Home
ಸುದ್ದಿಜಾಲ

ಜಿಯೋ ಬಳಕೆದಾರರಿಗೆ ಮತ್ತೆ ಶಾಕ್‌; ಇಲ್ಲಿದೆ ಪೂರ್ಣ ಮಾಹಿತಿ!

ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರು ರಿಲಯನ್ಸ್ ಜಿಯೋ ಪರಿಚಯಿಸಿರುವ ಜಿಯೋಫೋನ್ ಈಗಾಗಲೇ ಭಾರತೀಯ ಬಳಕೆದಾರರನ್ನು ಆಕರ್ಷಿಸಿದೆ. ಜಿಯೋ ಫೋನ್‌ (JioPhone) ಒಂದು ಕೈಗೆಟುಕುವ ಫೀಚರ್ ಫೋನ್ ಆಗಿದ್ದು, ಅನೇಕರು ಈ ಫೋನ್ ಬಳಕೆ ಮಾಡುತ್ತಿದ್ದಾರೆ. ಆದ್ರೆ, ಜಿಯೋ ಸಂಸ್ಥೆಯು ತನ್ನ ಪ್ರಮುಖ ಜಿಯೋ ಫೋನ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ಇದೀಗ ದಿಢೀರ್ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ.

ಮುಕ್ತಾಯವಾಗಿದ್ದು

ಹೌದು, ಜಿಯೋ ಸಂಸ್ಥೆಯು ಆರಂಭದಲ್ಲಿ ಜಿಯೋಫೋನ್‌ (JioPhone) ಶುಲ್ಕಗಳನ್ನು ಗ್ರಾಹಕ ಸ್ನೇಹಿ ಬೆಲೆಯಲ್ಲಿ ನೀಡಿ ಗ್ರಾಹಕರನ್ನು ಆಕರ್ಷಿಸಿತು. ಆದರೆ ಜಿಯೋ ನೀಡಿದ್ದ್ ಆರಂಭ ಕೊಡುಗೆ ಇದೀಗ ಮುಕ್ತಾಯವಾಗಿದ್ದು, (introductory offer ends) ಟಾರೀಫ್‌ನಲ್ಲಿ ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ. ಬೆಲೆ ಬದಲಾವಣೆಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕಾಣಬಹುದಾಗಿದೆ.

ವ್ಯಾಲಿಡಿಟಿ

ಜಿಯೋಫೋನ್‌ ಟಾರೀಫ್‌ನಲ್ಲಿ ಈಗ ಏರಿಕೆ ಆಗಿದೆ. ಜಿಯೋಫೋನ್ 155 ರೂ. ಯೋಜನೆಯು ಈಗ 186ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅನ್ನು ನೀಡುತ್ತದೆ. ಹಾಗೆಯೇ ಜಿಯೋ ಫೋನ್ 185 ರೂ. ಪ್ಲಾನ್‌ ಇದೀಗ ಜಿಯೋ ಫೋನ್ 222 ರೂ. ಪ್ರೈಸ್‌ಟ್ಯಾಗ್‌ ನಲ್ಲಿ ಕಾಣಿಸಿದೆ. ಈ ಯೋಜನೆ ಸಹ 28 ದಿನಗಳ ವ್ಯಾಲಿಡಿಟಿ ಅನ್ನು ಒಳಗೊಂಡಿದೆ.

ವರ್ಷದ

ಹಾಗೆಯೇ ಜಿಯೋಫೋನ್‌ ಟಾರೀಫ್‌ನಲ್ಲಿ ಪ್ರೀಮಿಯಂ ಯೋಜನೆ ಆಗಿರುವ 748 ರೂ. ಯೋಜನೆಯು ಈಗ 899 ರೂ. ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಯೋಜನೆಯು ಒಂದು ವರ್ಷದ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಜಿಯೋಫೋನ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೋನ್ 75ರೂ. ರೀಚಾರ್ಜ್

