Home
ಸುದ್ದಿಜಾಲ

ಜಿಯೋದ ಹೊಸ ಪ್ಲ್ಯಾನ್‌ಗಳಲ್ಲಿ ಈ ಯೋಜನೆಯು ಅತ್ಯಂತ ಅಗ್ಗದ ಬೆಲೆಗೆ ಲಭ್ಯ!

ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ಇಂದಿನಿಂದ (ಜುಲೈ 3 ರಿಂದ) ತಮ್ಮ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿವೆ. ಬೆಲೆ ಏರಿಕೆಯು ಚಂದಾದಾರರಿಗೆ ಬಿಸಿತುಪ್ಪ ಎನಿಸಿದ್ದು, ಬೆಲೆ ಏರಿಕೆ ಬಳಿಕ ಯಾವ ಪ್ಲ್ಯಾನ್‌ ಅತ್ಯುತ್ತಮ ಎಂದು ನೋಡುತ್ತಿದ್ದಾರೆ. ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಟೆಲಿಕಾಂ ಸಹ ಬೆಲೆ ಏರಿಕೆ ಮಾಡಿದ್ದು, ಅದಾಗ್ಯೂ, ಜಿಯೋ ಸಂಸ್ಥೆಯ ಒಂದು ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಆಕರ್ಷಕ ಎನಿಸುತ್ತದೆ. ಅದು ಯಾವ ಪ್ಲ್ಯಾನ್‌ ಅಂತೀರಾ?

ಹೌದು, ಜಿಯೋ ಟೆಲಿಕಾಂ ಸಂಸ್ಥೆ ಕೂಡಾ ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿ ಅಚ್ಚರಿ ಮೂಡಿಸಿದೆ. ಅದಾಗ್ಯೂ, ಜಿಯೋದ 189ರೂ ರೀಚಾರ್ಜ್‌ ಯೋಜನೆ ಅಗ್ಗದ ಬೆಲೆಯಲ್ಲಿ ಸದ್ಯ ಆಕರ್ಷಕ ಎನಿಸಿಕೊಂಡಿದೆ. ಈ ಯೋಜನೆಯು ಹೆಚ್ಚು ಡೇಟಾ ಅಗತ್ಯ ಇರದ ಬಳಕೆದಾರರಿಗೆ ಸೂಕ್ತ ಎನಿಸುತ್ತದೆ. ಇನ್ನುಳಿದಂತೆ ಜಿಯೋದ ಈ ಯೋಜನೆಯ ಪೂರ್ಣ ಪ್ರಯೋಜನಗಳು ಏನು? ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಮಾಹಿತಿ ಮುಂದೆ ನೋಡಿರಿ.

ಜಿಯೋದ ಹೊಸ ಪ್ಲ್ಯಾನ್‌ಗಳಲ್ಲಿ ಈ ಯೋಜನೆಯು ಅತ್ಯಂತ ಅಗ್ಗದ ಬೆಲೆಗೆ ಲಭ್ಯ!

ಜಿಯೋ 189ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ 189ರೂ. ಯೋಜನೆಯ ಹಿಂದಿನ ಬೆಲೆ 155ರೂ ಆಗಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ 2GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ.

ಜಿಯೋ 249ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ 249ರೂ. ಯೋಜನೆಯ ಹಿಂದಿನ ಬೆಲೆ 209ರೂ ಆಗಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ ಪ್ರತಿದಿನ 1GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ.

ಜಿಯೋ 299ರೂ. ಯೋಜನೆ

ಜಿಯೋ ಟೆಲಿಕಾಂನ 299ರೂ. ಯೋಜನೆಯ ಹಿಂದಿನ ಬೆಲೆ 239ರೂ ಆಗಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ ಪ್ರತಿದಿನ 1.5 GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ.

ಜಿಯೋ 579ರೂ. ಯೋಜನೆ

ಜಿಯೋ ಟೆಲಿಕಾಂನ 579ರೂ. ಯೋಜನೆಯ ಹಿಂದಿನ ಬೆಲೆ 479ರೂ ಆಗಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ ಪ್ರತಿದಿನ 1.5 GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ.

ಜಿಯೋ 629ರೂ. ಯೋಜನೆ

ಜಿಯೋ ಟೆಲಿಕಾಂನ 629ರೂ. ಯೋಜನೆಯ ಹಿಂದಿನ ಬೆಲೆ 533ರೂ ಆಗಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ ಪ್ರತಿದಿನ 2 GB ಡೇಟಾ ಸೌಲಭ್ಯ ಪಡೆದುಕೊಂಡಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ.

ಜಿಯೋದ 999ರೂ. ದರದ ಪ್ಲ್ಯಾನ್‌ ಈಗ 1199 ರೂ. ಬೆಲೆಯಲ್ಲಿ ಲಭ್ಯ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 3GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ 2999ರೂ. ಬೆಲೆಯ ಪ್ಲ್ಯಾನ್‌ 3599ರೂ. ಗಳಿಗೆ ಜಿಗಿತ ಕಂಡಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ದಿನವೂ 2.5 GB ಡೇಟಾ ನೀಡುತ್ತದೆ.

Best Mobiles in India

English summary
Jio Price Hike: This Jio Recharge Plan is value for money. check all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+