ಜಿಯೋ ಗ್ರಾಹಕರೇ?..ಅಧಿಕ ಇಂಟರ್ನೆಟ್ ಅಗತ್ಯವೇ?..ಹಾಗಿದ್ರೆ ಈ ಪ್ಲ್ಯಾನ್ ಬೆಸ್ಟ್!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಟೆಲಿಕಾಂಗಳು ಪ್ರತಿದಿನ ಡೇಟಾ ಪ್ರಯೋಜನ ಒದಗಿಸುವ ಹಲವು ಪ್ರೀಪೇಯ್ಡ್ ಆಯ್ಕೆಗಳನ್ನು ಹೊಂದಿವೆ. ಆ ಪೈಕಿ ರಿಲಾಯನ್ಸ್ ಜಿಯೋ ಸಹ ಭಿನ್ನ ಶ್ರೇಣಿಯಲ್ಲಿ ಅಧಿಕ ಡೇಟಾ ಯೋಜನೆಗಳ ಆಯ್ಕೆಯನ್ನು ಪಡೆದಿವೆ. ಅವುಗಳಲ್ಲಿ ಕೆಲವು ಪ್ಲ್ಯಾನ್‌ಗಳು ಅಧಿಕ ಡೇಟಾ ಸೌಲಭ್ಯದ ಪ್ರಯೋಜನ ಹೊಂದಿವೆ. ಹಾಗೆಯೇ ಬಜೆಟ್ ದರದಲ್ಲಿಯೇ ಅತ್ಯುತ್ತಮ ಯೋಜನೆಗಳ ಆಯ್ಕೆ ಇದೆ.
ಹೌದು, ರಿಲಾಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಹಲವು ಗ್ರಾಹಕ ಸ್ನೇಹಿ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಲಿಸ್ಟ್ ಅನ್ನು ಹೊಂದಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಅಧಿಕ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಡೇಟಾ ಪ್ರಯೋಜನದ ಸೌಲಭ್ಯಗಳನ್ನು ಒಳಗೊಂಡಿವೆ. ಸದ್ಯ ಮುಖ್ಯವಾಗಿ ಪ್ರತಿದಿನ 2GB ಡೇಟಾ ಒದಗಿಸುವ ಜಿಯೋ ಪ್ಲ್ಯಾನ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದು, ಗ್ರಾಹಕರು ಅಂತಹ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವುದೇ ಹೆಚ್ಚು. ಹಾಗಾದರೆ ಪ್ರತಿದಿನ 2GB ಡೇಟಾ ಒದಗಿಸುವ ಜಿಯೋದ ಬೆಸ್ಟ್ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಜಿಯೋ 249ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೂ ಉಚಿತ ಸೌಲಭ್ಯ ಇದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 56GB ಡೇಟಾ ಪ್ರಯೋಜನ ದೊರೆಯುತ್ತದೆ.

ಜಿಯೋ 444ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. ಈ ಪ್ಲ್ಯಾನಿನಲ್ಲಿ ಒಟ್ಟು 112GB ಡೇಟಾ ಲಭ್ಯವಾಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೂ ಉಚಿತ ನಿಮಿಷಗಳ ಸೌಲಭ್ಯ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ ಪೂರ್ಣ ಅವಧಿಗೆ ಒಟ್ಟು 2000 ಎಸ್ಎಮ್ಎಸ್‌ಗಳ ಪ್ರಯೋಜನ.

ಜಿಯೋ 599ರೂ. ಪ್ಲ್ಯಾನ್
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೂ ಉಚಿತ ನಿಮಿಷಗಳ ಸೌಲಭ್ಯ ಹೊಂದಿದೆ.

ಜಿಯೋ 349ರೂ. ಪ್ಲ್ಯಾನ್
ಜಿಯೋ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಪೂರ್ಣ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಹೊಂದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೂ ಉಚಿತ ನಿಮಿಷಗಳ ಸೌಲಭ್ಯ ಹೊಂದಿದೆ. ಅಂದಹಾಗೆ ಈ ಪ್ಲ್ಯಾನಿ ಒಟ್ಟು 28 ದಿನಗಳ ಪ್ಯಾಲಿಡಿಟಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಒಟ್ಟು 84GB ಡೇಟಾ ಒದಗಿಸುತ್ತದೆ.


Click it and Unblock the Notifications








