ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೇ ಸರಳ ವಿಧಾನ.!

Written By:

ಕೇಂದ್ರ ಸರ್ಕಾರವೂ ಆಧಾರ್ ಬಳಕೆಯನ್ನು ಹೆಚ್ಚು ಮಾಡುವ ಸಲುವಾಗಿ ಅನೇಕ ಕಡೆಗಳಲ್ಲಿ ಆಧಾರ್ ಬಳಕೆಯನ್ನು ಕಡ್ಡಾಯ ಮಾಡಲು ಮುಂದಾಗಿದೆ. ಬ್ಯಾಂಕ್ ವ್ಯವಹಾರ, ಸರ್ಕಾರಿ ಸೌಲಭ್ಯ ಪಡೆಯಲು, ಶಾಲೆಗೆ ಪ್ರವೇಶ ಪಡೆಯಲು ಸೇರಿದಂತೆ ಎಲ್ಲಾ ಕಡೆಯೂ ಆಧಾರ್ ಇರಲೇಬೇಕು ಎಂಬ ನಿಯಮವನ್ನು ಜಾರಿಗೆ ತರುತ್ತಿದೆ.

ಹಾಗೆಯೇ ಆದಾಯ ತೆರಿಗೆ ಪಾವತಿ ಮಾಡಲು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೀಗೆ ಪ್ರತಿ ಹಂತದಲ್ಲಿಯೂ ಆಧಾರ್ ಅವಶ್ಯಕವಾಗಿದೆ. ಶೀಘ್ರವೇ ವಿಮಾನಯಾನಕ್ಕೂ ಆಧಾರ ಕಡ್ಡಾಯ ಮಾಡುವ ಸಾಧ್ಯತೆಯೂ ಇದೆ. ಈ ಹಿನ್ನಲೆಯಲ್ಲಿ ಈಗಾಗಲೇ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..?

ಈ ಬಾರಿಯಿಂದ ಆದಾಯ ತೆರಿಗೆ ಕಟ್ಟಬೇಕಾದರೆ ಪಾನ್ ನೊಂದಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ. ಜು.1ರಿಂದ ಹೊಸ ನಿಯಮಾವಳಿ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಪಾನ್ ನೊಂದಿಗೆ ಆಧಾರ್‌ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಆಧಾರ್‌ ಕಡ್ಡಾಯ ಯಾಕೆ..?

ಆಧಾರ್‌ ಕಡ್ಡಾಯ ಯಾಕೆ..?

ಸದ್ಯ ಆದಾಯ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವ ಸಲುವಾಗಿ ಆಧಾರ್-ಪಾನ್ ಲಿಂಕ್ ಮಾಡುವುದನ್ನು ಸರಕಾರ ಕಡ್ಡಾಯ ಮಾಡಲು ಮುಂದಾಗಿದೆ.

ತೆರಿಗೆ ವಂಚನೆ ಬ್ರೇಕ್‌ ಹಾಕಲು:

ತೆರಿಗೆ ವಂಚನೆ ಬ್ರೇಕ್‌ ಹಾಕಲು:

ಆಧಾರ್ ಲಿಂಕ್ ಮಾಡುವುದರಿಂದ ವ್ಯಕ್ತಿಯ ವಿಳಾಸ, ಇತರ ಮಾಹಿತಿಗಳನ್ನು ಸುಲಭವಾಗಿ ಪರೀಕ್ಷಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಪಾನ್ ಹೊಂದಿರುವವರ ವ್ಯವಹಾರಗಳನ್ನು ಪತ್ತೆ ಮಾಡುವುದು ಸುಲಭವಾಗಲಿದೆ. ಇದರಿಂದ ತೆರಿಗೆ ವಂಚನೆ ಬ್ರೇಕ್‌ ಹಾಕಬಹುದಾಗಿದೆ.

ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ ಹೊಂದುವುದನ್ನು ತಡೆಯಲು:

ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ ಹೊಂದುವುದನ್ನು ತಡೆಯಲು:

ಕೆಲವು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಪಾನ್‌ ನಂಬರ್‌ಗಳನ್ನು ಹೊಂದಿರುವ ಕಾರಣ ಆಧಾರ್ ಲಿಂಕ್ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ ವಿತರಣೆ ತಡೆಯಬಹುದಾಗಿದೆ. ಒಮ್ಮೆ ಪಾನ್‌ಸಂಖ್ಯೆಯೊಂದಿಗೆ ಆಧಾರ ಜೋಡಿಸಿದ ಬಳಿಕ ಮತ್ತೆ ಇನ್ನೊಂದು ಪಾನ್ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಲು ಸಾಧ್ಯವಿಲ್ಲ.

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಆನ್‌ಲೈನ್‌ನಲ್ಲಿ ಪಾನ್ - ಆಧಾರ್‌ ಲೀಕ್ ಮಾಡುವುದು ಹೇಗೆ..?

ಆನ್‌ಲೈನ್‌ನಲ್ಲಿ ಪಾನ್ - ಆಧಾರ್‌ ಲೀಕ್ ಮಾಡುವುದು ಹೇಗೆ..?

ಸರ್ಕಾರವೂ ಆಧಾರ್ ಬಳಕೆಯನ್ನು ಕಡ್ಡಾಯ ಮಾಡುತ್ತಿರುವ ಹಿನ್ನಲೆಯಲ್ಲಿ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಆನ್‌ಲೈನ್‌ನಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಈ ಕೆಳಗಿನ ಹಂತಗಳಲ್ಲಿ ಈ ಎರಡನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಓದಿರಿ: ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಹಂತ 01:

ಹಂತ 01:

ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಂಡು, ಆದಾಯ ತೆರಿಗೆ ಇಲಾಖೆಯ (https://incometaxindiaefiling.gov.in/) ವೈಬ್ ಸೈಟ್ ತೆರೆಯಿರಿ.

