Subscribe to Gizbot

ಜಿಯೋದಲ್ಲಿ ಕೇವಲ 303 ರೂ. ಆಫರ್ ಮಾತ್ರವಲ್ಲ, ಇನ್ನು ತುಂಬ ಇದೆ..!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಬೂಸ್ಟರ್‌ ಪ್ಯಾಕೇಜ್‌ ಕೂಡ ನೀಡುತ್ತಿದೆ. ತಿಂಗಳಿಗೆ 303 ರೂ ನೀಡಿದರೆ ದಿನಕ್ಕೆ 1 GB ಡೇಟಾ ಸಾಲುದಿಲ್ಲ ಎನ್ನುವವರಿಗೆ ಬೂಸ್ಟರ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.

ಜಿಯೋದಲ್ಲಿ ಕೇವಲ 303 ರೂ. ಆಫರ್ ಮಾತ್ರವಲ್ಲ, ಇನ್ನು ತುಂಬ ಇದೆ..!!

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಜಿಯೋ ನೀಡುವ ಡೇಟಾ ಮುಗಿದು ಹೋಗಿದಲ್ಲಿ ಬೂಸ್ಟರ್‌ ಪ್ಯಾಕೇಜ್‌ನಿಂದ ಡೇಟಾ ಪಡೆಯಬಹುದಾಗಿದೆ. ಇದು 11ರೂ.ಗಳಿಂದ ಆರಂಭವಾಗಿ 301 ರೂ.ಗಳ ವರೆಗೆ ಇದೆ. ಇದರಿಂದಾಗಿ ಗ್ರಾಹಕರು 4G ಇಂಟರ್‌ನೆಟ್‌ ಸೌಕರ್ಯವನ್ನು ಆನಂದಿಸಬಹುದಾಗಿದೆ.

ಇದೇ ವೇಳೆ ಜಿಯೋ ಕಂಪೆನಿಯು ತನ್ನ ಎಲ್ಲ ಬಳಕೆದಾರರಿಗೆ ಗುಣಮಟ್ಟದ ಸೇವೆಗಳು ಸಿಗುವಂತೆ ಮಾಡಲು ನಿರ್ಧರಿಸಿದ್ದು ಆ ಪ್ರಕಾರ ದಿನಕ್ಕೆ 1 ಜಿಬಿ ಡೇಟಾ ಮಿತಿಯೊಂದಿಗೆ FUP (ಫೇರ್‌ ಯೂಸೇಜ್‌ ಪಾಲಿಸಿ) ಯನ್ನು ಮುಂದುವರಿಸಲಿದೆ.

ಆದರೆ ಇದು 999 ರೂ. ನಿಂದ 9,999 ರೂ. ವರೆಗಿನ ಪ್ಲಾನ್‌ಗಳಿಗೆ ಅನ್ವಯವಾಗುವುದಿಲ್ಲ. ಆ ಪ್ಲಾನ್‌ ಗಳನ್ನು ಪಡೆಯುವ ಗ್ರಾಹಕರಿಗೆ ಹೆಚ್ಚಿನ ಡೇಟಾ ಲಭ್ಯವಾಗಲಿದೆ.

ಜಿಯೋದಲ್ಲಿ ಕೇವಲ 303 ರೂ. ಆಫರ್ ಮಾತ್ರವಲ್ಲ, ಇನ್ನು ತುಂಬ ಇದೆ..!!

ಓದಿರಿ: 50 ಮಿಲಿಯನ್ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಜಿಯೋ: ಮತ್ತೆ ಉಚಿತ ಕೊಡುಗೆ ಮುಂದುವರೆಯುವುದೇ..!

ಜಿಯೋ ಪ್ರೈಮ್‌ ಪ್ಲಾನ್‌ 149 ರೂ.ಗಳೊಂದಿಗೆ ಆರಂಭವಾಲಿದ್ದು, 9,999 ರೂ.ವರೆಗೂ ಪ್ಲಾನ್‌ಗಳಿದೆ. 149 ರೂ ಪ್ಲಾನ್‌ನಲ್ಲಿ 28 ದಿನಗಳ ಅವಧಿಗೆ ಅನ್‌ಲಿಮಿಟೆಡ್‌ ಉಚಿತ ಕರೆ ಮತ್ತು ಉಚಿತ ಮೆಸೇಜ್‌ಗಳೊಂದಿಗೆ 2 ಜಿಬಿ ಡೇಟಾ ದೊರೆಯಲಿದೆ.

ಇದರೊಂದಿಗೆ ಮೈ ಜಿಯೋ, ಜಿಯೋ ಚ್ಯಾಟ್‌, ಜಿಯೊ ಮನಿ, ಜಿಯೋ ಸಿನಿಮಾ, ಜಿಯೋ ಟಿವಿ ಸೇವೆಯನ್ನು ಉಚಿತವಾಗಿ ಪಡೆಯಬಹುದು.

Read more about:
English summary
jio prime membership drive gets started from today. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot