ಭಾನುವಾರದಿಂದ 6 ದಶಲಕ್ಷ ಜಿಯೋ ಫೋನ್ ವಿತರಣೆ!!.ಗ್ರಾಮೀಣ ಪ್ರದೇಶಗಳಿಗೆ ಮೊದಲು!!
ಕೇವಲ 15 ದಿವಸಗಳಲ್ಲಿ ಗ್ರಾಮೀಣ ಮತ್ತು ಸಣ್ಣ ನಗರಗಳಿಗೆ ಮೊದಲು ಜಿಯೋ ಫೋನ್ ವಿತರಣೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.!!
ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ (RJIL) ಚಾನೆಲ್ ಪಾಲುದಾರನ ಪ್ರಕಾರ, 6 ಮಿಲಿಯನ್‌ನಷ್ಟು ಜಿಯೋ ಫೋನ್ ವಿತರಣೆ ಭಾನುವಾರದಿಂದ ಪ್ರಾರಂಭವಾಗಲಿದೆ ಮತ್ತು ಕೇವಲ 15 ದಿವಸಗಳಲ್ಲಿ ಗ್ರಾಮೀಣ ಮತ್ತು ಸಣ್ಣ ನಗರಗಳಿಗೆ ಮೊದಲು ಜಿಯೋ ಫೋನ್ ವಿತರಣೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.!!
ಮೀಣ ಮತ್ತು ನಗರಾಭಿವೃದ್ಧಿ ಕೇಂದ್ರಗಳ ನಡುವಿನ ಡಿಜಿಟಲ್ ವಿಭಜನೆಯನ್ನು ಜಿಯೋಫೋನ್ ಬ್ರಿಡ್ಜ್ ಮಾಡುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದು, ಆ ಕಾರಣಕ್ಕಾಗಿಯೇ, ಗ್ರಾಮೀಣ ಮತ್ತು ಸಣ್ಣ ನಗರಗಳಿಗೆ ಮೊದಲು ಜಿಯೋ ಫೋನ್ ವಿತರಣೆಯಾಗಲಿದೆ ಎನ್ನಲಾಗಿದೆ.!!

ಮೊದಲ 6 ದಶಲಕ್ಷ ಜಿಯೋಫೋನ್ ವಿತರಣೆ 10-15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿಗೆ ಈ ಬಗ್ಗೆ ವರದಿ ಮಾಡಿದೆ. ಆದರೆ, ಜಿಯೋ ಫೋನ್ ಮುಂದಿನ ಸುತ್ತಿನ ಬುಕ್ಕಿಂಗ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ ಎಂದು ಹೇಳಿದೆ.!!

ಆಗಸ್ಟ್ 24 ರಂದು ಪ್ರಾರಂಭವಾಗಿದ್ದ ಜಿಯೋ ಬುಕ್ಕಿಂಗ್‌ನಲ್ಲಿ 500 ರೂ.ಗೆ ಜಿಯೋ ಫೋನ್ ಬುಕ್ ಮಾಡಬಹುದಾಗಿತ್ತು. ಗ್ರಾಹಕನಿಗೆ ಫೋನ್ ತಲುಪಿದ ನಂತರ 1000ರೂ. ಪಾವತಿಸಿ ಮೊಬೈಲ್ ಪಡೆಯಬಹುದು.!! ಜಿಯೋ ಫೋನ್ ಉಚಿತ ಎಂದು ಹೇಳಿರುವ ಅಂಬಾನಿ ಮೂರು ವರ್ಷದ ನಂತರ ಪೂರ್ಣ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾರೆ.!!
ಓದಿರಿ: ಮೊಬೈಲ್ ಮೇಲೆ ವೈರಸ್ ದಾಳಿ ತಡೆಯುವ ಗೂಗಲ್ 'ಪ್ಲೇ ಪ್ರೊಟೆಕ್ಟ್' ಬಳಕೆ ಹೇಗೆ?


Click it and Unblock the Notifications








