ಗ್ರಾಹಕರಿಗೆ ದಿಢೀರ್ ಬಿಗ್ ಶಾಕ್ ನೀಡಿದ ಜಿಯೋ ಟೆಲಿಕಾಂ!
ಇತ್ತೀಚಿಗೆ ಟೆಲಿಕಾಂ ಸಂಸ್ಥೆಗಳು ಪ್ರಿಪೇಯ್ಡ್ ಯೋಜನೆಗಳ ಬೆಲೆಯಲ್ಲಿ ಮತ್ತೆ ಏರಿಕೆ ಮಾಡುವ ಬಗ್ಗೆ ಯೋಚನೆಯಲ್ಲಿವೆ. ಈ ನಡುವೆ ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಜಿಯೋ ಸಂಸ್ಥೆಯು ತನ್ನ ಪ್ರಮುಖ ಪ್ಲ್ಯಾನ್ ಒಂದರ ಬೆಲೆಯಲ್ಲಿ ಇದೀಗ ದಿಢೀರ್ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

ಹೌದು, ಜಿಯೋ ಟೆಲಿಕಾಂ ಜಿಯೋ ಫೋನ್ 749ರೂ. ಯೋಜನೆಯಲ್ಲಿ ಈಗ 150 ರೂ. ಹೆಚ್ಚಿಸಿದೆ. ಈ ಬೆಲೆ ಏರಿಕೆಯು ಕೇವಲ ಒಂದು ಯೋಜನೆಗೆ ಮಾತ್ರ ಅನ್ವಯಿಸಲಾಗಿದೆ. ಇನ್ನು ಉಳಿದಂತೆ ಇತರೆ ಜಿಯೋಫೋನ್ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.

ಜಿಯೋ 749ರೂ. ಯೋಜನೆಯ ಬೆಲೆ ಏರಿಕೆ
ಜಿಯೋ ಫೋನ್ 4G ಫೀಚರ್ ಫೋನ್ ಅನ್ನು ಖರೀದಿಸಲು ಗ್ರಾಹಕರಿಗೆ ವಿವಿಧ ಆಯ್ಕೆಗಳು ಲಭ್ಯ ಇವೆ. ಅವು ಕ್ರಮವಾಗಿ 1999ರೂ, 1499ರೂ. ಮತ್ತು 749ರೂ. ಯೋಜನೆಗಳು ಆಗಿವೆ. ಗ್ರಾಹಕರು ಈ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಇವುಗಳಲ್ಲಿ ಜಿಯೋ ಕಂಪನಿಯು ಇದೀಗ 749ರೂ. ಯೋಜನೆಯಲ್ಲಿ ಏರಿಕೆ ಮಾಡಿದ್ದು, ಈಗ 899ರೂ. ಆಗಿದೆ. ಈ ಯೋಜನೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್ 899ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ ರೀಚಾರ್ಜ್ ಯೋಜನೆ 899ರೂ. ರೀಚಾರ್ಜ್ ಪ್ಲ್ಯಾನ್ 1 ವರ್ಷದ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಜಿಯೋಫೋನ್ ಸಹ ಲಭ್ಯ. ಇದರೊಂದಿಗೆ ವರ್ಷವಿಡೀ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಿಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24 GB ಡೇಟಾ ಸೌಲಭ್ಯ ಲಭ್ಯವಿದೆ. ಇದರೊಂದಿಗೆ, ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೂ ಸಹ ಲಭ್ಯವಿದೆ.

ಜಿಯೋಫೋನ್ 1,499ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ 1,499ರೂ. ರೀಚಾರ್ಜ್ ಪ್ಲ್ಯಾನ್ ಈ ಯೋಜನೆಯಲ್ಲಿ 12 ತಿಂಗಳ ಅವಧಿಗೆ ಅನಿಯಮಿತ ವಾಯಿಸ್ ಕರೆಗಳ ಸೇವೆ ಮತ್ತು ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು 24GB ಡೇಟಾ ಲಭ್ಯವಾಗಲಿದೆ.

ಜಿಯೋಫೋನ್ 1,999.ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ 1,999.ರೂ ಯೋಜನೆಯಲ್ಲಿ ಗ್ರಾಹಕರು ಜಿಯೋಫೋನ್ ಡಿವೈಸ್ ಮತ್ತು 24 ತಿಂಗಳ ಉಚಿತ ಸೇವೆಯನ್ನು ಪಡೆಯುತ್ತಾರೆ (ಪ್ರತಿ ತಿಂಗಳು 2GB ಡೇಟಾ). 24 ತಿಂಗಳುಗಳವರೆಗೆ ಬಳಕೆದಾರರು ಸಂಪೂರ್ಣ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು ಮತ್ತು ಅನಿಯಮಿತ ಡೇಟಾವನ್ನು ಬಳಸಬಹುದಾಗಿದೆ.

ಜಿಯೋ 75ರೂ. ರೀಚಾರ್ಜ್ ಪ್ಲಾನ್ ಸೌಲಭ್ಯಗಳು
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ರೀಚಾರ್ಜ್ ಪ್ಲಾನ್ ಸೌಲಭ್ಯಗಳು
ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.


Click it and Unblock the Notifications








