Home
ಸುದ್ದಿಜಾಲ

ಜಿಯೋ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ನೀವು ಈ ಪ್ಲ್ಯಾನ್‌ ಬೇಡ ಅನ್ನಲ್ಲ!

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಜಿಯೋ, ಏರ್‌ಟೆಲ್‌ ಸೇರಿದಂತೆ ವಿ ಟೆಲಿಕಾಂಗಳ ನಡುವೆ ನೇರ ಪೈಪೋಟಿ ಸಾಗಿದೆ. ಆ ಪೈಕಿ ಜಿಯೋ ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಮುಂದಿನ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯು ಬಹುತೇಕ ಯೋಜನೆಗಳು ದೈನಂದಿನ ಡೇಟಾ ಪ್ರಯೋಜನ ಪಡೆದುದ್ದು, ಆ ಪೈಕಿ ಪ್ರತಿದಿನ 3 GB ಡೇಟಾ ಒದಗಿಸುವ ಯೋಜನೆಗಳು ಅಧಿಕ ಡಿಮ್ಯಾಂಡ್‌ ಪಡೆದಿವೆ.

ಅನೇಕ ಮೊಬೈಲ್‌ ಬಳಕೆದಾರರು ಪ್ರತಿದಿನ ಅಧಿಕ ಡೇಟಾ ಪ್ರಯೋಜನ ವನ್ನು ಬಯಸುತ್ತಾರೆ. ಡೇಟಾ ಬಯಸುವವರಿಗೆ ಮುಖ್ಯವಾಗಿ ನಿತ್ಯವು 3 GB ಡೇಟಾ ಸೌಲಭ್ಯ ಒಳಗೊಂಡ ಪ್ಲ್ಯಾನ್‌ಗಳನ್ನು ಹೆಚ್ಚು ಆಕರ್ಷಕ ಎನಿಸುತ್ತವೆ. ಹೀಗಾಗಿ ಜಿಯೋ ಟೆಲಿಕಾಂ ಭಿನ್ನ ವ್ಯಾಲಿಡಿಟಿ ಆಯ್ಕೆಗಳೊಂದಿಗೆ ಡೈಲಿ 3 GB ಡೇಟಾ ಸೌಲಭ್ಯದ ಯೋಜನೆಗಳ ಆಯ್ಕೆ ಕೂಡಾ ಪಡೆದಿದೆ. ಹಾಗಾದರೆ ಜಿಯೋ ಟೆಲಿಕಾಂನ 3 GB ಡೇಟಾ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ನೀವು ಈ ಪ್ಲ್ಯಾನ್‌ ಬೇಡ ಅನ್ನಲ್ಲ!

ಜಿಯೋ 399ರೂ. ರೀಚಾರ್ಜ್‌ ಪ್ಲ್ಯಾನಿನ ಪ್ರಯೋಜನ ಹೀಗಿವೆ :
ಜಿಯೋ ಟೆಲಿಕಾಂನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ಹಾಗೆಯೇ 2GB ಎಕ್ಸ್‌ಟ್ರಾ ಡೇಟಾ ಕೂಡಾ ಲಭ್ಯ. ಒಟ್ಟಾರೆ ಅವಧಿಗೆ 90 GB ಡೇಟಾ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಜಿಯೋ ಆಪ್ಸ್‌ ಸಹ ದೊರೆಯುತ್ತವೆ.

ಜಿಯೋ 999ರೂ. ರೀಚಾರ್ಜ್‌ ಪ್ಲ್ಯಾನಿನ ಪ್ರಯೋಜನ ಹೀಗಿವೆ :
ಜಿಯೋ ಟೆಲಿಕಾಂನ 999ರೂ. ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ಇದರ ಜೊತೆಗೆ ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 252 GB ಡೇಟಾ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಜಿಯೋ ಆಪ್ಸ್‌ ಸಹ ದೊರೆಯುತ್ತವೆ.

ಜಿಯೋ 1499ರೂ. ರೀಚಾರ್ಜ್‌ ಪ್ಲ್ಯಾನಿನ ಪ್ರಯೋಜನ ಹೀಗಿವೆ :
ಜಿಯೋ ಟೆಲಿಕಾಂನ 999ರೂ. ಯೋಜನೆಯು ಕೂಡಾ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ಇದರ ಜೊತೆಗೆ ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 252 GB ಡೇಟಾ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಗ್ರಾಹಕರಿಗೆ ಸಿಗಲಿದೆ. ಇದಲ್ಲದೇ ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಸಹ ಸಿಗುತ್ತದೆ.

ಜಿಯೋ 219 ರೂ. ರೀಚಾರ್ಜ್‌ ಪ್ಲ್ಯಾನಿನ ಪ್ರಯೋಜನ ಹೀಗಿವೆ :
ಜಿಯೋ ಟೆಲಿಕಾಂನ 219ರೂ. ಯೋಜನೆಯು ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಇದು 14 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ಗ್ರಾಹಕರಿಗೆ ಸಿಗಲಿದ್ದು, ಹಾಗೆಯೇ 2GB ಎಕ್ಸ್‌ಟ್ರಾ ಡೇಟಾ ಕೂಡಾ ಲಭ್ಯ. ಒಟ್ಟಾರೆ ಅವಧಿಗೆ 44 GB ಡೇಟಾ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಜಿಯೋ ಆಪ್ಸ್‌ ಸಹ ದೊರೆಯುತ್ತವೆ.

Best Mobiles in India

English summary
Jio plans with 3GB data per day, unlimited calls and more benefits details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+