ಜಿಯೋದಿಂದ ರಿಪಬ್ಲಿಕ್ ಡೇ ಆಫರ್! ಈ ಪ್ಲ್ಯಾನ್‌ನಲ್ಲಿ ಸ್ವಿಗ್ಗಿ, ಅಜಿಯೋ ಸೇರಿದಂತೆ ಅನೇಕ ಶಾಪಿಂಗ್ ಕೂಪನ್ ಲಭ್ಯ!
ಜಿಯೋ (jio) ತನ್ನ ಭಿನ್ನ ರೀಚಾರ್ಜ್ ಪ್ಲ್ಯಾನ್ ಮೂಲಕ ಸಾಕಷ್ಟು ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅದರಲ್ಲೂ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನ ಪಡೆದಿದ್ದು, ಈ ಮೂಲಕ ಟೆಲಿಕಾಂ ದೈತ್ಯ ಎನಿಸಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ರಿಪಬ್ಲಿಕ್ ಡೇ ಆಫರ್ (Republic Day Offer) ಬಗ್ಗೆ ಘೋಷಣೆ ಮಾಡಲಾಗಿದ್ದು, ಇದರಿಂದ ಗ್ರಾಹಕರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ.
ಹೌದು, ಜಿಯೋ ಎಂದಿನಂತೆ ಈಗ ರಿಪಬ್ಲಿಕ್ ಡೇ ಆಫರ್ ಘೋಷಣೆ ಮಾಡಿದ್ದು, ಈ ವಿಶೇಷ ಆಫರ್ ಮೂಲಕ ಸ್ವಿಗ್ಗಿ, ಅಜಿಯೋ ಸೇರಿದಂತೆ ಅನೇಕ ಕೂಪನ್ ನೀಡಲಿದೆ. ಇದರಿಂದಾಗಿ ಗ್ರಾಹಕರು ಇತರೆ ಸೇವೆಗಳನ್ನು ಕಡಿಮೆ ದರದಲ್ಲಿ ಪಡೆಯಬಹುದಾಗಿದೆ. ಜೊತೆಗೆ ಇದು ಸೀಮಿತ ಅವಧಿಯ ಕೊಡುಗೆ ಆಗಿದೆ. ಹಾಗಿದ್ರೆ, ಯಾವ ಪ್ಲ್ಯಾನ್‌ನಲ್ಲಿ ಈ ಸೌಲಭ್ಯಗಳು ಲಭ್ಯ?, ಈ ಆಫರ್ ರಿಡೀಮ್ ಮಾಡಿಕೊಳ್ಳುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಜಿಯೋದಿಂದ ವಿಶೇಷ ಸೌಲಭ್ಯ: ಭಾರತ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲು ಸಿದ್ಧವಾಗಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ವಿಶೇಷ ಸೇಲ್ ಆಯೋಜನೆ ಮಾಡುವ ಮೂಲಕ ಸ್ಮಾರ್ಟ್ ಡಿವೈಸ್‌ಗಳ ಮೇಲೆ ಭರ್ಜರಿ ಆಪರ್ ಘೋಷಣೆ ಮಾಡಿವೆ. ಅದರಲ್ಲೂ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಈ ಸೇಲ್ ಲೈವ್ ಆಗಿದ್ದು, ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದರಂತೆ ಜಿಯೋ ಸಹ ವಿಶೇಷ ಸೇಲ್ ಆಯೋಜನೆ ಮಾಡಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಜಿಯೋ 2,999ರೂ.ಗಳ ವಾರ್ಷಿಕ ಪ್ಲ್ಯಾನ್‌ಗೆ ಚಂದಾದಾರರಾಗುವ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ. ಅಂದರೆ ವಿವಿಧ ಶಾಪಿಂಗ್ ಕೂಪನ್‌ಗಳನ್ನು ನೀಡಲಿದೆ. ಈ ರಿಪಬ್ಲಿಕ್ ಡೇ ಆಫರ್ ಜನವರಿ 15 ರಿಂದ ಜನವರಿ 31 ರವರೆಗೆ ಮಾನ್ಯವಾಗಿರುತ್ತದೆ. ಇದರ ಅರ್ಥ ಈ ಆಫರ್ ಅನ್ನು ಪಡೆಯಲು ನಿಮಗೆ ಇನ್ನೂ ಒಂದೆರಡು ವಾರಗಳ ಕಾಲಾವಕಾಶವಿದೆ.

