Home
ಸುದ್ದಿಜಾಲ

ಜಿಯೋ ರೀಚಾರ್ಜ್‌ ಮಾಡಿಸಬೇಕೆ?..ಇಲ್ಲಿದೆ ಜಿಯೋ ಪ್ಲ್ಯಾನ್‌ಗಳ ಸಂಪೂರ್ಣ ಮಾಹಿತಿ!

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ಬಹುಬೇಡಿಕೆಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್‌ ಜಿಯೋ ಟೆಲಿಕಾಂ ಅತ್ಯುತ್ತಮ ಡೇಟಾ ಪ್ಲ್ಯಾನ್‌ಗಳಿಂದ ಗ್ರಾಹಕನ್ನು ಸೆಳೆದಿದೆ. ಜಿಯೋ ಕಳೆದ ಡಿಸೆಂಬರ್‌ನಲ್ಲಿ ತನ್ನ ಪ್ರೀಪೇಯ್ಡ್‌ ಯೋಜನಗಳ ದರದಲ್ಲಿ ಬದಲಾವಣೆ ಮಾಡಿದ್ದರೂ, ತನ್ನ ಜನಪ್ರಿಯತೆ ಉಳಿಸಿಕೊಂಡು ಮುನ್ನಡೆದಿದೆ. ಸದ್ಯ ಜಿಯೋ ಭಿನ್ನ ಶ್ರೇಣಿಯಲ್ಲಿ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅವುಗಳು ಡೇಟಾ ಹಾಗೂ ಕರೆಯ ಸೌಲಭ್ಯ ಪಡೆದಿವೆ.

ಜಿಯೋ ಸಂಸ್ಥೆ

ಹೌದು, ಜಿಯೋ ಸಂಸ್ಥೆಯು ಭಿನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಅಲ್ಪಾವಧಿಯ ಪ್ಲ್ಯಾನ್‌ಗಳಿದ್ದು, ಇನ್ನು ಕೆಲವು ದೀರ್ಘಾವಧಿಯ ಯೋಜನೆಗಳಾಗಿವೆ. ಇನ್ನೂ ಕೆಲ ಜಿಯೋ ಯೋಜನೆಗಳು ವಾಯಿಸ್‌ ಕರೆ ಹಾಗೂ ಡೇಟಾ ಪ್ರಯೋಜನವನ್ನು ಹೊಂದಿದ್ದರೇ, ಮತ್ತೆ ಕೆಲವು ಬರೀ ಡೇಟಾ ವೋಚರ್‌ಗಳಾಗಿವೆ. ಹೀಗಾಗಿ ಜಿಯೋದ ಎಲ್ಲ ಪ್ಲ್ಯಾನ್‌ಗಳು ಭಿನ್ನ ಬೆಲೆಯಲ್ಲಿದ್ದು, ಭಿನ್ನ ಪ್ರಯೋಜನಗಳನ್ನು ಹೊಂದಿವೆ. ಈ ತಿಂಗಳಿನಲ್ಲಿ (ಜೂನ್) ಲಭ್ಯ ಇರುವ ಜಿಯೋ ಟೆಲಿಕಾಂನ ಎಲ್ಲ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜಿಯೋ 129ರೂ. ಪ್ಲಾನ್

ಜಿಯೋ 129ರೂ. ಪ್ಲಾನ್

ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ 1000 ನಿಮಿಷಗಳ ಕರೆ ಮಿತಿಯನ್ನು ಪಡೆದಿರುವ ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋದ 149ರೂ ಪ್ಲ್ಯಾನ್

ಜಿಯೋದ 149ರೂ ಪ್ಲ್ಯಾನ್

ಜಿಯೋದ 149ರೂ ಪ್ಲ್ಯಾನ್ ಸಹ 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು, ಹಾಗೂ ಜಿಯೋ ಟು ಜಿಯೋ ಸಂಪೂರ್ಣ ಉಚಿತ ಕರೆಗಳ ಸೌಲಭ್ಯ ಇದ್ದು, ಇತರೆ ನೆಟ್‌ವರ್ಕ್‌ ಕರೆಗಳಿಗೆ 300 ನಿಮಿಷಗಳ ಮಿತಿ ಇದೆ.

ಜಿಯೋದ 199ರೂ ಪ್ಲ್ಯಾನ್

ಜಿಯೋದ 199ರೂ ಪ್ಲ್ಯಾನ್

ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಅನಿಯಮಿತ ಕರೆಗಳ ಸೌಲಭ್ಯ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ಕರೆಗಳಿಗೆ 1000 ನಿಮಿಷದ ಕರೆ ಮಿತಿ ಇದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಸಿಗುತ್ತವೆ.

