Home
ಸುದ್ದಿಜಾಲ

350ರೂ. ಒಳಗೆ ಲಭ್ಯವಿರುವ ಜಿಯೋ ಪ್ಲ್ಯಾನ್‌ಗಳ ಸಂಪೂರ್ಣ ಮಾಹಿತಿ!

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಅತ್ಯುತ್ತಮ ಡೇಟಾ ಪ್ಲ್ಯಾನ್‌ಗಳಿಂದ ಗ್ರಾಹಕನ್ನು ಸೆಳೆದಿದೆ. ಜಿಯೋ ಕಳೆದ ಡಿಸೆಂಬರ್‌ನಲ್ಲಿ ತನ್ನ ಪ್ರೀಪೇಯ್ಡ್‌ ಯೋಜನಗಳ ದರದಲ್ಲಿ ಬದಲಾವಣೆ ಮಾಡಿದ್ದರೂ, ತನ್ನ ಜನಪ್ರಿಯತೆ ಉಳಿಸಿಕೊಂಡು ಮುನ್ನಡೆದಿದೆ. ಸದ್ಯ ಜಿಯೋ ಟೆಲಿಕಾಂನ ಪ್ರೀಪೇಯ್ಡ್‌ ಯೋಜನೆಗಳಲ್ಲಿ ಅಗ್ಗದ ಬೆಲೆಯಿಂದ ಹೈ ಎಂಡ್‌ ದರದ ಪ್ಲ್ಯಾನ್‌ಗಳು ಇವೆ. ಆದರೆ ಬಹುತೇಕರಿಗೆ ಅಗ್ಗದ ಪ್ಲ್ಯಾನ್‌ಗಳು ಭಿನ್ನ ಪ್ರಯೋಜನಗಳಿಂದ ಗಮನ ಸೆಳೆದಿದೆ.

ಜಿಯೋ

ಹೌದು, ಜಿಯೋ ಸಂಸ್ಥೆಯು ಭಿನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಅಲ್ಪಾವಧಿಯ ಪ್ಲ್ಯಾನ್‌ಗಳಿದ್ದು, ಇನ್ನು ಕೆಲವು ದೀರ್ಘಾವಧಿಯ ಯೋಜನೆಗಳಾಗಿವೆ. ಇನ್ನೂ ಕೆಲ ಜಿಯೋ ಯೋಜನೆಗಳು ವಾಯಿಸ್‌ ಕರೆ ಹಾಗೂ ಡೇಟಾ ಪ್ರಯೋಜನವನ್ನು ಹೊಂದಿದ್ದರೇ, ಮತ್ತೆ ಕೆಲವು ಬರೀ ಡೇಟಾ ವೋಚರ್‌ಗಳಾಗಿವೆ. ಹೀಗಾಗಿ ಜಿಯೋದ ಎಲ್ಲ ಪ್ಲ್ಯಾನ್‌ಗಳು ಭಿನ್ನ ಬೆಲೆಯಲ್ಲಿದ್ದು, ಭಿನ್ನ ಪ್ರಯೋಜನಗಳನ್ನು ಹೊಂದಿವೆ. 350ರೂ. ಬೆಲೆಯ ಒಳಗೆ ಇರುವ ಜಿಯೋ ಟೆಲಿಕಾಂನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜಿಯೋ 129ರೂ. ಪ್ಲಾನ್

ಜಿಯೋ 129ರೂ. ಪ್ಲಾನ್

ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ 1000 ನಿಮಿಷಗಳ ಕರೆ ಮಿತಿಯನ್ನು ಪಡೆದಿರುವ ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋದ 149ರೂ ಪ್ಲ್ಯಾನ್

ಜಿಯೋದ 149ರೂ ಪ್ಲ್ಯಾನ್

ಜಿಯೋದ 149ರೂ ಪ್ಲ್ಯಾನ್ ಸಹ 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು, ಹಾಗೂ ಜಿಯೋ ಟು ಜಿಯೋ ಸಂಪೂರ್ಣ ಉಚಿತ ಕರೆಗಳ ಸೌಲಭ್ಯ ಇದ್ದು, ಇತರೆ ನೆಟ್‌ವರ್ಕ್‌ ಕರೆಗಳಿಗೆ 300 ನಿಮಿಷಗಳ ಮಿತಿ ಇದೆ.

ಜಿಯೋದ 199ರೂ ಪ್ಲ್ಯಾನ್

ಜಿಯೋದ 199ರೂ ಪ್ಲ್ಯಾನ್

ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಅನಿಯಮಿತ ಕರೆಗಳ ಸೌಲಭ್ಯ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ಕರೆಗಳಿಗೆ 1000 ನಿಮಿಷದ ಕರೆ ಮಿತಿ ಇದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಸಿಗುತ್ತವೆ.

ಜಿಯೋ 249ರೂ. ಪ್ಲ್ಯಾನ್

ಜಿಯೋ 249ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 1,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 329ರೂ. ಪ್ಲ್ಯಾನ್

ಜಿಯೋ 329ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ವಾಯಿಸ್‌ ಕರೆಗಾಗಿ ಒಟ್ಟು 3000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಜಿಯೋ 349ರೂ. ಪ್ಲ್ಯಾನ್

ಜಿಯೋ 349ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಿದ್ದು, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ವಾಯಿಸ್‌ ಕರೆಗಾಗಿ ಒಟ್ಟು 1000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Jio Prepaid Recharge Plans Under Rs. 350: Check Out Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+