ಜಿಯೋ ಫೋನ್ 75ರೂ. ರೀಚಾರ್ಜ್

ಇದು ಜಿಯೋ ಫೋನ್ ಗ್ರಾಹಕರಿಗೆ ಅತ್ಯಂತ ಮೂಲಭೂತ ಯೋಜನೆಯಾಗಿದೆ ಇದು ಕೇವಲ 23 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ರೂ 75 ಜಿಯೋ ಫೋನ್ ರೀಚಾರ್ಜ್ ಯೋಜನೆಯು ಒಟ್ಟು 2.5GB ಡೇಟಾವನ್ನು (0.1GB/ ದಿನ + 200 MB), ಉಚಿತ ಧ್ವನಿ ಕರೆಗಳು ಮತ್ತು 50 ಪಠ್ಯ ಸಂದೇಶಗಳನ್ನು ನೀಡುತ್ತದೆ. ಜಿಯೋ ತನ್ನ ಅಪ್ಲಿಕೇಶನ್‌ಗಳಾದ ಜಿಯೋ ಟಿವಿ, ಜಿಯೋಸಿನಿಮಾ, ಜಿಯೋನ್ಯೂಸ್ ಮತ್ತು ಹೆಚ್ಚಿನವುಗಳಿಗೆ ಗ್ರಾಹಕರಿಗೆ ಪೂರಕ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ಫೋನ್ 91ರೂ. ರೀಚಾರ್ಜ್

ಜಿಯೋ ಫೋನ್ 91ರೂ. ರೀಚಾರ್ಜ್

ಹಿಂದಿನ ರೂ 75 ಪ್ಲಾನ್ ಈಗ ಜಿಯೋ ಫೋನ್ ಗ್ರಾಹಕರಿಗೆ ರೂ 91 ಆಗಿದೆ. 28 ದಿನಗಳವರೆಗೆ ಮಾನ್ಯವಾಗಿರುವ ಈ ಜಿಯೋ ಫೋನ್ ರೀಚಾರ್ಜ್ ಯೋಜನೆಯು ಒಟ್ಟು 3 GB ಡೇಟಾವನ್ನು (0.1GB/ ದಿನ + 200 MB), ಉಚಿತ ಧ್ವನಿ ಕರೆಗಳು ಮತ್ತು 50 ಟೆಕ್ಸ್ಟ್‌ ಸಂದೇಶಗಳನ್ನು ನೀಡುತ್ತದೆ. ಜಿಯೋ ತನ್ನ ಅಪ್ಲಿಕೇಶನ್‌ಗಳಾದ ಜಿಯೋ ಟಿವಿ, ಜಿಯೋಸಿನಿಮಾ, ಜಿಯೋನ್ಯೂಸ್ ಮತ್ತು ಹೆಚ್ಚಿನವುಗಳಿಗೆ ಗ್ರಾಹಕರಿಗೆ ಪೂರಕ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ಫೋನ್ 125ರೂ. ರೀಚಾರ್ಜ್

ಜಿಯೋ ಫೋನ್ 125ರೂ. ರೀಚಾರ್ಜ್

ಜಿಯೋ ಫೋನ್ ರೀಚಾರ್ಜ್ ಬೆಲೆ 125 ರೂ. ಆಗಿದೆ. ಈ ಯೋಜನೆಯು 23 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಜಿಯೋ ಫೋನ್‌ನ ಪ್ರಯೋಜನಗಳು ಸಂಪೂರ್ಣ ಅವಧಿಗೆ 11.5GB ಡೇಟಾ, (500MB/ ದಿನ), ಮತ್ತು 23 ದಿನಗಳವರೆಗೆ 300 ಎಸ್‌ಎಮ್‌ಎಸ್‌ ಗಳ ಕೋಟಾವನ್ನು ಒಳಗೊಂಡಿರುತ್ತದೆ.

