ಅಗ್ಗದ ಬೆಲೆಗೆ ಲಭ್ಯ ಇರುವ ಜಿಯೋ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಮಾಹಿತಿ ಇಲ್ಲಿದೆ!
ಮುಂಚೂಣಿಯ ಟೆಲಿಕಾಂ ಕಂಪನಿ ಎಂದೇ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಈಗಾಗಲೇ ಗ್ರಾಹಕರನ್ನು ತನ್ನತ್ತ ಆಕರ್ಷಿಸಿವೆ. ಇನ್ನು ಇತ್ತೀಚಿಗೆ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳ ದರದಲ್ಲಿಯೂ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ಎನಿಸಿದೆ. ಬೆಲೆ ಏರಿಕೆ ಬಳಿಕೆ ಹಾಗೆಯೇ ಜಿಯೋ ಸಂಸ್ಥೆಯು ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಯೋಜನೆಗಳು ಜಬರ್ದಸ್ತ್ ಪ್ರಯೋಜನಗಳನ್ನು ಒಳಗೊಂಡಿವೆ.
ಹೌದು, ಜಿಯೋ ಟೆಲಿಕಾಂ ಪ್ರೀಪೇಯ್ಡ್ ಯೋಜನೆಗಳಂತೆ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಯನ್ನು ಸಹ ಗ್ರಾಹಕರಿಗೆ ನೀಡಿದೆ. ಆ ಪೈಕಿ ಅಗ್ಗದ ಬೆಲೆಯಿಂದ ದುಬಾರಿ ದರದ ವರೆಗೂ ಭಿನ್ನ ಆಯ್ಕೆಯ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು ಇವೆ. ಅವುಗಳಲ್ಲಿ ಸುಮಾರು 500ರೂ. ಗಳ ಒಳಗಿನ ಪೋಸ್ಟ್‌ಪೇಯ್ಡ್ ಯೋಜನೆಗಳು ಅಧಿಕ ಆಕರ್ಷಣೆಯಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ 500 ರೂ. ಗಳ ಒಳಗಿನ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 399 ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 30 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ನಿಗದಿತ ಡೇಟಾ ಖಾಲಿ ಆದ ಬಳಿಕ ಪ್ರತಿ GB ಡೇಟಾ ಬಳಕೆಗೆ 10ರೂ ಶುಲ್ಕ ಆಗಲಿದೆ. ಇದರ ಜೊತೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ಸಹ ದೊರೆಯುತ್ತದೆ.
ಜಿಯೋ ಟೆಲಿಕಾಂನ 449ರೂ. ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 449 ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ನಿಗದಿತ ಡೇಟಾ ಖಾಲಿ ಆದ ಬಳಿಕ ಪ್ರತಿ GB ಡೇಟಾ ಬಳಕೆಗೆ 10ರೂ ಶುಲ್ಕ ಆಗಲಿದೆ. ಇದರ ಜೊತೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ಸಹ ದೊರೆಯುತ್ತದೆ. ಈ ಯೋಜನೆಯಲ್ಲಿ ಮೂರು ಫ್ಯಾಮಿಲಿ ಸಿಮ್ ಕಾರ್ಡ್ ಸೇವೆ ಪಡೆಯಬಹುದಾಗಿದೆ.
ಜಿಯೋ ಟೆಲಿಕಾಂನ 649ರೂ. ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 649ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯವಾಗಲಿದೆ. ಅಲ್ಲದೇ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ಸಹ ದೊರೆಯುತ್ತದೆ. ಈ ಯೋಜನೆಯಲ್ಲಿ ಯಾವುದೇ ಫ್ಯಾಮಿಲಿ ಸಿಮ್ ಕಾರ್ಡ್ ಸೇವೆ ಲಭ್ಯ ಇರುವುದಿಲ್ಲ.
ಜಿಯೋ ಟೆಲಿಕಾಂನ 749ರೂ. ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 749ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ನಿಗದಿತ ಡೇಟಾ ಖಾಲಿ ಆದ ಬಳಿಕ ಪ್ರತಿ GB ಡೇಟಾ ಬಳಕೆಗೆ 10ರೂ ಶುಲ್ಕ ಆಗಲಿದೆ. ಇದರ ಜೊತೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯವಾಗಲಿದೆ.
ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ಸಹ ದೊರೆಯುತ್ತದೆ. ಹಾಗೆಯೇ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಸೇವೆಗಳು ಲಭ್ಯ. ಈ ಯೋಜನೆಯಲ್ಲಿ ಮೂರು ಫ್ಯಾಮಿಲಿ ಸಿಮ್ ಕಾರ್ಡ್ ಸೇವೆ ಸಹ ದೊರೆಯುತ್ತದೆ.


Click it and Unblock the Notifications








