Home
ಸುದ್ದಿಜಾಲ

ಜಿಯೋದ ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ 90GB ಡೇಟಾ ಜೊತೆ ಹೆಚ್ಚುವರಿ ಸೌಲಭ್ಯ!

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಲಿದ್ದು, ಜಿಯೋ ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ ಪರಿಚಯಿಸುತ್ತ ಮುನ್ನಡೆದಿದೆ. ಹಲವು ಅಧಿಕ ಡೇಟಾ ಯೋಜನೆಗಳನ್ನು ಪರಿಚಯಿಸಿರುವ ಜಿಯೋ ಡೇಟಾ ಜೊತೆಗೆ ಇದೀಗ OTT ಸೇವೆಗಳ ಸೌಲಭ್ಯ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಜಿಯೋ 401ರೂ. ಪ್ಲ್ಯಾನ್ ಈಗ ಮತ್ತಷ್ಟು ಆಕರ್ಷಕವಾಗಿದೆ.

401ರೂ. ಪ್ಲ್ಯಾನ್

ಹೌದು, ಜಿಯೋ ಟೆಲಿಕಾಂ 401ರೂ. ಪ್ಲ್ಯಾನ್ ನಲ್ಲಿ ಡೇಟಾ ಜೊತೆಗೆ 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾರಿಕೆ ಲಭ್ಯವಾಗುತ್ತದೆ. ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾರಿಕೆ ಶುಲ್ಕವು 399ರೂ. ಆಗಿದೆ. ಆದರೆ ಈ ಪ್ಲ್ಯಾನಿನಲ್ಲಿ ಉಚಿತವಾಗಿ ಲಭ್ಯವಾಗುತ್ತದೆ. ಇದರೊಂದಿಗೆ ಒಟ್ಟು 90GB ಡೇಟಾ ಪ್ರಯೋಜನ ಹಾಗೂ ಜಿಯೋ ಅಪ್ಲಿಕೇಶನ್‌ಗಳ ಸೌಲಭ್ಯವು ಸಹ ದೊರೆಯುವುದು. ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಜಿಯೋ 401ರೂ. ಪ್ಲ್ಯಾನ್

ಜಿಯೋ 401ರೂ. ಪ್ಲ್ಯಾನ್

ಜಿಯೋ ಟೆಲಿಕಾಂನ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಸಿಗುತ್ತದೆ. ಪೂರ್ಣ ಅವಧಿಗೆ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಉಚಿತವಾಗಿ ಡಿಸ್ನಿ + ಹಾಟ್‌ಸ್ಟಾರ್ VIP ಪಡೆಯುವುದು ಹೇಗೆ?

ಉಚಿತವಾಗಿ ಡಿಸ್ನಿ + ಹಾಟ್‌ಸ್ಟಾರ್ VIP ಪಡೆಯುವುದು ಹೇಗೆ?

ಜಿಯೋ ಬಳಕೆದಾರರು ರೂ.401ಕ್ಕೆ ದೊರೆಯಲಿರುವ ಮಾಸಿಕ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಂಡರೆ 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ಇದರೊಂದಿಗೆ 90 GB ಡಾಟಾ, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಹೊಸದಾಗಿ ಈ ಯೋಜನೆಯೊಂದಿಗೆ ಬಳಕೆದಾರರಿಗೆ 399 ರೂ.ಗಳ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ 1 ವರ್ಷದ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ದೊರೆಯಲಿದೆ.

ಚಲನಚಿತ್ರಗಳು

ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಇತ್ತೀಚಿನ ಬ್ಲಾಕ್‌ಬಸ್ಟರ್ ಬಾಲಿವುಡ್ ಚಲನಚಿತ್ರಗಳಿಗೆ (ಬಾಘಿ 3, ಆಂಗ್ರೆಜಿ ಮಧ್ಯಮ, ತನ್ಹಾಜಿ), ಸೂಪರ್ ಹೀರೋ ಚಲನಚಿತ್ರಗಳು (ಅವೆಂಜರ್ಸ್: ಎಂಡ್ ಗೇಮ್), ಇತ್ತೀಚಿನ ಅನಿಮೇಷನ್ ಚಲನಚಿತ್ರಗಳು (ದಿ ಲಯನ್ ಕಿಂಗ್, ಫ್ರೋಜನ್) ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಲಾದ ಜಾಗತಿಕ ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು ಪದರ್ಶಿಸಲಿದೆ. II), ಮಕ್ಕಳ ನೆಚ್ಚಿನ ಪಾತ್ರಗಳು (ಮಿಕ್ಕಿ ಮೌಸ್, ಡೊರೊಮನ್), ಎಕ್ಸ್‌ಕ್ಲೂಸಿವ್ ಹಾಟ್‌ಸ್ಟಾರ್ ವಿಶೇಷಗಳು (ವಿಶೇಷ ಓಪ್ಸ್, ಕ್ರಿಮಿನಲ್ ಜಸ್ಟೀಸ್), ಅನಿಯಮಿತ ಲೈವ್ ಕ್ರೀಡೆಗಳು ಮತ್ತು ಇನ್ನಷ್ಟು ಶೋಗಳು ಇದರಲ್ಲಿ ದೊರೆಯಲಿದೆ.

Best Mobiles in India

English summary
Jio costs Rs 401 and offers 3GB data per day. Along with the 3G high-speed data every day, the plan also ships with additional data of 6GB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+