ಜಿಯೋ ಫೋನ್ 152ರೂ. ರೀಚಾರ್ಜ್

ಜಿಯೋ ಫೋನ್ 152ರೂ. ರೀಚಾರ್ಜ್

ಜಿಯೋ ಫೋನ್ ರೂ 125 ರೀಚಾರ್ಜ್ ಯೋಜನೆಯು 14 GB ಡೇಟಾ (500MB/ ದಿನ) ಹೆಚ್ಚಿನ ವೇಗದ ಡೇಟಾವನ್ನು ಪಡೆದಿದೆ. ಇನ್ನು ಈ ಯೋಜನೆಯು 28 ದಿನಗಳವರೆಗೆ 300 ಎಸ್‌ಎಮ್‌ಎಸ್‌ ಗಳ ಕೋಟಾವನ್ನು ಒಳಗೊಂಡಿರುತ್ತದೆ.

ಜಿಯೋ ಫೋನ್ 186ರೂ. ರೀಚಾರ್ಜ್

ಜಿಯೋ ಫೋನ್ 186ರೂ. ರೀಚಾರ್ಜ್

ಅದೇ ರೀತಿ, ಜಿಯೋ ಫೋನ್ ರೂ 155 ರೀಚಾರ್ಜ್ ಯೋಜನೆಯು ಈಗ ಜಿಯೋ ಫೋನ್ ಬಳಕೆದಾರರಿಗೆ ರೂ 186 ಕ್ಕೆ ಬರುತ್ತದೆ. ಈ ಯೋಜನೆಯು ಉಚಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಮ್‌ಎಸ್‌ ಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ದಿನಕ್ಕೆ 1GB ಡೇಟಾ ಪ್ರಯೋಜನದೊಂದಿಗೆ ಇನ್ನೂ ಲಭ್ಯವಿದೆ.

ಜಿಯೋ ಫೋನ್ 222ರೂ. ರೀಚಾರ್ಜ್

ಜಿಯೋ ಫೋನ್ 222ರೂ. ರೀಚಾರ್ಜ್

ಜಿಯೋ ಫೋನ್ 222ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅನ್ನು ಪಡೆದಿದೆ. ಈ ಯೋಜನೆಯು ಚಂದಾದಾರರಿಗೆ ದಿನಕ್ಕೆ 2 GB ಡೇಟಾವನ್ನು ನೀಡುತ್ತದೆ. ಇದು ಇಡೀ ತಿಂಗಳಿಗೆ 56 GB ಡೇಟಾವನ್ನು ನೀಡುತ್ತದೆ. ಉಳಿದ ಪ್ರಯೋಜನಗಳೆಂದರೆ ಪ್ರತಿದಿನ 100 ಎಸ್‌ಎಮ್‌ಎಸ್‌, ಅನಿಯಮಿತ ಉಚಿತ ಧ್ವನಿ ಕರೆಗಳು ಮತ್ತು ಪೂರಕ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ.

ಜಿಯೋಫೋನ್‌ 899ರೂ. ರೀಚಾರ್ಜ್ ಪ್ಲ್ಯಾನ್

ಜಿಯೋಫೋನ್‌ 899ರೂ. ರೀಚಾರ್ಜ್ ಪ್ಲ್ಯಾನ್

ಜಿಯೋಫೋನ್‌ ರೀಚಾರ್ಜ್‌ ಯೋಜನೆಗಳಲ್ಲಿ 899ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಆರಂಭಿಕ ಮೊಲದ 28 ದಿನಗಳ ಕಾಲ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ 50 ಎಸ್‌ಎಮ್‌ಎಸ್‌ ಲಭ್ಯವಾಗಲಿವೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದೆ.

ಜಿಯೋಫೋನ್ ನೆಕ್ಸ್ಟ್ ಫೀಚರ್ಸ್‌

ಜಿಯೋಫೋನ್ ನೆಕ್ಸ್ಟ್ ಫೀಚರ್ಸ್‌

ಜಿಯೋಫೋನ್ ನೆಕ್ಸ್ಟ್ 720 x 1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 5.45 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 215 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಪ್ರಗತಿ OS ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ. ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.

Best Mobiles in India

English summary
Jio Phone Tariff up 20 percent as introductory offer ends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+