Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಿಂತ ಜಿಯೋ ಪ್ಲ್ಯಾನ್‌ ಕಡಿಮೆಗೆ ಲಭ್ಯ

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್‌ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ, ರಿಲಯನ್ಸ್‌ ಜಿಯೋ ಟೆಲಿಕಾಂನ ಬಹುತೇಕ ಎಲ್ಲ ರೀಚಾರ್ಜ್‌ ಯೋಜನೆಗಳು ಈಗಲೂ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಕಾಣಿಸಿಕೊಂಡಿವೆ.

ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ.

ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಏರ್‌ಟೆಲ್‌, ವಿ ಗಿಂತ ಜಿಯೋ ಪ್ಲ್ಯಾನ್‌ಗಳು ಅಗ್ಗ

ಪ್ರವೇಶ ಮಟ್ಟದ ಬಳಕೆದಾರರಿಗೆ 28 ದಿನಗಳ ಪ್ರಿಪೇಯ್ಡ್ ಯೋಜನೆಯು ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 199ರೂ. ಆಗಿದೆ. ಆದರೆ ಜಿಯೋಫೋನ್‌ ಅಥವಾ ಜಿಯೋಭಾರತ್ ಬಳಕೆದಾರರು 28 ದಿನಗಳ ವರೆಗೆ 91 ರೂ. ಗಳ ಬೆಲೆಗೆ ಯೋಜನೆಗಳನ್ನು ಪಡೆಯಬಹುದು.

ಇನ್ನು ದೈನಂದಿನ 1GB ಡೇಟಾ ಪ್ರಯೋಜನದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 249 ರೂ. ಗಳಿಗೆ ಲಭ್ಯ ಇದೆ. ಆದರೆ ಇದೇ ಸೌಲಭ್ಯದ ಪ್ಲ್ಯಾನ್‌ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 299ರೂ. ಗಳ ದರದಲ್ಲಿ ಇವೆ. ಹೀಗಾಗಿ ಜಿಯೋ ಗ್ರಾಹಕರಿಗೆ ಈ ಯೋಜನೆಯಲ್ಲಿ ಸುಮಾರು 50ರೂ. ಉಳಿತಾಯ ಆದಂತೆ. ಹಾಗೆಯೇ ದಿನಕ್ಕೆ 1.5GB ಡೇಟಾ ಸೌಲಭ್ಯದ ಯೋಜನೆ ಬೆಲೆ ಜಿಯೋದಲ್ಲಿ 299ರೂ. ಇದೆ. ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 349ರೂ. ಗಳು ಆಗಿದೆ.

ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಏರ್‌ಟೆಲ್‌, ವಿ ಗಿಂತ ಜಿಯೋ ಪ್ಲ್ಯಾನ್‌ಗಳು ಅಗ್ಗ

ಅದೇ ರೀತಿ ದೈನಂದಿನ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಜಿಯೋದಲ್ಲಿ 349ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಬೆಲೆಯು 379ರೂ. ಗಳು ಆಗಿದೆ. ಹಾಗೆಯೇ ಪ್ರತಿದಿನ 2.5GB ಡೇಟಾ ಸೌಲಭ್ಯದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 399ರೂ. ಗಳಿಗೆ ಲಭ್ಯ ಇದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 409ರೂ. ಗಳಿಗೆ ಲಭ್ಯ.

ಹಾಗೆಯೇ ಪ್ರತಿದಿನ 2.5GB ಡೇಟಾ ಜೊತೆಗೆ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಯ ಹೊಸ ದರ ಜಿಯೋದಲ್ಲಿ 3599ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ 3599ರೂ. ಬೆಲೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ವಾರ್ಷಿಕ ವ್ಯಾಲಿಡಿಟಿ ಪ್ರಯೋಜನ ಲಭ್ಯವಾದರೂ, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಈ ವಾರ್ಷಿಕ ವ್ಯಾಲಿಡಿಟಿ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ ಶೇ. 20% ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.

ಅದೇ ರೀತಿ ಜಿಯೋ ಟೆಲಿಕಾಂನ 30GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಯೋಜನೆಯ ಬೆಲೆಯು 349ರೂ.ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆಯು 449ರೂ. ಗಳ ದರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಜಿಯೋದ 75GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 449ರೂ. ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನ 75GB ಡೇಟಾ ಪ್ರಯೋಜನದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 549ರೂ. ಗಳು ಆಗಿದೆ.

Best Mobiles in India

English summary
Jio plans are affordable than Airtel and Vi even after the price hike. check complete details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+