ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಈ ಪ್ಲ್ಯಾನ್‌ನಲ್ಲಿ ಇನ್ನೂ ಹೆಚ್ಚಿನ ಡೇಟಾ ಲಭ್ಯ!ಆದರೆ?
ಜಿಯೋ (Jio) ಟೆಲಿಕಾಂ ಈಗಾಗಲೇ ಕಡಿಮೆ ದರದ ಹಲವಾರು ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಈ ಹೆಚ್ಚು ಡೇಟಾ ನೀಡುವ ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಮತ್ತಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಈ ಮೂಲಕ ಇತರೆ ಟೆಲಿಕಾಂಗಳಿಗೆ ನಡುಕ ಆರಂಭ ಆಗಿದೆ.
ಹೌದು, ಜಿಯೋ ಹೊಸ ಹೊಸ ರೀತಿಯ ಪ್ಲ್ಯಾನ್‌ಗಳನ್ನ ಪರಿಚಯಿಸುವ ಮೂಲಕ ಆಗಾಗ್ಗೆ ಟೆಲಿಕಾಂ ವಲಯದಲ್ಲಿ ಭಾರೀ ಸದ್ದು ಮಾಡುತ್ತಾ ಇರುತ್ತದೆ. ಈ ನಡುವೆ 61ರೂ.ಗಳ ಡೇಟಾ ಬೂಸ್ಟರ್ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಉತ್ತಮ ಡೇಟಾ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಇದು ಈ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ. ಹಾಗಿದ್ರೆ, ಜಿಯೋದ ಈ ಪ್ಲ್ಯಾನ್ ಬಳಕೆದಾರರಿಗೆ ಹೇಗೆ ಸಹಾಯಕ ಎಂಬ ಮಾಹಿತಿ ಈ ಲೇಖನದಲ್ಲಿದೆ ಓದಿರಿ.

61ರೂ.ಗಳ ಮೌಲ್ಯದ ಬೋನಸ್ ಡೇಟಾ: ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಪ್ರಸ್ತುತ ತನ್ನ ಕಡಿಮೆ ವ್ಯಾಲಿಡಿಟಿಯ ಪ್ರಿಪೇಯ್ಡ್ ಪ್ಲ್ಯಾನ್‌ಗಳೊಂದಿಗೆ 61ರೂ.ಗಳ ಮೌಲ್ಯದ ಬೋನಸ್ ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಇದೇನು ಹೊಸದಾಗಿ ಲಾಂಚ್ ಮಾಡಲಾಗುತ್ತಿರುವ ಪ್ಲ್ಯಾನ್‌ಗಳೇನು ಅಲ್ಲ. ಬದಲಾಗಿ ಈಗಾಗಲೇ ಸಾಕಷ್ಟು ಬಳಕೆ ಆಗುತ್ತಿರುವ ಈ ಪ್ಲ್ಯಾನ್‌ಗೆ ಈ 61ರೂ.ಗಳ ಪ್ಲ್ಯಾನ್ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡಲಿದೆ.
ಕೆಲವು ವರ್ಷಗಳಿಂದ ಡಿಜಿಟಲ್ ವಿಷಯದ ಬಳಕೆಯ ಮಾದರಿ ಬದಲಾಗುತ್ತಿದ್ದು, ಪರಿಣಾಮ ಮೊಬೈಲ್ ಡೇಟಾದ ಅಗತ್ಯ ಸಾಕಷ್ಟು ಅಂದರೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಕಡಿಮೆ ವ್ಯಾಲಿಡಿಟಿ ಮತ್ತು ಹೆಚ್ಚು ಡೇಟಾದೊಂದಿಗೆ ಬಳಕೆದಾರರ ಅಗತ್ಯವನ್ನು ಪೂರೈಸಲು ಮುಂದಾಗಿರುವ ರಿಲಯನ್ಸ್ ಜಿಯೋ ಈಗಾಗಲೇ ತನ್ನ ಗ್ರಾಹಕರಿಗೆ 399ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಒದಗಿಸಿದೆ.
ಈ ಪ್ಲ್ಯಾನ್ ಸಾಮಾನ್ಯವಾಗಿ ಮಧ್ಯಮ-ಅವಧಿಯ ಅಥವಾ ದೀರ್ಘಾವಧಿಯ ಮಾನ್ಯತೆ ದಿನ ಬೇಕು ಎಂದವರಿಗೆ ಹೊಂದುವುದಿಲ್ಲ. ಯಾಕೆಂದರೆ 399ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಈ ಯೋಜನೆಯು ಸಾಕಷ್ಟು ದುಬಾರಿಯಾಗಿ ಕಂಡರೂ ಬಳಕೆದಾರರು ಇದನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಯಾಕೆಂದರೆ ನಿತ್ಯವೂ ಈ ಪ್ಲ್ಯಾನ್‌ನಲ್ಲಿ 3GB ಡೇಟಾವನ್ನು ಪಡೆದುಕೊಳ್ಳಬಹುದು.