ಏನೆಲ್ಲಾ ಆಫರ್ ಇದೆ?: ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ 2 ಸ್ವಿಗ್ಗಿ ಕೂಪನ್‌ಗಳು ಸಿಗಲಿವೆ. ಈ ಮೂಲಕ 299 ರೂ.ಗಳ ಖರೀದಿಯ ಮೇಲೆ 125 ರೂ.ಗಳ ರಿಯಾಯಿತಿ ಸಿಗಲಿದೆ. ಹಾಗೆಯೇ ಇಕ್ಸಿಗೋ ಫ್ಲೈಟ್‌ಗಳಲ್ಲಿ 1,500 ರೂ.ವರೆಗೆ ರಿಯಾಯಿತಿ ಸಿಗಲಿದೆ. ಅಜಿಯೋದಲ್ಲಿ 2,499 ರೂ.ಗಳ ಆರ್ಡರ್ ಮೇಲೆ ಆರ್ಡರ್ ಮಾಡಿದ್ರೆ 500 ರೂ.ಗಳ ರಿಯಾಯಿತಿ ಸಿಗಲಿದ್ದು, ತಿರಾನಲ್ಲಿ (tira) 999 ರೂ.ಗಳ ಖರೀದಿ ಮೇಲೆ 30% ರಿಯಾಯಿತಿ ಸಿಗಲಿದೆ. ಅಲ್ಲದೆ ರಿಲಯನ್ಸ್ ಡಿಜಿಟಲ್ ನಲ್ಲಿ ಕನಿಷ್ಠ 5,000 ರೂ ಖರೀದಿಯ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಜಿಯೋ ವಾರ್ಷಿಕ 2,999 ರೂ.ಗಳ ಪ್ಲ್ಯಾನ್ ಪ್ರಯೋಜನ: ಇನ್ನು ಈ ವಾರ್ಷಿಕ ಪ್ಲ್ಯಾನ್ ಬಗ್ಗೆ ಮಾತನಾಡುವುದಾದರೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ದಿನವೂ ಬಳಕೆದಾರರು 2.5GB 4G ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ 5G ಡಿವೈಸ್ ಹೊಂದಿರುವವರು ಉಚಿತ ಅನಿಯಮಿತ 5G ಡೇಟಾ ಸೌಲಭ್ಯ ಸಹ ಪಡೆದುಕೊಳ್ಳಬಹುದು. ಇದರೊಂದಿಗೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ, ನಿತ್ಯ 100 SMS ಪ್ರಯೋಜನ ಸಿಗಲಿದೆ. ಅಲ್ಲದೆ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗೂ ಉಚಿತ ಎಂಟ್ರಿ ಸಿಗಲಿದೆ.

ಜಿಯೋ ರಿಪಬ್ಲಿಕ್ ಡೇ ಆಫರ್ ಅನ್ನು ರಿಡೀಮ್ ಮಾಡುವುದು ಹೇಗೆ?: ಇನ್ನು ಪ್ರಮುಖ ವಿಷಯಕ್ಕೆ ಬರೋಣ. ಜಿಯೋ ರಿಪಬ್ಲಿಕ್ ಡೇ ಆಫರ್ ಅನ್ನು ಮೈ ಜಿಯೋ ಆಪ್ ಅಥವಾ ಅಧಿಕೃತ ಜಿಯೋ ವೆಬ್‌ಸೈಟ್ ಮೂಲಕ ರಿಡೀಮ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೊದಲೇ ತಿಳಿಸಿದಂತೆ 2,999 ವಾರ್ಷಿಕ ಯೋಜನೆಯೊಂದಿಗೆ ನೀವು ಜಿಯೋ ಸಂಖ್ಯೆಯನ್ನು ರೀಚಾರ್ಜ್ ಮಾಡಬೇಕಾಗಿದೆ.
ಒಮ್ಮೆ ರೀಚಾರ್ಜ್ ಯಶಸ್ವಿಯಾಗಿ ಮಾಡಿದ ನಂತರ, ಎಲ್ಲಾ ಆಫರ್ ಕೂಪನ್‌ಗಳನ್ನು ನಿಮ್ಮ ಮೈಜಿಯೋ (my jio) ಖಾತೆಗೆ ಸೇರಿಸಲಾಗುತ್ತದೆ. ಪ್ರತಿ ಕೂಪನ್ ವಿಶಿಷ್ಟವಾದ ಕೋಡ್ ಅನ್ನು ಹೊಂದಿರುತ್ತದೆ ಅದನ್ನು ನಕಲಿಸಬಹುದು ಮತ್ತು ಸಂಬಂಧಿತ ಪಾಲುದಾರ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಪೇಸ್ಟ್ ಮಾಡುವ ಮೂಲಕ ರಿಡೀಮ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








