೆ ಆಗಿದೆ ಆದರೆ ವ್ಯಾಲಿಡಿಟಿಯಲ್ಲಿ ಬದಲಾವಣೆ ಮಾಡಿದೆ. ಅದನ್ನು ಹೊರತು ಪಡಿಸಿದರೇ ಡೇಟಾ, ವಾಯಿಸ್‌ ಕರೆ, ಜಿಯೋ ಆಪ್ಸ್‌ಗಳ ಪ್ರಯೋಜನಗಳಲ್ಲಿ ಮಹತ್ತರ ಬದಲಾವಣೆ ಏನು ಇಲ್ಲ. ಹಾಗಾದರೇ ಜಿಯೋದ ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಯೋಗ್ಯವೇ?..ಮುಂದೆ ಓದಿರಿ.

ಜಿಯೋ 2121ರೂ.ಪ್ಲ್ಯಾನ್ ಪ್ರಯೋಜನಗಳೆನು

ಜಿಯೋ 2121ರೂ.ಪ್ಲ್ಯಾನ್ ಪ್ರಯೋಜನಗಳೆನು

ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ಜಿಯೋ ಟು ಜಿಯೋ ವಾಯಿಸ್‌ ಕರೆಗಳು ಲಭ್ಯವಾಗಲಿದ್ದು, ಜಿಯೋದಿಂದ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೆ ಒಟ್ಟು 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಸೇವೆಯು ದೊರೆಯುತ್ತದೆ. ಇನ್ನು ಈ ಪ್ಲ್ಯಾನ್‌ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ವ್ಯಾಲಿಡಿಟಿಯಲ್ಲಿ ಭಿನ್ನತೆ

ವ್ಯಾಲಿಡಿಟಿಯಲ್ಲಿ ಭಿನ್ನತೆ

ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌ಗಳು 365 ದಿನಗಳ ಅವಧಿಯನ್ನು ಹೊಂದಿರುತ್ತವೆ. ಜಿಯೋದ ಈ ಹಿಂದಿನ 2020ರೂ. ಪ್ಲ್ಯಾನ್‌ 365 ದಿನಗಳ ವ್ಯಾಲಿಡಿಟಿ ಪಡೆದಿತ್ತು. ಆದರೆ ಹೊಸ 2121ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ವ್ಯಾಲಿಡಿಟಿ ಅವಧಿಯಲ್ಲಿ 29 ದಿನಗಳು ಇಳಿಕೆಯಾಗಿದೆ. ಹೀಗಾಗಿ ಜಿಯೋದ ಹೊಸ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಅನ್ನು ಒದಗಿಸುತ್ತದೆ.

ಏರ್‌ಟೆಲ್‌ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ ವಾರ್ಷಿಕ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ ಸಹ 2398ರೂ. ಬೆಲೆಯಲ್ಲಿ ವಾರ್ಷಿಕ ಪ್ರೀಪೇಡ್‌ ಯೋಜನೆಯನ್ನು ಹೊಂದಿದೆ. ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ದೇಶದ ಯಾವುದೇ ಟೆಲಿಕಾಂ ಕರೆಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಮತ್ತು ಏರ್‌ಟೆಲ್ ಆಪ್ಸ್‌ ಸೇವೆ ಸಹ ಇರಲಿದೆ.

ವೊಡಾಫೋನ್ ವಾರ್ಷಿಕ ಪ್ಲ್ಯಾನ್

ವೊಡಾಫೋನ್ ವಾರ್ಷಿಕ ಪ್ಲ್ಯಾನ್

ಅಳಿವಿನ ಅಂಚಿನಲ್ಲಿರುವ ವೊಡಾಫೋನ್ ಸಹ 2399ರೂ.ಪ್ರೈಸ್‌ನಲ್ಲಿ ವಾರ್ಷಿಕ ಪ್ಲ್ಯಾನ್ ಹೊಂದಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಯಾವುದೇ ಟೆಲಿಕಾಂ ಕರೆಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಮತ್ತು ವೊಡಾಫೋನ್ ಆಪ್ಸ್‌ ಸೇವೆ ಸಹ ಇರಲಿದೆ.

ಕೊನೆಯ ಮಾತು:ಯಾವುದು ಉತ್ತಮ?

ಕೊನೆಯ ಮಾತು:ಯಾವುದು ಉತ್ತಮ?

ಸದ್ಯ ದೇಶದ ಟೆಲಿಕಾಂ ಸಂಸ್ಥೆಗಳ ಸ್ಥಿತಿ ಸಂಕಷ್ಟದಲ್ಲಿದ್ದು, ಉಳಿವಿಗಾಗಿ ಹೆಣಗಾಡುತ್ತಿವೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಮೂರು ಟೆಲಿಕಾಂಗಳು ವಾರ್ಷಿಕ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಏರ್‌ಟೆಲ್ ಮತ್ತು ವೋಡಾಫೋನ್‌ಗಳ ಪ್ರಯೋಜನಗಳಲ್ಲಿ ಹೆಚ್ಚಿನ ಸಾಮ್ಯತೆ ಇದ್ದು, ಎರಡು ಒಂದೇ ಅನ್ನುವಂತೆ ಇವೆ. ಆದರೆ ಜಿಯೋ ಭಿನ್ನವಾಗಿದ್ದು, ಅವೆರಡಕ್ಕೂ ಹೋಲಿಸಿದರೇ ಬೆಲೆ ಸ್ವಲ್ಪ ಕಡಿಮೆ ಹಾಗೂ ವ್ಯಾಲಿಡಿಟಿ ಸಹ ಕಡಿಮೆ. ಆದರೆ ವೇಗದ ಡೇಟಾ ಮತ್ತು ಸಿಗ್ನಲ್ ವಿಷಯಗಳಲ್ಲಿ ಉತ್ತಮ ಅನಿಸುತ್ತದೆ.

Best Mobiles in India

English summary
Jio introduced Rs 2121 yearly plan with 336 days validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+