ಡೇಟಾ ಬಳಕೆಯಲ್ಲಿ Jio ಈಗ ವಿಶ್ವದಲ್ಲೇ ನಂಬರ್ ಒನ್; ಚೀನಾ ಠುಸ್!
ಡೇಟಾ ದಟ್ಟಣೆ ವಿಷಯದಲ್ಲಿ ರಿಲಯನ್ಸ್ ಜಿಯೋ ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಆಗಿದೆ. 2024 ರಲ್ಲಿ ಜನವರಿಯಿಂದ ಸೆಪ್ಟೆಂಬರ್ ತನಕದ ಮೊದಲ ಮೂರು ತ್ರೈಮಾಸಿಕಗಳ ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೋ (Jio) ಚೀನಾದ ಸಂಸ್ಥೆಯಾದ ಚೀನಾ ಮೊಬೈಲ್‌ಗಿಂತ ಮುಂದಿದೆ.
ಜಾಗತಿಕ ಟೆಲಿಕಾಂ ವಲಯದ ಸಂಶೋಧನಾ ಸಂಸ್ಥೆಯಾದ ಟಿಫೀಶಿಯಂಟ್ ಪ್ರಕಾರ, ಜಿಯೋ ಮತ್ತು ಚೀನಾ ಮೊಬೈಲ್ ನಂತರ ಚೀನಾದ ಮತ್ತೊಂದು ಕಂಪನಿ ಚೀನಾ ಟೆಲಿಕಾಂ ಡೇಟಾ ದಟ್ಟಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ಕಂಪನಿ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವೊಡಾ ಐಡಿಯಾ ಆರನೇ ಸ್ಥಾನ ಪಡೆದಿದೆ.

ಚೈನೀಸ್ ಕಂಪನಿ ಚೀನಾ (China Mobile) ಮೊಬೈಲ್ ತನ್ನ ಹವಾ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಟಿಫೀಶಿಯಂಟ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಚೀನಾ ಮೊಬೈಲ್ ಕೇವಲ ಶೇ 2ರ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ, ಆದರೆ ಜಿಯೋ ಮತ್ತು ಚೀನಾ ಟೆಲಿಕಾಂ ಸುಮಾರು ಶೇ 24 ಹಾಗೂ ಏರ್ ಟೆಲ್ (Airtel) ಶೇ 23 ರಷ್ಟು ಬೆಳವಣಿಗೆಯನ್ನು ಕಂಡಿದೆ.
5G ನೆಟ್‌ವರ್ಕ್‌ಗಳ ಪ್ರಬಲವಾದ ಉಪಸ್ಥಿತಿಯಿಂದಾಗಿ ಭಾರತೀಯ ಸಂಸ್ಥೆಗಳಲ್ಲಿ ಡೇಟಾ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ಅದೇ ವೇಳೆ 5G ಚೀನಾದ ಡೇಟಾ ದಟ್ಟಣೆಯ ಮೇಲೆ ಭಾರತದಷ್ಟು ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದು ಟಿಫೀಶಿಯಂಟ್ ತಿಳಿಸಿದೆ.
ಹಾಗೆಯೇ 5G ಹಾಗೂ ಹೋಮ್ ಬ್ರಾಡ್‌ಬ್ಯಾಂಡ್‌ಗೆ ಪ್ರಬಲವಾದ ಬೇಡಿಕೆಯು ಜಿಯೋ ವಿಶ್ವದ ಡೇಟಾ ಟ್ರಾಫಿಕ್‌ನಲ್ಲಿ ನಂಬರ್ ಒನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಮೂರು ವರ್ಷಗಳಲ್ಲಿ ಜಿಯೋ ನೆಟ್‌ವರ್ಕ್‌ನಲ್ಲಿ ಡೇಟಾ ದಟ್ಟಣೆ ಬಹುತೇಕ ದ್ವಿಗುಣಗೊಂಡಿದೆ.
ಸುಮಾರು 14 ಕೋಟಿ 80 ಲಕ್ಷ ಗ್ರಾಹಕರು ಜಿಯೋ 5G ನೆಟ್‌ವರ್ಕ್‌ಗೆ ಸೇರಿದ್ದಾರೆ. ಜಿಯೋ ಪ್ರಕಾರ, 2024-25 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅದರ ಒಟ್ಟು ಡೇಟಾ ದಟ್ಟಣೆ 45 ಎಕ್ಸಾಬೈಟ್‌ಗಳನ್ನು ದಾಟಿದೆ.
ಜಿಯೋ ಟೆಲಿಕಾಂನ ಕೆಲವು ಜನಪ್ರಿಯ ಪ್ಲ್ಯಾನ್‌ಗಳು
ಜಿಯೋದ 1029ರೂ. ಪ್ಲ್ಯಾನ್ - ಜಿಯೋದ ಈ ಯೋಜನೆಯಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಜಿಯೋ ಆಪ್ಸ್ ಸೇವೆ ಸಿಗಲಿದೆ.
ಜಿಯೋದ 1028ರೂ. ಪ್ಲ್ಯಾನ್ - ಜಿಯೋದ ಈ ಯೋಜನೆಯಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯ ಇರಲಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಅಮೆಜಾನ್ ವಿಡಿಯೋ ಪ್ರೈಮ್ ಸೌಲಭ್ಯ ಸಹ ಸಿಗಲಿದೆ.
ಜಿಯೋದ 999ರೂ. ಪ್ಲ್ಯಾನ್ - ಈ ಯೋಜನೆಯಲ್ಲಿ ಒಟ್ಟು 98 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯ ಸಿಗಲಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 196 GB ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ.


Click it and Unblock the Notifications








