100ರೂ. ಒಳಗೆ ಹೊಸ ಪ್ಲ್ಯಾನ್ ಪರಿಚಯಿಸಿದ ಜಿಯೋ!..ಪ್ರಯೋಜನಗಳೆನು?
ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಪ್ರೈಸ್‌ನಿಂದ ದುಬಾರಿ ಬೆಲಯ ವರೆಗೂ ಭಿನ್ನ ಪ್ರಯೋಜನಗಳ ಯೋಜನಗಳನ್ನು ಪರಿಚಯಿಸಿವೆ. ಆ ಪೈಕಿ ರಿಲಾಯನ್ಸ್ ಜಿಯೋ ಟೆಲಿಕಾಂ ಸಹ ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಇದೀಗ ಅಗ್ಗದ ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆಯೊಂದನ್ನು ಅನಾವರಣ ಮಾಡಿದ್ದು, ಗ್ರಾಹಕರ ಗಮನವನ್ನು ಸೆಳೆದಿದೆ.

ಹೌದು, ಜನಪ್ರಿಯ ರಿಲಾಯನ್ಸ್ ಜಿಯೋ ಟೆಲಿಕಾಂ 98ರೂ. ಪ್ರಿಪೇಯ್ಡ್ ಯೋಜನೆಯನ್ನು ಅನಾವರಣ ಮಾಡಿದೆ. ಒಂದು ವರ್ಷದ ಬಳಿಕ ಈ ಯೋಜನೆಯನ್ನು ಜಿಯೋ ಪುನಃ ಲಭ್ಯವಾಗಿಸಿದೆ. ಇದೊಂದು ಅಗ್ಗದ ರೀಚಾರ್ಜ್ ಯೋಜನೆ ಆಗಿದ್ದರೂ, ಡೇಟಾ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನವನ್ನು ಪಡೆದಿದೆ. ಹಾಗಾದರೇ ಜಿಯೋ 98ರೂ. ಪ್ರಿಪೇಯ್ಡ್ ಪ್ರಯೋಜನಗಳೆನು ಹಾಗೂ ಇತರೆ ಕಡಿಮೆ ದರದ ಇತರೆ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 98ರೂ. ಪ್ರಿಪೇಯ್ಡ್ ಯೋಜನೆ
ಜಿಯೋ 98ರೂ. ಪ್ರಿಪೇಯ್ಡ್ ಯೋಜನೆ 14 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನವನ್ನು ಒದಗಿಸಲಿದ್ದು, ಪೂರ್ಣ ಅವಧಿಗೆ ಒಟ್ಟು 21GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಪ್ಲ್ಯಾನಿನಲ್ಲಿ ಜಿಯೋ ಆಪ್ಸ್‌ಗಳು ಲಭ್ಯವಾಗುತ್ತವೆ.

ಜಿಯೋ 129ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇನ್ನು ಈ ಪ್ಲಾನ್ ಒಟ್ಟು 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋದ 149ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ 149ರೂ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಿಗಲಿದೆ.

ಜಿಯೋದ 199ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ವಾಯಿಸ್ ಕರೆಗಳು ಅನಿಯಮಿತ ಉಚಿತವಾಗಿವೆ. ಜಿಯೋ ಆಪ್ಸ್ ಸೇವೆ ಲಭ್ಯ.

ಜಿಯೋ 249ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.


Click it and Unblock the Notifications