ಜಿಯೋ 249ರೂ. ಪ್ಲ್ಯಾನ್

ಜಿಯೋ 249ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 1,000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 329ರೂ. ಪ್ಲ್ಯಾನ್

ಜಿಯೋ 329ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ವಾಯಿಸ್‌ ಕರೆಗಾಗಿ ಒಟ್ಟು 3000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಜಿಯೋ 349ರೂ. ಪ್ಲ್ಯಾನ್

ಜಿಯೋ 349ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಿದ್ದು, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ವಾಯಿಸ್‌ ಕರೆಗಾಗಿ ಒಟ್ಟು 1000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಜಿಯೋ 399ರೂ. ಪ್ಲ್ಯಾನ್

ಜಿಯೋ 399ರೂ. ಪ್ಲ್ಯಾನ್

ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಇತರೆ ನೆಟವರ್ಕ ಕರೆಗಳಿಗೆ 2000 ಉಚಿತ ನಿಮಿಷಗಳ ಮಿತಿ ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

ಜಿಯೋ 444ರೂ. ಪ್ಲ್ಯಾನ್

ಜಿಯೋ 444ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ ಉಚಿತ 2000 ನಿಮಿಷಗಳ FUP ಮಿತಿ ಇದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ.

ಜಿಯೋ 555ರೂ. ಪ್ಲ್ಯಾನ್

ಜಿಯೋ 555ರೂ. ಪ್ಲ್ಯಾನ್

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಆಲ್‌-ಇನ್‌-ಒನ್‌ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಇನ್ನು ಇತರೆ ನೆಟವರ್ಕ್ 3000 ನಿಮಿಷಗಳ ವಾಯಿಸ್‌ ಕರೆಯ ಮಿತಿಯನ್ನು ಒಳಗೊಂಡಿದೆ.

ಜಿಯೋ 599ರೂ. ಪ್ಲ್ಯಾನ್

ಜಿಯೋ 599ರೂ. ಪ್ಲ್ಯಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ.

ಜಿಯೋ 999ರೂ.ಪ್ಲ್ಯಾನ್

ಜಿಯೋ 999ರೂ.ಪ್ಲ್ಯಾನ್

ರಿಲಾಯನ್ಸ್ ಜಿಯೋ 999ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, 64Kbps ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೆ 3,000 ನಿಮಿಷಗಳ ಮಿತಿ ಇರಲಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 1299ರೂ. ಪ್ಲ್ಯಾನ್

ಜಿಯೋ 1299ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 12000 ನಿಮಿಷಗಳ ಉಚಿತ ಅವಧಿ ಪಡೆದಿದೆ. ಇನ್ನೂ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರುತ್ತವೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸಿಗುತ್ತವೆ. ಇದೊಂದು ವ್ಯಾಲಿಡಿಟಿ ಯೋಜನವಾಗಿದೆ.

ಜಿಯೋ 2121ರೂ.ಪ್ಲ್ಯಾನ್

ಜಿಯೋ 2121ರೂ.ಪ್ಲ್ಯಾನ್

ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ಜಿಯೋ ಟು ಜಿಯೋ ವಾಯಿಸ್‌ ಕರೆಗಳು ಲಭ್ಯವಾಗಲಿದ್ದು, ಜಿಯೋದಿಂದ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೆ ಒಟ್ಟು 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಇನ್ನು ಈ ಪ್ಲ್ಯಾನ್‌ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಜಿಯೋ 2399ರ ಪ್ಲಾನ್‌

ಜಿಯೋ 2399ರ ಪ್ಲಾನ್‌

ಜಿಯೋ ಹೊಸ 2,399ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಜಿಯೋ ಟು ಜಿಯೋ ಅನಿಯಮಿತ ವಾಯಿಸ್‌ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 4999ರೂ. ಪ್ಲ್ಯಾನ್

ಜಿಯೋ 4999ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನ್ ದೊಡ್ಡ ಮೊತ್ತದ ಪ್ಲ್ಯಾನ್ ಆಗಿದ್ದು, ಒಟ್ಟು 360 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 350GB ಡೇಟಾ ಸೌಲಭ್ಯ ಇರುತ್ತದೆ. ಹಾಗೆಯೇ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರುತ್ತವೆ ಹಾಗೂ ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಮಿತಿ ಇರುತ್ತದೆ. ಉಳಿದಂತೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಲಭ್ಯವಾಗುತ್ತವೆ.

Best Mobiles in India

English summary
Jio All Prepaid Recharge Plans List including their prices, data benefits, and validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+