ಜಿಯೋದ ಈ ಪ್ಲ್ಯಾನ್ ರೀಚಾರ್ಜ್ ಮಾಡಲು ಯೋಗ್ಯವೇ?. ಸಿಗುತ್ತೆ 1095GB ಡೇಟಾ!
ರಿಲಾಯನ್ಸ್ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಜಿಯೋ ಟೆಲಿಕಾಂ ಅಲ್ಪಾವಧಿ ಯೋಜನೆಗಳ ಜೊತೆಗೆ ದೀರ್ಘಾವಧಿ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ಅಧಿಕ ಡೇಟಾ ಪ್ರಯೋಜನ ಪಡೆದ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ. ಮುಖ್ಯವಾಗಿ ಜಿಯೋ 4199ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಕರ್ಷಕ ಎನಿಸಿದ್ದು, ಇದು ವಾರ್ಷಿಕ ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಸೌಲಭ್ಯ ಪಡೆದಿದೆ. ಈ ದುಬಾರಿ ಪ್ಲ್ಯಾನ್ ರೀಚಾರ್ಜ್ ಮಾಡಲು ಸೂಕ್ತವೇ?

ಹೌದು, ಜಿಯೋ ಟೆಲಿಕಾಂನ 4199ರೂ. ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದ್ದು, ವಾರ್ಷಿಕ ವ್ಯಾಲಿಡಿಟಿ ಸಹ ಪಡೆದಿದೆ. ಇದರೊಂದಿಗೆ ಜಿಯೋ ಆಪ್ಸ್‌ಗಳ ಪ್ರಯೋಜನಗಳು ಸಹ ಲಭ್ಯವಾಗಲಿವೆ. ಹಾಗಾದರೇ ಜಿಯೋದ 4199ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಯೋಗ್ಯವೇ? ಹಾಗೂ ಇತರೆ ಜನಪ್ರಿಯ ಜಿಯೋ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 4199ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 4,199ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ.

ಜಿಯೋ ಟೆಲಿಕಾಂ 2999ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಜಿಯೋದ 2879ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋದ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 2545ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 2545ರೂ. ಪ್ರಿಪೇಯ್ಡ್ ಪ್ಲಾನ್ 336 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಒಂದು ವರ್ಷದ ಅವಧಿಗೆ ಸ್ವಲ್ಪ ಕಡಿಮೆ ಆದರೂ ವಾರ್ಷಿಕ ಪ್ಲಾನ್ ಅಂತಾನೇ ಇದನ್ನು ಪರಿಗಣಿಸಬಹುದಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 1.5 GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು ಅವಧಿಗೆ 504 GB ಡೇಟಾ ಪ್ರಯೋಜನ ದೊರೆಯಲಿದೆ.


Click it and Unblock the Notifications








