ಜಿಯೋದಿಂದ ಮೂರು ಪ್ರಿಪೇಯ್ಡ್ ಯೋಜನೆಗಳ ಪರಿಷ್ಕರಣೆ; ಗ್ರಾಹಕರು ಶಾಕ್!
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರ ಬಳಗವನ್ನು ಹೆಚ್ಚಿಸಿಕೊಂಡಿದೆ. ಮುಖ್ಯವಾಗಿ ಸಂಸ್ಥೆಯ ಬಹುತೇಕ ಪ್ರಿಪೇಯ್ಡ್ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯಗಳಿಂದ ಗಮನ ಸೆಳೆದಿವೆ. ಅದೇ ರೀತಿ ಜಿಯೋಫೋನ್ ಬಳಕೆದಾರರಿಗಾಗಿ ಕೆಲವು ಆಕರ್ಷಕ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ಮೂರು ಯೋಜನೆಗಳನ್ನು ಪರಿಷ್ಕರಿಸಿದ್ದು ಶಾಕ್ ನೀಡಿರುವ ಜೊತೆಗೆ ಹೊಸದೊಂದು ಪ್ಲ್ಯಾನ್ ಪರಿಚಯಿಸಿದೆ.

ಹೌದು, ರಿಲಯನ್ಸ್ ಜಿಯೋ ಟೆಲಿಕಾಂ ಜಿಯೋಫೋನ್ ಬಳಕೆದಾರರಿಗಾಗಿ 155ರೂ, 186ರೂ ಮತ್ತು 749ರೂ ಪ್ರಿಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಿ ಅಚ್ಚರಿ ನೀಡಿದೆ. ಜೊತೆಗೆ ಹೊಸದಾಗಿ 152ರೂ. ಪ್ರಿಪೇಯ್ಡ್ ಯೋಜನೆಯನ್ನು ಸೇರ್ಪಡೆ ಮಾಡಿದೆ. ಹೊಸ ಯೋಜನೆಯು ಆಕರ್ಷಕ ಡೇಟಾ, ಎಸ್‌ಎಮ್‌ಎಸ್, ವಾಯಿಸ್ ಕರೆ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೆಯೇ ಪರಿಷ್ಕರಣೆ ಆದ ಯೋಜನೆಗಳಲ್ಲಿ ಉತ್ತಮ ಪ್ರಯೋಜನಗಳು ಸಿಗಲಿವೆ. ಅಂದಹಾಗೇ ಈ ಯೋಜನೆಗಳು ಜಿಯೋಫೋನ್ ಬಳಕೆ ಮಾಡುವ ಗ್ರಾಹಕರಿಗೆ ಮಾತ್ರ. ಹಾಗಾದರೇ ಜಿಯೋ 152ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್ 152ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ನೂತನ ಜಿಯೋಫೋನ್ 152ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅಗ್ಗದ ದರದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 0.5GB ಹೈ-ಸ್ಪೀಡ್ 4G ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಇದರೊಂದಿಗೆ 300 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಕಂಪನಿಯ ಎಲ್ಲಾ ಆನ್‌ಲೈನ್ ಆಧಾರಿತ ಅಪ್ಲಿಕೇಶನ್‌ಗಳಿಗೆ ಆಕ್ಸಸ್ ನೀಡುತ್ತದೆ. ಇತರೆ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೂರು ಯೋಜನೆಗಳ ದರ ಹೆಚ್ಚಳ
ಜಿಯೋಫೋನ್ 155ರೂ, 186ರೂ ಮತ್ತು 749ರೂ ಪ್ರಿಪೇಯ್ಡ್ ಯೋಜನೆಗಳ ಪರಿಷ್ಕರಣೆ ಆಗಿದ್ದು, ಬೆಲೆಯಲ್ಲಿ ಏರಿಕೆ ಆಗಿದೆ. ಪರಿಷ್ಕರಣೆ ಬಳಿಕ ಈ ಮೂರು ಯೋಜನೆಗಳ ದರ ಕ್ರಮವಾಗಿ 186ರೂ, 222ರೂ ಮತ್ತು 899ರೂ. ಆಗಿವೆ.

ಜಿಯೋಫೋನ್ 186ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ ರೀಚಾರ್ಜ್ ಯೋಜನೆಗಳಲ್ಲಿ 186ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1 GB ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್ ಲಭ್ಯ.

ಜಿಯೋಫೋನ್ 222ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ ಪ್ರಮುಖ ರೀಚಾರ್ಜ್ ಯೋಜನೆಗಳಲ್ಲಿ 222ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್ ಲಭ್ಯ.

ಜಿಯೋಫೋನ್ 899ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು
ಜಿಯೋಫೋನ್ ರೀಚಾರ್ಜ್ ಯೋಜನೆಗಳಲ್ಲಿ 899ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಆರಂಭಿಕ ಮೊಲದ 28 ದಿನಗಳ ಕಾಲ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ 50 ಎಸ್‌ಎಮ್‌ಎಸ್ ಲಭ್ಯವಾಗಲಿವೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ.


Click it and Unblock the Notifications








