ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಜೊತೆಗೆ ಸಿಗುತ್ತೆ ಉಚಿತ ಮೊಬೈಲ್!
ರಿಲಯನ್ಸ್ ಜಿಯೋ ಟೆಲಿಕಾಂ ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಲವು ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸುವ ಮೂಲಕ ಜಿಯೋ ಗ್ರಾಹಕರನ್ನು ಸೆಳೆದಿದೆ. ಜಿಯೋ ಪ್ರೀಪೇಯ್ಡ್, ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಇದರೊಂದಿಗೆ ಜಿಯೋ ಫೋನ್ ರೀಚಾರ್ಜ್ ಯೋಜನೆಗಳ ಆಯ್ಕೆಗಳನ್ನು ಒಳಗೊಂಡಿದೆ. ಜಿಯೋ ಫೋನ್ ರೀಚಾರ್ಜ್ ಪ್ಲ್ಯಾನ್‌ಗಳು ಸಹ ಆಕರ್ಷಕವಾಗಿವೆ. ಆ ಪೈಕಿ ಜಿಯೋ 1499ರೂ. ಪ್ಲ್ಯಾನ್ ನೊಂದಿಗೆ ಗ್ರಾಹಕರಿಗೆ ಸಿಗಲಿದೆ ಉಚಿತ ಮೊಬೈಲ್.

ಹೌದು, ಜಿಯೋ ಟೆಲಿಕಾಂ ಜಿಯೋ ಫೋನ್ ಗ್ರಾಹಕರಿಗಾಗಿ ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದೆ. ಹೊಸ ಗ್ರಾಹಕರಿಗೆ 1499ರೂ.ಗಳಿಗೆ ಒಂದು ವರ್ಷದ ವ್ಯಾಲಿಡಿಟಿ ಜೊತೆಗೆ ಒಂದು ಜಿಯೋ ಫೋನ್ ಉಚಿತವಾಗಿ ಲಭ್ಯ ಮಾಡಿದೆ. ಒಂದು ವರ್ಷದ ವ್ಯಾಲಿಡಿಟಿ ಅವಧಿಗೆ ವಾಯಿಸ್ ಕರೆ ಪ್ರಯೋಜನವನ್ನು ನೀಡುತ್ತದೆ. ಹಾಗಾದರೇ ಜಿಯೋ ಟೆಲಿಕಾಂನ ಜಿಯೋ ಫೋನ್ ಕೊಡುಗೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೋನ್ 1,499ರೂ. ಯೋಜನೆಯ ಪ್ರಯೋಜನಗಳು:
ಜಿಯೋ 1,499ರೂ. ಯೋಜನೆಯಲ್ಲಿ ಒಟ್ಟು 12 ತಿಂಗಳ ವ್ಯಾಲಿಡಿಟಿ ಸೌಲಭ್ಯ ಸಿಗಲಿದೆ. ಈ ಅವಧಿಗೆ ಅನಿಯಮಿತ ವಾಯಿಸ್ ಕರೆಗಳ ಸೇವೆ ಮತ್ತು ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ದೊರೆಯಲಿದೆ. ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಉಚಿತ ಜಿಯೋ ಫೋನ್ ಡಿವೈಸ್ ಲಭ್ಯವಾಗಲಿದೆ. ಹಾಗೆಯೇ ಜಿಯೋದ ಅಪ್ಲಿಕೇಶನ್‌ಗಳು ಲಭ್ಯವಾಗಲಿವೆ.

ಜಿಯೋ ಫೋನ್ 1,999ರೂ. ಯೋಜನೆಯ ಪ್ರಯೋಜನಗಳು:
ಜಿಯೋ ಫೋನ್ 1,999ರೂ. ಯೋಜನೆಯಲ್ಲಿ ಗ್ರಾಹಕರು ಉಚಿತ ಜಿಯೋ ಫೋನ್ ಡಿವೈಸ್ ಪಡೆಯುತ್ತಾರೆ. ಇದರೊಂದಿಗೆ 24 ತಿಂಗಳ (ಎರಡು ವರ್ಷ) ಉಚಿತ ಸೇವೆಯನ್ನು ಪಡೆಯುತ್ತಾರೆ ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ದೊರೆಯಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 48GB ಡೇಟಾ ಸಿಗಲಿದೆ. ಹಾಗೆಯೇ 24 ತಿಂಗಳುಗಳವರೆಗೆ ಬಳಕೆದಾರರು ಸಂಪೂರ್ಣ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು ಮತ್ತು ಅನಿಯಮಿತ ಡೇಟಾವನ್ನು ಬಳಸಬಹುದಾಗಿದೆ.

ಜಿಯೋ 75ರೂ. ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೂ ಉಚಿತ ಕರೆ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್
ಜಿಯೋ ಟೆಲಿಕಾಂನ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೂ ಉಚಿತ ಕರೆ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ಪ್ಲಾನ್
ಜಿಯೋದ ಈ 155ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೂ ಉಚಿತ ಕರೆ ಸೌಲಭ್ಯ ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.


Click it and Unblock the Notifications








