JioPhone 5G ಲೈವ್ ಫೋಟೋಗಳು ಲೀಕ್!..ಬೆಲೆ ಎಷ್ಟು?..ಯಾವಾಗ ಲಾಂಚ್?
ಭಾರತದಲ್ಲಿ ಜಿಯೋ ಸಂಸ್ಥೆಯು ಟೆಲಿಕಾಂ ವಲಯದಲ್ಲಿ ಆಫರ್‌ಗಳ ಮೂಲಕ ಟ್ರೆಂಡ್ ಹುಟ್ಟುಹಾಕಿದ್ದು, ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ಹಾಗೆಯೇ ಜಿಯೋ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದ್ದು, ಮುಂಬರುವ ಜಿಯೋಫೋನ್ 5G ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಜಿಯೋಫೋನ್ 5G ಲೈವ್ ಇಮೇಜ್‌ಗಳು ಕುತೂಹಲ ಹೆಚ್ಚಿಸಿವೆ.
ಹೌದು, ಜಿಯೋಫೋನ್ 5G (JioPhone 5G) ಲೈವ್ ಇಮೇಜ್‌ಗಳು ಟ್ವಿಟರ್‌ನಲ್ಲಿ ಕಾಣಿಸಿವೆ. ಟಿಪ್‌ಸ್ಟಾರ್ @ArpitNahiMila ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಜಿಯೋಫೋನ್ 5G ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ವಿಟಿರ್‌ನಲ್ಲಿ ಶೇರ್ ಮಾಡಿರುವ ಫೋಟೋಗಳು ಈಗ ಗ್ರಾಹಕರಲ್ಲಿ ಫೋನ್ ಬಗ್ಗೆ ಹೆಚ್ಚಿನ ಗಮನ ಸೆಳೆದಿವೆ.

ಅಂದಹಾಗೆ ಟಿಪ್‌ಸ್ಟರ್ ಪ್ರಕಾರ, ಮುಖೇಶ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ತನ್ನ ಜಿಯೋಫೋನ್ 5G (JioPhone 5G) ಮೊಬೈಲ್ ಅನ್ನು ದೀಪಾವಳಿ ಮತ್ತು ಹೊಸ ವರ್ಷದ ನಡುವೆ ಲಾಂಚ್ ಮಾಡುತ್ತದೆ ಎಂದಿದ್ದಾರೆ. ಹಾಗೆಯೇ ಜಿಯೋಫೋನ್ 5G ಗ್ರಾಹಕ ಸ್ನೇಹಿ ಬೆಲೆ ಹೊಂದಿರಲಿದ್ದು, ಸುಮಾರು 10,000 ರೂ. ಒಳಗೆ ಖರೀದಿಗೆ ಲಭ್ಯವಾಗಲಿದೆ ಎಂದಿದ್ದಾರೆ.
ಜಿಯೋ ಫೋನ್ 5G ನಿರೀಕ್ಷಿತ ಫೀಚರ್ಸ್‌ಗಳ ಮಾಹಿತಿ:
ಜಿಯೋ ಫೋನ್ 5G ಮೊಬೈಲ್ 90Hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದ್ದು, ಈ ಫೋನ್ 6.5 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಮೊಬೈಲ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಈ ಪ್ರೊಸೆಸರ್ ಎಂಟ್ರಿ ಲೆವೆಲ್ 5G ಪ್ರೊಸೆಸರ್ ಎನ್ನಲಾಗಿದೆ.
ಹಾಗೆಯೇ ಜಿಯೋಫೋನ್ 5G ಮೊಬೈಲ್ 4GB RAM ಮತ್ತು 32 GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ಸಾಮರ್ಥ್ಯದ ಆಯ್ಕೆ ಒಳಗೊಂಡಿರಲಿದೆ. ಜೊತೆಗೆ ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು, ಅದರ ಪ್ರಮುಖ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನುಳಿದಂತೆ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿರಲಿದೆ.
ಇನ್ನು ಫೋನಿನ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿರಲಿದೆ. ಇಷ್ಟೆ ಇಲ್ಲದೇ ಜಿಯೋಫೋನ್ 5G ಮೊಬೈಲ್ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದಿರಲಿದೆ ಎಂದು ಕೆಲವು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.
ಜಿಯೋಫೋನ್ 5G ಮೊಬೈಲ್ 4GB RAM ಆಂತರೀಕ ವೇರಿಯಂಟ್ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ಗೆ ಬೆಂಬಲವಾಗಿ ಆಂಡ್ರಾಯ್ಡ್ 12 (Android 12) ಓಎಸ್‌ನಲ್ಲಿ ಕೆಲಸ ಮಾಡಲಿದೆ. ಇದರೊಂದಿಗೆ ಈ ಫೋನ್ ಕನೆಕ್ಟಿಟಿವಿಗಾಗಿ ವೈ-ಫೈ 802.11 a/b/g/n, ಬ್ಲೂಟೂತ್ 5.1 ಆಯ್ಕೆಗಳು ಇರಲಿವೆ.
ಜಿಯೋಫೋನ್ ನೆಕ್ಸ್ಟ್ ಫೀಚರ್ಸ್ : ಇದೊಂದು ಅಗ್ಗದ ಬೆಲೆಯ ಎಂಟ್ರಿ ಲೆವೆಲ್ ಫೋನ್ ಆಗಿದೆ. ಈ ಫೋನ್ 5.45 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 2GB RAM ಮತ್ತು 32 GB ಮೆಮೊರಿ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ QM215 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಹಿಂಬದಿ ಸಿಂಗಲ್ ಕ್ಯಾಮೆರಾ ರಚನೆ ಒಳಗೊಂಡಿದೆ.
ಈ ಫೋನಿನ ರಿಯರ್ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದ್ದು, ಮುಂಭಾಗದ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಪಡೆದಿದೆ. ಜೊತೆಗೆ 3500 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋ ಮತ್ತು ಗೂಗಲ್ ಆಪ್ ಸಹ ಇದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್ ಮತ್ತು OTG ಬೆಂಬಲವನ್ನು ಒಳಗೊಂಡಿದೆ.


Click it and Unblock the Notifications