ಈ ಮೂಲ ಪ್ಲ್ಯಾನ್‌ನೊಂದಿಗೆ ಜಿಯೋ ಡೇಟಾ ಬೂಸ್ಟರ್ ಪ್ಲ್ಯಾನ್ ಆಗಿ 61ರೂ.ಗಳ ಮೌಲ್ಯದ ಪ್ಲ್ಯಾನ್ ಅನ್ನು ಪರಿಚಯಿಸುತ್ತಿದೆ. ಈ ಮೂಲಕ 6GB ಮೌಲ್ಯದ ಬೋನಸ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಈ ಹಿಂದೆ 399ರೂ.ಗಳ ಪ್ಲ್ಯಾನ್‌ನಲ್ಲಿ ಒಟ್ಟಾರೆ 28 ದಿನಗಳಿಗೆ 84 GB ಡೇಟಾ ಲಭ್ಯ ಆಗುತ್ತಿತ್ತು. ಆದರೆ ಇನ್ಮುಂದೆ ಬಳಕೆದಾರು ಇಷ್ಟೇ ಮಾನ್ಯತೆ ದಿನಗಳಿಗೆ 90GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಬಳಕೆದಾರರು 399ರೂ.ಗಳ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್, ನಿತ್ಯವೂ 100 ಎಸ್‌ಎಮ್‌ಎಸ್ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು. ಹಾಗೆಯೇ ಅನಿಯಮಿತ 5G ಡೇಟಾ ಆಫರ್‌ಗೂ ಈ ಮೂಲಕ ಅರ್ಹತೆ ಪಡೆದುಕೊಳ್ಳಬಹುದು. ಇದರಿಂದಾಗಿ ಹೆಚ್ಚಿನ ಡೇಟಾ ಅವಶ್ಯಕತೆ ಇರುವವರಿಗೆ ಅಂದರೆ ಮನೆಯಿಂದಲೇ ಕೆಲಸ ಮಾಡುವವರಿಗೆ ಈ ಸೌಲಭ್ಯ ಉತ್ತಮ ಎನ್ನಬಹುದು.
ಉಳಿದಂತೆ ಜಿಯೋ ತನ್ನ 5G ಕವರೇಜ್‌ನೊಂದಿಗೆ ಈಗಾಗಲೇ 6,000 ನಗರಗಳು ಮತ್ತು ಪಟ್ಟಣಗಳ ಗಡಿಯನ್ನು ದಾಟಿದ್ದು, 2023 ರ ಅಂತ್ಯದ ವೇಳೆಗೆ ಇಡೀ ದೇಶವನ್ನು ತನ್ನ 5G ಯೊಂದಿಗೆ ಆವರಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದೇ ಮಾರ್ಗದಲ್ಲಿ ಏರ್‌ಟೆಲ್ ಸಹ ಸಾಗುತ್ತಿದ್ದು, ಒಂದಕ್ಕೊಂದು ಪೈಪೋಟಿಯಲ್ಲಿ ಹೆಚ್ಚಿನ ಚಂದಾದಾರರನ್ನು ಪಡೆದುಕೊಳ್ಳಲು ಹಪಾಹಪಿಸುತ್ತಿವೆ.
ಇನ್ನುಳಿದಂತೆ 61ರೂ.ಗಳ ಡೇಟಾ ಬೂಸ್ಟರ್ ಪ್ಲಾನ್‌ನಂತೆಯೇ ಸ್ಥಿರ ಪ್ಲ್ಯಾನ್‌ನಲ್ಲಿನ ಡೇಟಾ ಖಾಲಿಯಾದಾಗ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಬಳಕೆದಾರರು ಮತ್ತೆ ಇಂಟೆರ್ನೆಟ್ ಸೇವೆ ಪಡೆದುಕೊಳ್ಳಲು ಜಿಯೋ ಹಲವಾರು ಡೇಟಾ ಬೂಸ್ಟರ್ ಪ್ಲ್ಯಾನ್ ಅನ್ನೂ ಸಹ ಪರಿಚಯಿಸಿದೆ. ಅದರಲ್ಲಿ 15ರೂ, 25ರೂ, 121 ರೂ, ಮತ್ತು 222 ರೂ.ಗಳ ಪ್ಲ್ಯಾನ್ ಆಕರ್ಷಕವಾಗಿವೆ.


Click it and Unblock the Notifications








