ಜಿಯೋ ರೀಚಾರ್ಜ್ ಮಾಡಿಸೋ ಮುನ್ನ ಈ ಎಲ್ಲ ಪ್ಲ್ಯಾನ್‌ಗಳ ಬಗ್ಗೆ ಒಮ್ಮೆ ಚೆಕ್‌ ಮಾಡಿ!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿ ಬೇರುರಿದೆ. ಅಧಿಕ ಡೇಟಾ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಜಿಯೋ ಟೆಲಿಕಾಂ 2021 ಹೊಸ ವರ್ಷಕ್ಕೆ ಜಿಯೋದಿಂದ ಇತರೆ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ನೀಡುವ ಮೂಲಕ ಮತ್ತೆ ಲೀಡ್‌ನಲ್ಲಿ ಕಾಣಿಸಿಕೊಂಡಿದೆ. ಜಿಯೋದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ 129ರೂ.ಗಳಿಂದ ಆರಂಭವಾಗುತ್ತವೆ.

ಹೌದು, ಜಿಯೋ ಸಂಸ್ಥೆಯು ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ದುಬಾರಿ ಬೆಲೆಯಲ್ಲಿ ಹಲವು ಭಿನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಕೆಲವು ಅಲ್ಪಾವಧಿಯ ಯೋಜನೆಗಳಾಗಿದ್ದು, ಇನ್ನು ಕೆಲವು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನದ ಪ್ಲ್ಯಾನ್‌ಗಳಾಗಿವೆ. ಇನ್ನೂ ಕೆಲ ಬಜೆಟ್‌ ದರದ ಜಿಯೋ ಯೋಜನೆಗಳು ವಾಯಿಸ್‌ ಕರೆ ಹಾಗೂ ಡೈಲಿ ಡೇಟಾ ಪ್ರಯೋಜನಗಳ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿವೆ. ಹಾಗಾದರೇ 2021 ಪ್ರಸಕ್ತ ವರ್ಷದ ರಿಲಾಯನ್ಸ್‌ ಜಿಯೋದ ಎಲ್ಲ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ 129ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 129ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇನ್ನು ಈ ಪ್ಲಾನ್ ಒಟ್ಟು 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ.

ಜಿಯೋದ 199ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 199ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ವಾಯಿಸ್‌ ಕರೆಗಳು ಅನಿಯಮಿತ ಉಚಿತವಾಗಿವೆ. ಜಿಯೋ ಆಪ್ಸ್‌ ಸೇವೆ ಲಭ್ಯ.

ಜಿಯೋ 249ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 249ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ ಸಹ ಲಭ್ಯ.

ಜಿಯೋ 329ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 329ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಜಿಯೋ 349ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 349ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಿದ್ದು, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ಈ ಯೋಜನೆಯು ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಜಿಯೋ ಆಪ್ಸ್‌ ಸೇವೆ ಲಭ್ಯ.

ಜಿಯೋ 399ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 399ರೂ. ಪ್ರೀಪೇಯ್ಡ್‌ ಪ್ಲಾನ್

ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್‌ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

ಜಿಯೋ 401ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 401ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ರೀಪೇಯ್ಡ್‌ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳ ಕರೆಗಳು ಸಹ ಅನಿಯಮಿತ ಉಚಿತ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಜಿಯೋ ಆಪ್ಸ್‌ ಲಭ್ಯ.

ಜಿಯೋ 444ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 444ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ.

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಆಲ್‌-ಇನ್‌-ಒನ್‌ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 999ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 999ರೂ. ಪ್ರೀಪೇಯ್ಡ್‌ ಪ್ಲಾನ್

ರಿಲಾಯನ್ಸ್ ಜಿಯೋ 999ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, 64Kbps ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಜೊತೆಗೆ ಉಚಿತ ಎಸ್‌ಎಮ್‌ಎಸ್‌ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 1299ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 1299ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 12000 ನಿಮಿಷಗಳ ಉಚಿತ ಅವಧಿ ಪಡೆದಿದೆ. ಇನ್ನೂ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹಾಗೆಯೇ ಈ ಪ್ಲ್ಯಾನಿನಲ್ಲಿ ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸಿಗುತ್ತವೆ. ಇದೊಂದು ವ್ಯಾಲಿಡಿಟಿ ಯೋಜನವಾಗಿದೆ.

ಜಿಯೋ 2121ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 2121ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಇನ್ನು ಈ ಪ್ಲ್ಯಾನ್‌ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಜಿಯೋ 2399ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 2399ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ ಹೊಸ 2,399ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 4999ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 4999ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನ್ ದೊಡ್ಡ ಮೊತ್ತದ ಪ್ಲ್ಯಾನ್ ಆಗಿದ್ದು, ಒಟ್ಟು 360 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 350GB ಡೇಟಾ ಸೌಲಭ್ಯ ಇರುತ್ತದೆ. ಹಾಗೆಯೇಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಉಳಿದಂತೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಲಭ್ಯವಾಗುತ್ತವೆ.

Best Mobiles in India

English summary
Jio Prepaid Plans 2021: Check Data Benefits, Plan Validity, Free Calls And More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X