ಅಧಿಕ ಡೇಟಾ ಸೌಲಭ್ಯ ಇರುವ ಜಿಯೋದ ಪ್ಲ್ಯಾನ್‌ಗಳ ಲಿಸ್ಟ್ ಇಲ್ಲಿದೆ!.ನಿಮ್ಮ ಆಯ್ಕೆ ಯಾವುದು?
ಟೆಲಿಕಾಂ ದಿಗ್ಗಜ ರಿಲಯನ್ಸ್ ಜಿಯೋ ( Jio ) ಸಂಸ್ಥೆಯು ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದೆ. ಆ ಪೈಕಿ ಪ್ರತಿ ನಿತ್ಯ 3 GB ಡೇಟಾ ಪ್ರಯೋಜನ ಒದಗಿಸುವ ಜಿಯೋ ರೀಚಾರ್ಜ್ ಯೋಜನೆಗಳು ಅಧಿಕ ಡೇಟಾ ಅಗತ್ಯ ಇರುವ ಬಳಕೆದಾರರಿಗೆ ಅತ್ಯುತ್ತಮ ಎನಿಸಿವೆ. ಈ ರೀಚಾರ್ಜ್ ಯೋಜನೆಗಳಲ್ಲಿ ಪ್ರತಿದಿನ ಡೇಟಾ ಸೌಲಭ್ಯದ ಜೊತೆಗೆ ಓಟಿಟಿ ಚಂದಾದಾರಿಕೆಯಂತಹ ಸೌಲಭ್ಯ, ಅಲ್ಲದೇ ಕೆಲವು ಹೆಚ್ಚುವರಿ ಪ್ರಯೋಜನಗಳ ಸಹ ಲಭ್ಯ ಆಗಲಿವೆ.
ಹೌದು, ಮುಂಚೂಣಿಯ ಟೆಲಿಕಾಂ ಎನಿಸಿರುವ ಜಿಯೋ ( Jio Telecom ) ಕಂಪನಿಯು ಭಿನ್ನ ಡೇಟಾ ಸೌಲಭ್ಯದ ಯೋಜನೆಗಳ ಆಯ್ಕೆ ನೀಡಿದೆ. ಆ ಲಿಸ್ಟ್‌ನಲ್ಲಿ ಮುಖ್ಯವಾಗಿ ಪ್ರತಿದಿನ 1 GB ಡೇಟಾ ಸೌಲಭ್ಯ, 2 GB ಡೇಟಾ ಸೌಲಭ್ಯ ಮತ್ತು 3 GB ಡೇಟಾ ಸೌಲಭ್ಯದ ಯೋಜನೆಗಳು ಸೇರಿವೆ. ಪ್ರಮುಖವಾಗಿ ಅಧಿಕ ಡೇಟಾ ಸೌಲಭ್ಯ ಪಡೆದಿರುವ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳು ಅಧಿಕ ಬೇಡಿಕೆ ಪಡೆದಿವೆ. ಹಾಗಾದರೇ 3GB ಡೇಟಾ ಪ್ರಯೋಜನ ಪಡೆದ ಜಿಯೋ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 1799ರೂ. ಪ್ಲ್ಯಾನ್ ಮಾಹಿತಿ
ಜಿಯೋ (Jio) ಸಂಸ್ಥೆಯ 1799ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 252 GB ಡೇಟಾ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 sms ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಸದಸ್ಯತ್ವ ಸೌಲಭ್ಯದ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ಸಹ ಲಭ್ಯ.
ಜಿಯೋ 1199ರೂ. ಪ್ಲ್ಯಾನ್ ಮಾಹಿತಿ
ಜಿಯೋ ಸಂಸ್ಥೆಯ 1199ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 252 GB ಡೇಟಾ ಸೌಲಭ್ಯ ಸಹ ಸಿಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 sms ಪ್ರಯೋಜನ ಸಹ ಲಭ್ಯ.
ಜಿಯೋ 499ರೂ. ಪ್ಲ್ಯಾನ್ ಮಾಹಿತಿ
ಜಿಯೋ ಸಂಸ್ಥೆಯ 499ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 84 GB ಡೇಟಾ ಪ್ರಯೋಜನ ಕೂಡಾ ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ.


Click it and Unblock the Notifications