ಹಂತ 02:

ಹಂತ 02:

ರಿಜಿಸ್ಟರೆಷನ್ ಮಾಡಿಕೊಳ್ಳುವ ಸಲುವಾಗಿ, ವೈಬ್‌ಸೈಟಿನಲ್ಲಿರುವ ರಿಜಿಸ್ಟರೆಷನ್ ಬಟನ್ ಕ್ಲಿಕ್ ಮಾಡಿ, ನಂತರ ಕಂಪನಿ ಇಲ್ಲವೇ, ವೈಯಕ್ತಿಕ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ ಕಟಿನ್ಯೂ ಆಯ್ಕೆಯನ್ನು ಕ್ಲಿಕ್ ಮಾಡಿರಿ, ನಂತರದಲ್ಲಿ ನಿಮ್ಮ ಪಾನ್‌ ಸಂಖ್ಯೆ, ಜನ್ಮ ದಿನಾಂಕ ಮತ್ತ ಪಾಸ್‌ ವರ್ಡ್‌ ಹಾಕಿ ಲಾಗಿನ್‌ ಆಗಿರಿ.

ಹಂತ 03:

ಹಂತ 03:

ಲಾಗಿನ್‌ ಆದ ನಂತರ ವೈಬ್ ಸೈಟಿನಲ್ಲಿ ನಿಮಗೆ ಪಾಪ್‌ ಅಪ್‌ ವಿಂಡೋ ಓಪನ್ ಆಗಲಿದ್ದು, ಅಲ್ಲಿ ಪಾನ್‌ನೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವಂತೆ ತಿಳಿಸುತ್ತದೆ. ಅಲ್ಲಿ ಬಟನ್ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಡಬಹುದಾಗಿದೆ.

ಹಂತ 04:

ಹಂತ 04:

ಅಲ್ಲಿಯೇ ಮುಖಪುಟದಲ್ಲಿ "ಪ್ರೊಫೈಲ್‌ ಸೆಟ್ಟಿಂಗ್' ಎಂಬ ಆಯ್ಕೆಯೊಂದು ದೊರೆಯಲಿದೆ. ಅಲ್ಲ ಕ್ಲಿಕ್‌ ಮಾಡಿದರೆ ಪಾಪ್‌ ಅಪ್‌ ವಿಂಡೋ ಕೆಳಭಾಗದಲ್ಲಿ "ಲಿಂಕ್‌ ಆಧಾರ್' ಎಂಬ ಆಯ್ಕೆಯನ್ನು ನೀಡಲಾಗಿದೆ ಅಲ್ಲಿ ಕ್ಲಿಕ್‌ ಮಾಡಿ.

ಹಂತ 05:

ಹಂತ 05:

ಅಲ್ಲಿ ನಿಮ್ಮ ಪಾನ್‌ ಸಂಖ್ಯೆ, ಹುಟ್ಟಿದ ದಿನಾಂಕ ಈಗಾಗಲೇ ನಮೂದಿರುವಂತೆ ಇರಲಿದ್ದು, ನಂತರ ಅಲ್ಲಿ 12 ಸಂಖ್ಯೆಗಳ ಆಧಾರ್‌ ಸಂಖ್ಯೆ ನಮೂದಿಸುವಂತೆ ತಿಳಿಸಲು ಖಾಲಿ ಜಾವನ್ನು ಬಿಟ್ಟಿರಲಾಗುತ್ತದೆ. ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆ ನಮೂದಿಸಿದ ಬಳಿಕ ಕೆಳಗೆ ನೀಡಿರುವ ಕೋಡ್‌ ಅನ್ನು ನಮೂದಿಸಿ ಬಳಿಕ 'ಲಿಂಕ್‌ ಆಧಾರ್‌ ಬಟನ್' ಕ್ಲಿಕ್ ಮಾಡಿರಿ.

ಹಂತ 06:

ಹಂತ 06:

ನೀವು ನೀಡಿರುವ ಆಧಾರ್‌ ಸಂಖ್ಯೆ ಮತ್ತು ಪಾನ್‌ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳು ಹೊಂದಾಣಿಕೆಯಾದ ನಂತರದಲ್ಲಿ ಆಧಾರ್‌-ಪಾನ್‌ ಲಿಂಕ್ ಯಶಸ್ವಿಯಾಗಿದೆ ಎಂಬ ಮೇಸೆಜ್ ಕಾಣಿಸಿಕೊಳ್ಳಲಿದೆ.

ಹಂತ 07:

ಹಂತ 07:

ಒಂದು ವೇಳೆ ಪಾನ್‌-ಆಧಾರ್‌ ಮಾಹಿತಿಗಳು ಸರಿ ಹೊಂದರೆ ಹೊದರೆ ಲಿಂಕ್ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಇದಕ್ಕಾಗಿ ಆಧಾರ ಮತ್ತು ಪಾನ್ ಕಾರ್ಡ್ ಪೋರ್ಟಲ್‌ಗೆ ಹೋಗಿ ಮಾಹಿತಿಯನ್ನು ಸರಿಪಡಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
If you have not linked your Aadhaar with your PAN on the income tax portal yet, you should not delay it. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot